ಕೇಂದ್ರ ಬಜೆಟ್ 2019 : ಅಪ್‍ಡೇಟ್ಸ್!!!

ನವದೆಹಲಿ:

      ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಅರುಣ್ ಜೇಟ್ಲಿ ಅವರ ಬದಲಿಗೆ ವಿತ್ತ ಸಚಿವ ಪಿಯೂಷ್ ಗೋಯಲ್ ಇಂದು ಮಂಡಿಸಿದ್ದಾರೆ. 

      ವಿತ್ತ ಸಚಿವ ಅರುಣ್​ ಜೇಟ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣದಿಂದಾಗಿ ಅವರ ಅನುಪಸ್ಥಿತಿಯಲ್ಲಿ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಪಿಯೂಷ್​ ಗೋಯಲ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಬಜೆಟ್​ ಅನ್ನು ಮಂಡಿಸಿದ್ದಾರೆ.

      ಅರುಣ್​ ಜೇಟ್ಲಿ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿ, ಮಧ್ಯಂತರ​ ಬಜೆಟ್​ ಮಂಡಿಸುವುದಾಗಿ ಹೇಳಿದ ಪಿಯೂಷ್​ ಗೋಯಲ್​, ಮೋದಿ ನೇತೃತ್ವದಲ್ಲಿ ಪಾರದರ್ಶಕ ಆಡಳಿತ ನೀಡಿದ್ದು, ಕಳೆದ ಐದು ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದೆ. ಆರ್ಥಿಕ ವಲಯದಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಕಳೆದ ಸರ್ಕಾರಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸರ್ಕಾರ ಹಣದುಬ್ಬರ ನಿಯಂತ್ರಣ ಮಾಡಿದೆ. ಜಿಡಿಪಿಯಲ್ಲಿ ಜಗತ್ತಿನ ಗಮನ ಸೆಳೆದಿದೆ ಎಂದು ತಿಳಿಸಿದ್ದಾರೆ.Image result for modi budget 2019

ಮೋದಿ ನೇತೃತ್ವದಲ್ಲಿ ಸ್ಥಿರ ಹಾಗೂ ಉತ್ತಮ ಸರ್ಕಾರ ನೀಡಿದ್ದೇವೆ. ದೇಶದಲ್ಲಿ ಜನರ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನಿಸಿದೆ. 2022ಕ್ಕೆ ನ್ಯೂ ಇಂಡಿಯಾ ಕಲ್ಪನೆ ನಮ್ಮ ಸರ್ಕಾರದ್ದಾಗಿದೆ ಎಂದು ಗೋಯಲ್​ ಭರವಸೆ ನೀಡಿದರು.

ಬಜೆಟ್ ನ ಮುಖ್ಯಾಂಶಗಳು:

  • ವರ್ಷಕ್ಕೆ ರೈತರ ಖಾತೆಗೆ ನೇರವಾಗಿ 6 ಸಾವಿರ ರೂ. ಜಮೆ. 3 ಕಂತುಗಳಲ್ಲಿ 2 ಸಾವಿರ ರೂ. ಜಮೆ. 2 ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ಜಮೆಯಾಗಲಿದೆ. 2018ರ ಡಿಸೆಂಬರ್ ಪೂರ್ವಾನ್ವಯವಾಗುಂತೆ ಘೋಷಣೆ
  • ಆಯುಷ್ಮಾನ್ ಯೋಜನೆಯಿಂದ 50 ಕೋಟಿ ಜನರಿಗೆ ಲಾಭವಾಗಲಿದೆ. 5 ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ವಿದೇಶಿ ಹೂಡಿಕೆ.
  • ಮಾರ್ಚ್​ ವೇಳೆಗೆ ಎಲ್ಲ ಮನೆಗಳಲ್ಲೂ ವಿದ್ಯುತ್​ ಹೊಸದಾಗಿ 21 ಏಮ್ಸ್​ ಆರಂಭ
  • ಭ್ರಷ್ಟಾಚಾರ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾರದರ್ಶಕ ಕ್ರಮ. 5.45 ಲಕ್ಷ ಗ್ರಾಮಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.
  •  ಗ್ರಾಮೀಣ ಭಾಗದಲ್ಲಿ ಶೇ.98ರಷ್ಟು ಸ್ವಚ್ಛತಾ ಅಭಿವೃದ್ಧಿ ಮಾಡಲಾಗಿದ್ದು, ಜನರ ಸಹಭಾಗಿತ್ವದಲ್ಲಿ ಸ್ವಚ್ಛತಾ ಆಂದೋಲನ ಯಶಸ್ವಿಯಾಗಿದೆ.
  • ಸೌಭಾಗ್ಯ ಯೋಜನೆಯಲ್ಲಿ ಪ್ರತಿ ಮನೆಗೂ ಉಚಿತ ವಿದ್ಯುತ್ ನೀಡಲಾಗಿದೆ. 143 ಕೋಟಿ ಎಲ್​​ಇಡಿ ಬಲ್ಬ್​ ವಿತರಣೆ ಮಾಡಲಾಗಿದೆ.
  • ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಎಂ ಪಿಂಚಣಿ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ.
  • ಇಎಸ್ ಐ ಆದಾಯ ಮಿತಿ ಏರಿಕೆ, 15 ಸಾವಿರದಿಂದ 21ಸಾವಿರಕ್ಕೆ ಮಿತಿ ಏರಿಕೆ.
  •  ಬೀದಿಬದಿ ವ್ಯಾಪಾರಿಗಳು ಹಾಗೂ ಬೀಡಿ ಕಾರ್ಮಿಕರಿಗೆ ನೆರವು. ಇದಕ್ಕಾಗಿ ಪ್ರಧಾನ್ ಮಂತ್ರಿ ಶ್ರಮ ಯೋಗಿ ಯೋಜನೆ ಜಾರಿ.
  • ವಿಮಾನಯಾನ ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗವಕಾಶ ನೀಡುವಲ್ಲಿ ಯಶಸ್ವಿ
  • ಮುದ್ರಾ ಯೋಜನೆ ಮಹಿಳೆಯರಿಗೆ ಸಾಲ ಸೌಲಭ್ಯ. ಗ್ರಾಮೀಣ ಅಭಿವೃದ್ಧಿಗೆ ಒತ್ತು.
  • ಇಡಿ ವಿಶ್ವದಲ್ಲೇ ಅತಿ ಹೆಚ್ಚು ವೇಗದಲ್ಲಿ ಹೈವೇ ನಿರ್ಮಾಣ ಭಾರತದಲ್ಲಿ ಆಗುತ್ತಿದೆ. ಪ್ರತಿ ದಿನ 26 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ.
  • ದೇಶದ ಭದ್ರತೆಗೆ ಒತ್ತು. ಕಠಿಣ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುವ ಯೋಧರಿಗೆ ವಿಶೇಷ ಭತ್ಯೆ ಹೆಚ್ಚಳ ಮಾಡಲಾಗುವುದು.  ರಕ್ಷಣಾ ಬಜೆಟ್ ಅನ್ನು 3 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮಾಡಿದ್ದೇವೆ.
  • ಭಾರತೀಯ ಚಿತ್ರರಂಗಕ್ಕೆ ಬಂಪರ್ ಕೊಡುಗೆ: ಎಲ್ಲಾ ಭಾಷೆಯ ಸಿನೇಮಾಗಳಿಗೂ ಅನುಮತಿ.
  •  ನಮ್ಮ ಅವಧಿಯಲ್ಲಿ ಮಾಸಿಕ ಮೊಬೈಲ್ ಡೇಟಾ ಬಳಕೆ ಶೇ.50 ರಷ್ಟು ಹೆಚ್ಚಳ.
  •  ದಶಕಗಳ ಕಾಲ ಬಾಕಿ ಉಳಿದಿದ್ದ ರಸ್ತೆ ಯೋಜನೆಗಳು ನಮ್ಮ ಅವಧಿಯಲ್ಲಿ ಪೂರ್ಣಗೊಂಡಿದೆ.
  • ಗ್ರಾಮಗಳು ಈಗ ಡಿಜಿಟಲ್ ಗ್ರಾಮಗಳಾಗಿ ಬದಲಾಗಿವೆ.
  • ಮೇಕ್ ಇನ್ ಇಂಡಿಯಾ ಅಡಿ 12 ಲಕ್ಷ ಯುವಕರಿಗೆ ಉದ್ಯೋಗ.
  • ನರೇಗಾ ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲು, ಗ್ರಾಮೀಣ ರಸ್ತೆಯ ನಿರ್ಮಾಣ ಮೂರು ಪಟ್ಟು ಹೆಚ್ಚಾಗಿದೆ.
  • ಕಪ್ಪು ಹಣ ನಿರ್ಮೂಲನೆ ಮಾಡಲು ಸರ್ಕಾರ ಈಗಲೂ ಬದ್ಧವಾಗಿದೆ.
  • ಮುಂದಿನ 5 ವರ್ಷದಲ್ಲಿ  5 ಟ್ರಿಲಿಯನ್  ಡಾಲರ್​​ ಆರ್ಥಿಕತೆ ಹೆಚ್ಚಳಕ್ಕೆ ಕ್ರಮ.
  •  ಪ್ರತಿಯೊಬ್ಬ ಭಾರತೀಯನೂ ಆರೋಗ್ಯದಿಂದಿರಬೇಕು ಎಂಬ ಉದ್ದೇಶದಿಂದ ಸದೃಢ ಭಾರತಕ್ಕಾಗಿ ಆಯುಷ್ಮಾನ್ ಯೋಜನೆ ಸ್ಥಾಪಿನೆ.
  •  ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುವುದು. 
  • ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ನೀತಿಗೆ ಸರ್ಕಾರ ಬದ್ಧವಾಗಿದ್ದು, ಮುಂದಿನ 10 ವರ್ಷದಲ್ಲಿ ಬಲಿಷ್ಠ ಭಾರತ ನಿರ್ಮಾಣ ಗುರಿಯನ್ನು ಹೊಂದಿದೆ.
  • SC ಅಭಿವೃದ್ಧಿಗೆ 76 ಸಾವಿರ ಕೋಟಿ ರೂಪಾಯಿಗಳು ; ST ಅಭಿವೃದ್ಧಿಗೆ 50 ಸಾವಿರ ಕೋಟಿ ರೂಪಾಯಿಗಳ ಅನುದಾನ.
  • ಉದ್ಯೋಗಿಗಳಿಗೆ ಬಂಪರ್​ ಆಫರ್​ : 5 ಲಕ್ಷದವರೆಗೆ ಸಂಬಳ ಪಡೆಯುವವರು ತೆರಿಗೆ ಕಟ್ಟಬೇಕಾಗಿಲ್ಲ. ಇದರಿಂದ 3 ಕೋಟಿ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲ.2.5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು ಈಗ ಇದನ್ನು 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಈ ಮೂಲಕ ಸರ್ಕಾರ ಮಧ್ಯಮ ವರ್ಗಕ್ಕೆ ರಿಲೀಫ್​ ನೀಡಿದೆ.
  •  ಗೃಹ ಸಾಲ 2 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ.
  • ಶೈಕ್ಷಣಿಕ ಸಾಲ ಪಡೆದವರಿಗೆ ತೆರಿಗೆ ಪಾವತಿಯಿಂದ ವಿನಾಯಿತಿ. ಟಿಡಿಎಸ್​ ಮಿತಿ ಹೆಚ್ಚಳ. ಟಿಡಿಎಸ್​ ಮಿತಿ 10 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಳ.

 

Recent Articles

spot_img

Related Stories

Share via
Copy link
Powered by Social Snap