ತುಮಕೂರು:
ಶ್ರೀ ಸಿದ್ದಗಂಗಾ ಮಠದ ಡಾ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿ ಅವರು ಇಂದು ಬೆಳಗ್ಗೆ 11.45 ಕ್ಕೆ ದೈವಾದೀನರಾಗಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀಗಳ ನಿಧನ ನಮ್ಮ ರಾಜ್ಯದ ಪ್ರಮುಖ ಯಾತ್ರಾ ಕ್ಷೇತ್ರ ಮತ್ತು ಸಿದ್ಧಿ ಕ್ಷೇತ್ರವಾದ ಕೋಟ್ಯಾಂತರ ಭಕ್ತ ಸಮೂಹಕ್ಕೆ ದಾರಿ ತೋರಿಸುವ ದಾರಿ ದೀಪವನ್ನು ಕಳೆದುಕೊಂಡಂತಾಗಿದೆ.
ಶ್ರೀಗಳ ಆರೋಗ್ಯವೃದ್ಧಿಗಾಗಿ ರಾಜ್ಯಾಧ್ಯಂತ ಭಕ್ತರು ಮಾಡಿದಂತಹ ಯಾವ ಪೂಜೆಯೂ ಫಲಿಸಲಿಲ್ಲ. ತಾವು ಆರೋಗ್ಯವಾಗಿದ್ದ ಅಷ್ಟೂ ದಿನ ಜನರ ಸೇವೆಗೆಂದು ಮುಡಿಪಾಗಿದ್ದ ಶ್ರೀಗಳು ತಮ್ಮ ಕೊನೆಯ ದಿನಗಳನ್ನು ಮಠದಲ್ಲಿ ಕಳೆಯಬೇಕೆಂದು ಇಚ್ಚಿಸಿದ್ದರು ಎಂದು ಅವರ ಉತ್ತರಾಧಿಕಾರಿಗಳು ಸಿದ್ಧಲಿಂಗ ಶ್ರೀಗಳು ತಿಳಿಸಿದ್ದಾರೆ.
ಶ್ರೀಗಳಿಗೆ ಚೆನ್ನೈನಲ್ಲಿ ಮಾಡಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು ಮತ್ತು ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೆ ಮಠಕ್ಕೆ ಕರೆತರಲಾಗಿತ್ತು ಅಂದಿನಿಂದ ಅವರನ್ನು ಪ್ರಧೂಷಣೆ ರಹಿತ ಕೊಠಡಿಯಲ್ಲಿ ಇರಿಸಲಾಗಿತ್ತು.
ಆದರೆ, ಶ್ರೀಗಳಿಗೆ ಸ್ವಂತ ಉಸಿರಾಟ ಶಕ್ತಿ ಕಡಿಮೆ ಇರುವುದರಿಂದ ಕೃತಕ ಉಸಿರಾಟ ಮುಂದುವರಿಸುವ ಅವಶ್ಯಕತೆ ಇತ್ತು. ಶ್ರೀಗಳಿಗೆ ನಿಶ್ಯಕ್ತಿ ಇದ್ದು, ಬೆನ್ನು ಬಾಗಿರುವುದರಿಂದ ಶ್ವಾಸ ಕೋಶದ ಮೇಲೆ ಪರಿಣಾಮ ಬೀರುತ್ತಿತ್ತು. ಇದರಿಂದಾಗಿ ಉಸಿರಾಟಕ್ಕೆ ತೊಂದರೆಯಾಗುತ್ತಿರುವ ಕಾರಣ ಶ್ರೀಗಳಿಗೆತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು.
ಮಠಕ್ಕೆ ಕರೆದುಕೊಂಡು ಹೋಗಿ ಎಂದು ಸೂಚನೆ ನೀಡುತ್ತಿದ್ದರು. ಸಭೆ ನಡೆಸಿ ನಿರ್ಧಾರ ಮಾಡಿ ಬುಧವಾರ(ಜ.16) ಬೆಳಗ್ಗೆ 3.50 ಸುಮಾರಿಗೆ ಸಿದ್ಧಗಂಗಾ ಆಸ್ಪತ್ರೆಯಿಂದ ಶ್ರೀಗಳನ್ನು ವೈದ್ಯರು ಮಠಕ್ಕೆ ಸ್ಥಳಾಂತರಿಸಲಾಗಿತ್ತು. ಸಿದ್ಧಗಂಗಾ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆಯನ್ನೇ ಮಠದಲ್ಲಿ ಮುಂದುವರೆಸಲಾಗುತ್ತಿತ್ತು. ಆದರೆ ನೀಡಿದ ಚಿಕಿತ್ಸೆಗೆ ಅವರ ಶರೀರ ಸ್ಪಂದಿಸದೆ ತೀರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ