ಚಿತ್ರದುರ್ಗ: 
ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಅವರು ಸಿದ್ದರಾಮಯ್ಯ ಅವರು ತಮ್ಮ ಸ್ವಲಾಭಕ್ಕಾಗಿ ಜನರ ದಿಕ್ಕು ತಪ್ಪಿಸಿ ಬಳ್ಳಾರಿ ಅಭಿವೃದ್ಧಿ ಮಾಡಲಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ನನ್ನ ಅಮೂಲ್ಯ ಜೀವನದ 4 ವರ್ಷದ ಸಮಯವನ್ನು ಜೈಲಿನಲ್ಲಿ ಕಳೆಯುವಂತೆ ಮಾಡಿದ್ರು. ನನ್ನ ವಿರುದ್ಧ ಎಷ್ಟು ಸಾವಿರ ಕೋಟಿಗೆ ಚಾರ್ಜ್ ಶೀಟ್ ಹಾಕಿದ್ದಾರೆ ಎನ್ನುವುದನ್ನು ಜನರ ಮುಂದೆ ಇಡಲಿ. ನೂರು ಕೋಟಿ ಚಾರ್ಜ್ ಶೀಟ್ ಹಾಕಿ ಜನರನ್ನ ದಿಕ್ಕು ತಪ್ಪಿಸಿದ್ರು ಅಂತ ಹೇಳಿದ್ದಾರೆ.
ಮೊಳಕಾಲ್ಮೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ದನ ರೆಡ್ಡಿ, ನಾನು ನನ್ನ ಬಳ್ಳಾರಿಯ ಜನತೆಯಿಂದ 7 ವರ್ಷಗಳಿಂದ ದೂರ ಇದ್ದೇನೆ. ಬಳ್ಳಾರಿ ಜನರನ್ನ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತದೆ. ಶ್ರೀರಾಮುಲು ಒಂಟಿಯಾಗಿ ಹೋರಾಟ ಮಾಡುತ್ತಿದ್ದಾರೆ. ರಾಮುಲು ಒಂಟಿಯಾಗಿದ್ರೂ ಬಳ್ಳಾರಿ ಜನರು ಅವರನ್ನ ಮನೆ ಮಗನಂತೆ ಜೋಪಾನ ಮಾಡುತ್ತಿದ್ದಾರೆ ಮತ್ತು ಮನೆ ಮಗನನ್ನ ಕೈಬಿಡಲ್ಲ ಅನ್ನೋ ನಂಬಿಕೆಯಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








