ಮಂಡ್ಯ:
ಸಾಲಬಾಧೆಯಿಂದ ಬೇಸತ್ತು ಜಿಲ್ಲೆಯ ರೈತ ಕುಟುಂಬವೊಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ನಂದೀಶ್(40), ಕೋಮಲ(32) ಪುತ್ರಿ ಚಂದನಾ(13) ಹಾಗೂ ಪುತ್ರ ಮನೋಜ್(11) ಮೃತ ದುರ್ದೈವಿಗಳು. ಸಾಲಭಾದೆಯಿಂದ ತತ್ತರಿಸಿರುವ ಕುಟುಂಬ, ತಮ್ಮ ಜಮೀನಿನ ಬಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ನಂದೀಶ್ ಅವರ ತಂದೆ ಕೆಂಪೇಗೌಡ ಹೆಸರಿನಲ್ಲಿ ಸುಮಾರು 3 ಎಕರೆ ಜಮೀನು ಇದೆ. ನಂದೀಶ್ ಕೆಂಪೇಗೌಡರ ಏಕೈಕ ಪುತ್ರನಾಗಿದ್ದ ಕಾರಣ ಜಮೀನಿನ ಎಲ್ಲಾ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದ್ದು, ಬೇಸಾಯ ಮಾಡಲು ಸುಮಾರು 10 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಸುಂಕಾತೊಣ್ಣೂರು ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 4.50 ಲಕ್ಷ ರೂಪಾಯಿ ಬೆಳೆಸಾಲ, ಸುಮಾರು 6 ಲಕ್ಷ ರೂಪಾಯಿ ಕೈಸಾಲ ಹಾಗೂ ಚಿಕ್ಕಾಡೆ ವಿಜಯ ಬ್ಯಾಂಕ್ ನಲ್ಲಿ ಚಿನ್ನಾಭರಣ ಅಡಮಾನವಿಟ್ಟು ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
