ಮತ್ತೊಂದು ಸಾಧನೆ ಮಾಡಿದ BMRCL……!

ಬೆಂಗಳೂರು

    ಸಾರಿಗೆ ವಿಷಯದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಸಾವಿರಾರು ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಇದರಿಂದ ಹಸಿರು ಹೊದಿಕೆಯ ನಷ್ಟು ಉಂಟಾಗಿದೆ. ಸಾಧ್ಯವಾದಷ್ಟು ಇದನ್ನು ಸರಿಪಡಿಸಲು ಹಾಗೂ ತನ್ನ ಯೋಜನೆಗಾಗಿ ಮರಕ್ಕೆ ಕೊಡಲಿ ಹಾಕಿದ್ದ ನಮ್ಮ ಮೆಟ್ರೋ (Namma Metro) ಬರೋಬ್ಬರಿ 15000 ಸಸಿಗಳನ್ನು ನೆಡುವುದಾಗಿ ತಿಳಿಸಿದೆ.

    ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತನ್ನ ಮೆಟ್ರೋ 2ನೇ ಹಂತ ಯೋಜನೆಗಾಗಿ ಅನೇಕ ಮರಗಳನ್ನು ಧರೆಗುರುಳಿಸಿತ್ತು. ಇದಕ್ಕೆ ಪರ್ಯಾಯ ಪರಿಹಾರ ಮಾರ್ಗವಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮೂರು ಹಂತಗಳಲ್ಲಿ ಸಸಿ ನೆಟ್ಟು ಬೆಳೆಸಲು ಪ್ಲಾನ್ ಮಾಡಿದೆ.

    ಒಂದೊಂದು ಹತ್ತದಲ್ಲಿ ಒಟ್ಟು 5000 ಸಸಿಗಳನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ನೆಡಲಿದೆ. ಈ ಸಸಿ ನೆಡುವ ಪೂರ್ತಿ ಯೋಜನೆಗೆ 76ಕೋಟಿ ರೂಪಾಯಿ ವ್ಯಯಿಸಲಿದೆ ಎಂದು ‘ಕನ್ನಡಪ್ರಭ’ ವರದಿ ಮಾಡಿದೆ. ಆದಷ್ಟು ಶೀಘ್ರವೇ ಸಸಿ ನೆಡುವ ಕಾರ್ಯಕ್ಕೆ BMRCL ಚಾಲನೆ ನೀಡಲಿದೆ.

     ಮೊದಲ ಹಂತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದಾಬಾಸ್‌ಪೇಟೆ ಕೈಗಾರಿಕೆ ಪ್ರದೇಶ ಅಕ್ಕಪಕ್ಕ ಹಾಗೂ ಬೆಂಗಳೂರು ಸುತ್ತಮುತ್ತ ಐದು ಸಾವಿರ ಸಸಿ ನೆಡಲು ಯೋಜಿಸಿದೆ. ನಂತರ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಮತ್ತು ಮೂರನೇ ಹಂತದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ಉದ್ಯಾನ, ಬಫರ್ ವಲಯ, ಸುತ್ತಮುತ್ತಲಿನ ಸರ್ಕಾರ ಜಾಗಗಳನ್ನು ಗುರುತಿಸಿ ಅಲ್ಲಿ ಸಸಿ ನೆಟ್ಟು ಪೋಷಿಸಲಾಗುವುದು.

    ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆ 2 ಹಾಗೂ ಅದರ 2ಎ ಯೋಜನೆ ಕಾಮಗಾರಿಗಾಗಿ ಸಾವಿರಾರು ಮರಗಳಿಗೆ ಕೊಡಲಿ ಹಾಕಲಾಗಿತ್ತು. 1190 ಮರಗಳನ್ನು ಸ್ಥಳಾಂತರ ಮಾಡಲಾಗಿದ್ದು, ಈ ಪೈಕಿ ಮರಗಳನ್ನು ಕಡಿದಿದ್ದೇ ಹೆಚ್ಚು. ಒಂದೆರಡು ವಾರಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಈ ವೇಳೆ ಸಸಿ ನೆಟ್ಟರೆ ಅನುಕೂಲವಾಗಲಿದೆ. ಈ ಸಂಬಂಧ ಕರೆದ ಟೆಂಡರ್‌ನಲ್ಲಿ ಪರಿಸರ ಬಗ್ಗೆ ಕಾಳಜಿ ಇರುವ ಕೆಲವು ಸಂಸ್ಥೆಗಳು ಪಾಲ್ಗೊಂಡಿವೆ.

    ಈ ಸಂಸ್ಥೆಗಳೇ ಸೂಕ್ತ ವ್ಯವಸ್ಥೆಗಳ ಮೂಲಕ ಸ್ಥಳ ಗುರುತಿಸುವುದು, ಸಸಿ ನೆಡುವ ಕಾರ್ಯ ಮಾಡಲಿದ್ದಾರೆ. ಸದ್ಯ ವಿಸ್ತರಣೆಗೊಳ್ಳುತ್ತಿರುವ ನಮ್ಮ ಮೆಟ್ರೋ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳಲ್ಲಿ ಕಾಮಗಾರಿ ಸಂಬಂಧ ಒಟ್ಟು 750 ಮರಗಳ ಕೊಂಬೆಗಳನ್ನು ಕತ್ತರಿಸಲು ಮೆಟ್ರೋ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap