ಅಭಿವೃದ್ದಿ ಪೂರಕ ಹಾಗೂ ಚಲನಶೀಲ ಬಜೆಟ್: ಗೃಹ ಸಚಿವ ಆರಗ ಜ್ಞಾನೇಂದ್ರ .

ಬೆಂಗಳೂರು:

ಮಾರ್ಚ್ ೪ ಮುಖ್ಯಮಂತ್ರಿ ಶ್ರಿ ಬಸವರಾಜ್ ಬೊಮ್ಮಾಯಿ ಅವರು, ಮಂಡಿಸಿದ 2022-23 ಸಾಲಿನ ಆಯವ್ಯಯ, ರಾಜ್ಯದ ಎಲ್ಲಾ ಭಾಗಗಳ ಸಮಗ್ರ ಅಭಿವೃದ್ದಿ ದೃಷ್ಟಿಕೋನ ವನ್ನು ಹೊಂದಿದ್ದು, ಪ್ರಗತಿಗೆ ಪೂರಕವಾಗಿದೆ.

ಇದೊಂದು, ಅಭಿವೃದ್ಧಿ ಪೂರಕ,
ಚಲನಶೀಲ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಭರವಸೆ ಮೂಡಿಸುವ ಆಯವ್ಯಯ ವಾಗಿದೆ.

ಮಾರಕ ಕರೋನ ಸಾಂಕ್ರಮಿಕ. ರೋಗದಿಂದ, ಕರ್ನಾಟಕವೂ ಸೇರಿದಂತೆ ಇಡೀ ವಿಶ್ವವೇ ಆರ್ಥಿಕವಾಗಿ ತತ್ತರಿಸಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯವರು, ತಮಗಿರುವ ಅಪಾರ ಆಡಳಿತ ಜ್ಞಾನ ಹಾಗೂ ಸಾಂವಿಧಾನಿಕ ಅನುಭವದ ಸ್ಪರ್ಶವನ್ನು ಆಯವ್ಯಯದಲ್ಲಿ ಕಾಣಿಸಿದ್ದಾರೆ.

ಅಭಿವೃದ್ಧಿಯಲ್ಲಿ ಇಡೀ ರಾಷ್ಟ್ರದಲ್ಲಿಯೇ ಮುಂಚೂಣಿ ರಾಜ್ಯ ವಾಗಿರುವ ಕರ್ನಾಟಕವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು, ಆರ್ಥಿಕತೆಯ ಬೆನ್ನೆಲುಬಾಗಿರುವ, ಮಾನವ ಸಂಪನ್ಮೂಲ, ಇಂಧನ, ನೀರವಾರಿ, ಕೈಗಾರಿಕೆ,

ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಹಿಂದುಳಿದ, ಪರಿಶಿಷ್ಟ ಜಾತಿ ಜನಾಂಗ ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ದಿ ಕಾರ್ಯಗಳಿಗೆ, ಹೊಸ ಚೈತನ್ಯ ಒದಗಿಸುವ ನಿಟ್ಟಿನಲ್ಲಿ ಈ ಆಯವ್ಯಯ, ಭರವಸೆಯ ಬೆಳಕು ಎನಿಸಲಿದೆ.

ತೆರಿಗೆ ಪ್ರಸ್ತಾವನೆ:

• 2022-23ರಲ್ಲಿ ಯಾವುದೇ ತೆರಿಗೆ ಹೆಚ್ಚಳ ಇಲ್ಲ.
• 2022-23ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಗೆ 77,010 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15,000 ಕೋಟಿ ರೂ., ರಾಜ್ಯ ಅಬಕಾರಿ ಇಲಾಖೆಗೆ 29,000 ಕೋಟಿ ರೂ. ಹಾಗೂ ಸಾರಿಗೆ ಇಲಾಖೆಗೆ 8,007 ಕೋಟಿ ರೂ.ಗಳ ತೆರಿಗೆ ಸಂಗ್ರಹ ಗುರಿ ನಿಗದಿ.

 ಆಯವ್ಯಯ ಪಕ್ಷಿನೋಟ
• ಆಯವ್ಯಯ ಗಾತ್ರ (ಸಂಚಿತ ನಿಧಿ)- 2,65,720 ಕೋಟಿ ರೂ.
• ಒಟ್ಟು ಸ್ವೀಕೃತಿ – 2,61,977 ಕೋಟಿ ರೂ.; ರಾಜಸ್ವ

ಸ್ವೀಕೃತಿ – 1,89,888 ಕೋಟಿ ರೂ.; ಸಾರ್ವಜನಿಕ
ಋಣ – 72,000 ಕೋಟಿ ರೂ. ಸೇರಿದಂತೆ ಬಂಡವಾಳ
ಸ್ವೀಕೃತಿ – 72,089 ಕೋಟಿ ರೂ.

• ಒಟ್ಟು ವೆಚ್ಚ – 2,65,720 ಕೋಟಿ ರೂ.; ರಾಜಸ್ವ

ವೆಚ್ಚ – 2,04,587 ಕೋಟಿ ರೂ.; ಬಂಡವಾಳ
ವೆಚ್ಚ – 46,955 ಕೋಟಿ ರೂ. ಹಾಗೂ ಸಾಲ
ಮರುಪಾವತಿ – 14,179 ಕೋಟಿ ರೂ.

• ವಿವಿಧ ವಲಯಗಳಿಗೆ ಒದಗಿಸಲಾದ ಆಯವ್ಯಯ:

1. ಕೃಷಿ ಮತ್ತು ಪೂರಕ ಚಟುವಟಿಕೆಗಳು-33,700
ಕೋಟಿ ರೂ.
2. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ- 68,479 ಕೋಟಿ ರೂ.
3. ಆರ್ಥಿಕ ಅಭಿವೃದ್ಧಿಗೆ ಉತ್ತೇಜನ- 55,657 ಕೋಟಿ ರೂ.
4. ಬೆಂಗಳೂರು ಸಮಗ್ರ ಅಭಿವೃದ್ಧಿ- 8,409 ಕೋಟಿ ರೂ.
5. ಸಂಸ್ಕøತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ- 3,102 ಕೋಟಿ ರೂ.
6. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ- 56,710 ಕೋಟಿ ರೂ.

• ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಆಯವ್ಯಯದಲ್ಲಿ ಒದಗಿಸಿದ ಅನುದಾನ 43,188 ಕೋಟಿ ರೂ.

• ಮಕ್ಕಳ ಅಭ್ಯುದಯಕ್ಕೆ ಆಯವ್ಯಯದಲ್ಲಿ ಒದಗಿಸಿದ ಅನುದಾನ 40,944 ಕೋಟಿ ರೂ.

• ಎಸ್‍ಸಿಎಸ್‍ಪಿ/ಟಿಎಸ್‍ಪಿಗೆ ಆಯವ್ಯಯದಲ್ಲಿ ಒದಗಿಸಿದ ಅನುದಾನ 28,234 ಕೋಟಿ ರೂ.; ಹಿಂದಿನ ವರ್ಷಕ್ಕಿಂತ 2,229 ಕೋಟಿ ರೂ. ಹೆಚ್ಚಳ.

• ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಇತರ ಜನ ಕಲ್ಯಾಣ ಕಾರ್ಯಕ್ರಮಗಳಿಗೆ 6,329 ಕೋಟಿ ಹೆಚ್ಚುವರಿ ಅನುದಾನ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap