ಆಸ್ಪತ್ರೆಯ ಮುಂಭಾಗ ಗುತ್ತಿಗೆ ನೌಕರರ ಪ್ರತಿಭಟನೆ …!!

ಮಧುಗಿರಿ :

        ಖಾಸಗಿ ಕಂಪನಿಯೊಂದು ಕಳೆದ ಮೂರು ತಿಂಗಳಿನಿಂದ ಗುತ್ತಿಗೆ ನೌಕರರಿಗೆ ವೇತನ ನೀಡುತ್ತಿಲ್ಲವೆಂದು ಕೆಲಸ ಕಾರ್ಯಗಳಿಂದ ದೂರ ಉಳಿದ ಗುತ್ತಿಗೆ ನೌಕರರು ಗುರುವಾರ ಆಸ್ಪತ್ರೆಯ ಮುಂಭಾಗ ಶಾಂತಿಯುತವಾಗಿ ಪ್ರತಿಭಟಿಸಿದರು.

       ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಒಂದೂ ವರ್ಷದಿಂದ ಬೆಂಗಳೂರಿನ ಡಿಟೇಟ್ಕ್ ವೆಲ್ ಎಂಬ ಬೆಂಗಳೂರಿನ ಖಾಸಗಿ ಕಂಪನಿಯೊಂದು ಆಸ್ಪತ್ರೆಯ ಸ್ವಚ್ಚತೆ ಸೇರಿದಂತೆ ಮತ್ತಿತರರ ಕೆಲಸ ಕಾರ್ಯಗಳನ್ನು ಮಾಡುವ ಗುತ್ತಿಗೆಯನ್ನು ಪಡೆದಿದ್ದು ಜಿಲ್ಲೆಯ ಕೆಲವು ಕಡೆ ಈ ಖಾಸಗಿ ಕಂಪನಿಯು ಸರಕಾರದ ಜೊತೆ ಮಾಡಿಕೊಂಡ ಒಪ್ಪಂದಂತೆ ಸರಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

        ಮಧುಗಿರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 25 ಜನ ಗುತ್ತಿಗೆ ಕಾರ್ಮಿಕರಿದ್ದು ಕೆಲವರಿಗೆ ಮಾತ್ರ ಒಂದು ರೀತಿಯ ವೇತನ ಹಾಗೂ ಮತ್ತೆ ಕೆಲವರಿಗೆ ಡಿ ಗ್ರೂಪ್ ಕಾರ್ಮಿಕರ ವೇತನ ನೀಡುತ್ತಿದ್ದಾರೆಂದು ಹಾಗೂ ಕೆಲವರಿಗೆ ಗುರುತಿನ ಪತ್ರವನ್ನು ಸಹ ನೀಡಿಲ್ಲ ಮತ್ತು ಸರಿಯಾದ ಸೌಲಭ್ಯಗಳನ್ನು ಒದಗಿಸಿಕೊಟ್ಟಿಲ್ಲ. ಕಳೆದ ಮೂರು ತಿಂಗಳಿನಿಂದ ನಮ್ಮ ಜೊತೆಯಲ್ಲಿ ಕಂಪನಿಯ ಜಿಲ್ಲಾ ಸೂಪರ್ ವೈಜರ್, ಲೋಕೇಶ್ ಎನ್ನುವವರು ಇಲ್ಲದ ಸಬೂಬುಗಳನ್ನು ಹೇಳುತ್ತಾ ವೇತನ ನೀಡದೆ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ.

          ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು ಶೌಚಾಲಯ ಹಾಗೂ ಮತ್ತಿತರರ ಕಡೆಗಳಲ್ಲಿ ರೋಗಿಗಳು ನೀರಿಲ್ಲದೆ ಪರಿತಪಿಸುವಂತಹ ವಾತವರಣ ಎದುರಾಗಿದೆ ಸ್ವಚ್ಚತೆಗೂ ನೀರಿದಲ್ಲಂತಾಗಿದೆ ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಕಾರ್ಯನಿರ್ವಹಿಸಬೇಕು ಇತ್ತಾ ನೀರು ಇಲ್ಲಾ ಸಂಬಳವು ಇಲ್ಲಾ ನಮ್ಮಗಳ ಮನೆಗಳಲ್ಲಿನ ಮಕ್ಕಳಿಗೆ ಕುಡಿಯಲು ಹಾಲು ಕೊಡಂತಹ ವಾತವರಣವಿದೆ ಮಾಲೀಕರು ಮನೆ ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ ಮಾನವೀಯತೆಯಿಂದಾಗಿ ಇಷ್ಟೊಂದು ದಿನಗಳು ಕಾರ್ಯ ನಿರ್ವಹಿಸಿದ್ದೇವೆ.ಇದೇ ಕೆಲಸವನ್ನು ನಂಬಿಕೊಂಡಿದ್ದೇವೆ ಕಂಪನಿಯ ಈ ವರ್ತನೆಯಿಂದಾಗಿ ಪ್ರತಿಭಟನೆಯ ದಾರಿ ಹಿಡಿಯಬೇಕಾಯಿತು. ನಾವು ಮತ್ತೆಲ್ಲಿ ಹೋಗಲು ಸಾಧ್ಯ ಎಂದು ತಮ್ಮ ಆಳಲನ್ನು ತೋಡಿಕೊಂಡರು.

          ಆಡಳಿತ ವೈದ್ಯಾಧಿಕಾರಿ ಗಂಗಾಧರ್ ಮಾತನಾಡಿ ಸಮಸ್ಯೆಯ ಬಗ್ಗೆ ಡಿಹೆಚ್‍ಓ ರವರ ಗಮನಕ್ಕೆ ತರಲಾಗಿದೆ ಆದಷ್ಟೂ ಬೇಗಾ ಗುತ್ತಿಗೆ ನೌಕರರಿಗೆ ಇನ್ನೆರಡು ದಿನಗಳಲ್ಲಿ ಸಂಭಂಧಪಟ್ಟವರಿಂದ ವೇತನ ಮಂಜೂರು ಮಾಡಿಸಿ ಕೊಡಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

          ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಶಿವಕುಮಾರ್.ಎ. ಮಾತನಾಡಿ ಸಾರ್ವಜನಿಕರಿಗೆ ತೊದರೆಯಾಗದಂತೆ ಗುತ್ತಿಗೆ ನೌಕರರು ಕ್ರಮವಹಿಸಬೇಕು ಇಷ್ಟೊಂದು ತಿಂಗಳು ಮಾನವೀಯತೆ ಕಾರ್ಯನಿರ್ವಹಿಸಿದ್ದಾರೆ ಈ ಕೊಡಲೇ ಸಂಭಂಧಪಟ್ಟ ಕಂಪನಿಯವರು ಮತ್ತು ಅಧಿಕಾರಿಗಳು ವೇತನವನ್ನು ಮಂಜೂರು ಮಾಡಿಸಿ ಕೊಡಬೇಕು ಇಲ್ಲವಾದರೆ ಆಸ್ಪತ್ರೆಯ ಮುಂದೆಯೇ ಕಂಪನಿಯ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು.ಪ್ರತಿಭಟನೆಯಲ್ಲಿ ದುರ್ಗಾಪ್ರಸಾದ್, ರವಿ, ಮಂಜುನಾಥ್, ವಿರೇಂದ್ರ, ಹರೀಶ್, ಲಕ್ಷ್ಮಮ್ಮ, ಶಾರದಮ್ಮ, ಕಮಲಮ್ಮ ,ಗೌರಮ್ಮ, ನಾಗರತ್ನಮ್ಮ, ಸೌಮ್ಯಶ್ರೀ, ಸೇರಿದಂತೆ ಗುತ್ತಿಗೆ ಕಾರ್ಮಿಕರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link