ಬೆಂಗಳೂರು:
ನಗರದಲ್ಲಿ ನೋ ಪಾರ್ಕಿಂಗ್ ( No Parking ) ಸ್ಥಳದಲ್ಲಿನ ವಾಹನಗಳನ್ನು ಟೋಯಿಂಗ್ ( towing ) ಮಾಡುವ ವ್ಯವಸ್ಥೆ ಪುನರ್ ಪರಿಶೀನೆ ಸಂಬಂಧ, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಕುರಿತಂತೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಹಲಸೂರು ಗೇಟ್ ಸಂಚಾರಿ ಠಾಣೆಯ ಎಎಸ್‌ಐ ಒಬ್ಬರು ದಿವ್ಯಾಂಗ ಮಹಿಳೆಯನ್ನು ಬೂಟು ಕಾಲಿನಿಂದ ಒದ್ದು, ಕೂದಲು ಹಿಡಿದು ಎಳೆದಾಡಿದ ಘಟನೆಯ ನಂತ್ರ, ಎಎಸ್‌ಐ ಅಮಾನತುಗೊಳಿಸಲಾಗಿತ್ತು. ಈ ಪ್ರಕರಣ ಸಂಬಂದ ಸುದ್ದಿಗಾರರೊಂದಿಗೆ ಮಾತನಾಡಿದ್ದಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಟೋಯಿಂಗ್ ನಡೆಸುವ ವೇಳೆ ಅತಿರೇಕದ ವರ್ತನೆಯ ದೂರುಗಳು ಬರುತ್ತಿವೆ. ಈ ಹಿಂದೆ ಟೋಯಿಂಗ್ ವ್ಯವಸ್ಥೆ ಪೊಲೀಸ್ ಇಲಾಖೆಯ ಬಳಿಯೇ ಇತ್ತು. ಈಗಿರುವ ವ್ಯವಸ್ಥೆ ಪುನರ್ ಪರಿಶೀಲನೆ ನಡೆಸಲಾಗುತ್ತದೆ ಎಂದಿದ್ದರು.
ಟೋಯಿಂಗ್ ಬಗ್ಗೆ ಈಗಿರುವ ವ್ಯವಸ್ಥೆ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುತ್ತಿದೆ. ಇಲಾಖೆಯೇ ಇದನ್ನು ಮಾಡುತ್ತಿತ್ತು, ಈಗ ಖಾಸಗಿ ಯವರಿಗೆ ಗುತ್ತಿಗೆ ನೀಡಲಾಗಿದೆ. ಹಲವಾರು ಘಟನೆಗಳ ಬಗ್ಗೆ ಗಮಣಿಸಲಾಗಿದ್ದು, ಸಾರ್ವಜನಿಕರು ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಆದರೆ ಕಾನೂನಿನ ರಕ್ಷಣೆ ಮಾಡುವವರು ಸಾರ್ವಜನಿಕರೊಂದಿಗೆ ಅತ್ಯಂತ ಸೌಹಾರ್ದಯುತವಾಗಿ ವರ್ತಿಸಬೇಕು.
ಅತಿರೇಕದ ವರ್ತನೆ ಸಹಿಸುವುದಿಲ್ಲ. ಈ ಬಗ್ಗೆ ಇಂದು ಪೊಲೀಸ್ ಆಯುಕ್ತರು, ಪೊಲೀಸ್ ಮಹಾ ನಿರ್ದೇಶಕರು ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಸಂಪೂರ್ಣವಾಗಿ ಪುನರ್ ಪರಿಶೀಲನೆ ಮಾಡಲು ತೀರ್ಮಾನಿಸಲಾಗಿದೆ. ಹಲವಾರು ಬದಲಾವಣೆಗಳನ್ನು ತಂದು ಜನಸ್ನೇಹಿಯಾಗಿಸಲಿದ್ದೇವೆ ಎಂದರು.
ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಪೊಲೀಸ್ ಇಲಾಖೆಯ ಬಳಿಯಲ್ಲಿಯೇ ಇದ್ದಂತ ಟೋಯಿಂಗ್ ವ್ಯವಸ್ಥೆಯನ್ನು, ಖಾಸಗಿಯವರಿಗೆ ನೀಡಲಾಗಿದ್ದರಿಂದ ಉಂಟಾಗುತ್ತಿರುವಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಜೊತೆಗೆ ಖಾಸಗಿ ಟೋಯಿಂಗ್ ವ್ಯವಸ್ಥೆ ರದ್ದು ಪಡಿಸೋ ಸಂಬಂಧವೂ ಚರ್ಚೆ ನಡೆದು, ಖಾಸಗಿಯವರಿಗೆ ನೀಡುವಂತ ಟೋಯಿಂಗ್ ವ್ಯವಸ್ಥೆಯನ್ನು ರದ್ದು ಪಡಿಸೋ ತೀರ್ಮಾನ ಕೂಡ ಕೈಗೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ