ಜಕಾರ್ತಾ:
9ನೇ ದಿನದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಹಂತದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಭಾನುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ರಚನೊಕ್ ಇಂಟನಾನ್ ಅವರನ್ನು 21–18, 21–16ರ ನೇರ ಗೇಮ್‌ಗಳಿಂದ ಸೋಲಿಸಿದ ಸೈನಾ ಸೆಮಿಫೈನಲ್ ಪ್ರವೇಶಿಸಿದ್ದರು.
ನಂಬರ್ ಒನ್ ಶ್ರೇಯಾಂಕಿತೆ ತೈವಾನ್‌ನ ತಾಯ್ ತ್ಸು ಯಿಂಗ್ ವಿರುದ್ಧ 21-17, 21-14 ನೇರ ಸೆಟ್‌ಗಳಿಂದ ಸೈನಾ ಪರಾಭವಗೊಂಡರು.
ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಸೈನಾ ಫೈನಲ್ ಪ್ರವೇಶಿಸುವ ಭರವಸೆ ಮೂಡಿಸಿದ್ದರು. ಆದರೆ, ಸೋಮವಾರದ ಪಂದ್ಯದಲ್ಲಿ ತ್ಸು ಯಿಂಗ್ ಅವರ ಚುರುಕಿನ ಆಟದ ಎದುರು ಸೈನಾ ಮಂಕಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
