ಕನ್ನಡದ ಚಾರ್ಲಿ 777 ರೀತಿಯಲ್ಲಿ ಲಡಾಕ್ ಗೆ ಟ್ರಿಪ್ ಹೊರಟ ಕೇರಳದ ಯುವಕ

ಬೆಂಗಳೂರು : ಚಾರ್ಲಿ 777 ಸಿನಿಮಾ ರೀತಿಯಲ್ಲಿ ಯುವಕ ಶ್ವಾನದ ಜೊತೆ ತನ್ನ ಬೈಕ್‍ನಲ್ಲಿ ಲಡಾಕ್ ಟ್ರಿಪ್‍ಗೆ ಹೊರಟ ಘಟನೆ ನಡೆದಿದೆ.
ಕೇರಳ ಮೂಲದ ಸುಧೀಶ್ ಎಂಬುವವನು ನಾಯಿ ಜೊತೆಗೆ ಲಾಂಗ್ ಟ್ರಿಪ್‍ ಕೈಗೊಂಡಿದ್ದಾನೆ. ಸುಧೀಶ್ ತನ್ನ ಬೈಕ್‍ನಲ್ಲಿ ಪ್ರೀತಿಯ ಶ್ವಾನವನ್ನು ಕೂರಿಸಿಕೊಂಡು ಲಡಾಕ್ ಟ್ರಿಪ್ ಹೊರಟಿದ್ದಾನೆ.
ಕೇರಳದಿಂದ ಲಡಾಕ್‍ಗೆ ಟ್ರಿಪ್ :
ಸರಿಸುಮಾರು 8,000 ಕಿ.ಮೀ ದೂರವಿದ್ದು, ತನ್ನ ನೆಚ್ಚಿನ ಶ್ವಾನದ ಜೊತೆಗೆ ಬೆಂಗಳೂರು ಮೂಲಕ ಚಿಕ್ಕಬಳ್ಳಾಪುರ, ಹೈದರಾಬಾದ್ ಮಾರ್ಗವಾಗಿ ಲಡಾಕ್‍ನತ್ತ ಪ್ರವಾಸ ಹೊರಟಿದ್ದಾನೆ.
ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದಾರಿ ಮಧ್ಯೆ ರಿಯಲ್ ಚಾರ್ಲಿ ಮ್ಯಾನ್ ಸುಧೀಶ್ ಎಲ್ಲರ ಗಮನ ಸೆಳೆಯುತ್ತಿದ್ದು, ಕೆಲವರು ಸೆಲ್ಫಿ ತೆಗೆದುಕೊಂಡು ಸಂತಸ ಪಡುತ್ತಿದ್ದಾರೆ. ಸಿನಿಮಾದ ರೀತಿಯೇ ಶ್ವಾನಕ್ಕಾಗಿ ತನ್ನ ಸ್ಪ್ಲೆಂಡರ್ ಬೈಕ್‍ನಲ್ಲಿ ಶ್ವಾನ ಕೂರಲು, ಮಲಗಲು ಬೇಕಾದ ರೀತಿಯಲ್ಲಿ ಹಿಂಬದಿ ಸೀಟಿನಲ್ಲಿ ಆಸನದ ವ್ಯವಸ್ಥೆ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಶ್ವಾನ ಬೀಳದೆ ಇರುವ ಹಾಗೆ ಬ್ಯಾರಿಕೇಟಿಂಗ್ ಮಾಡಿಕೊಂಡಿದ್ದಾನೆ.
ಶ್ವಾನಕ್ಕೆ ತನಗೆ ದಾರಿ ಮಧ್ಯೆ ಕುಡಿಯೋಕೆ ನೀರು ಬಟ್ಟೆ ಇಟ್ಟುಕೊಳ್ಳಲು ಬಾಕ್ಸ್ ಆಳವಡಿಸಿಕೊಂಡಿದ್ದಾನೆ.
ಈ ಬಗ್ಗೆ ಮಾತನಾಡಿದ ಸುಧೀಶ್ ಅವರು, ಶ್ವಾನದ ಜೊತೆ ಟ್ರಿಪ್ ಹೊರಟಿರುವುದು ಚಾರ್ಲಿ 777 ಸಿನಿಮಾ ನೋಡಿ ಅಲ್ಲ. ಮೊದಲಿಂದಲೂ ಶ್ವಾನ ಪ್ರೇಮಿಯಾಗಿದ್ದು, ತನ್ನ ನೆಚ್ಚಿನ ಶ್ವಾನದ ಜೊತೆ ಕಳೆದ ವರ್ಷವೂ ಲಡಾಕ್ ಟ್ರಿಪ್ ಹೋಗಿದ್ದೆ. ಈಗ ಮತ್ತೆ ಹೋಗುವ ಆಸೆಯಾಗಿ ಲಡಾಕ್‍ಗೆ ಹೊರಟಿದ್ದೇನೆ ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap