ಕರ್ನಾಟಕ ಬಜೆಟ್‌ 2024 ಲೈವ್….!

 

2024-25ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭವಾಗಿದ್ದು, 15ನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾರೆ. ಈ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

    • 10:38 AM IST

    ಬೆಂಗಳೂರು ಅಭಿವೃದ್ಧಿಗೆ ನಿರೀಕ್ಷೆಯಂತೆ ಸಿದ್ದರಾಮಯ್ಯ ಅವರು ಸಾಕಷ್ಟು ಅನುದಾನ ಮೀಸಲಿಡಲು ನಿರ್ಧರಿಸಿದ್ದು, ಕೆಸಿ ಜನರಲ್ ಆಸ್ಪತ್ರೆ ಆವರಣದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಆಸ್ಪತ್ರೆ ಕಟ್ಟಲು ನಿರ್ಧರಿಸುವುದಾಗಿ ಘೋಷಿಸಿದ್ದಾರೆ. 

    • 10:37 AM IST

    ಕೇಂದ್ರದಲ್ಲಿ ಆಡಳಿತ ಇರುವ ಪಕ್ಷವೇ ರಾಷ್ಟ್ರದ ಹಲವು ರಾಜ್ಯಗಳಲ್ಲಿ ಆಡಳಿದಲ್ಲಿ ಇರುವದರಿಂದ ಕೇಂದ್ರದ ಧೋರಣೆ ಬಗ್ಗೆ ಧ್ವನಿ ಎತ್ತುವಲ್ಲಿ ವಿಫಲವಾಗಿದೆ ಎಂದ ಸಿಎಂ. ಇದಕ್ಕೆ ವಿಪಕ್ಷಗಳ ಆಕ್ರೋಶ. ಸದನದಲ್ಲಿ ತುಸು ಕಾಲ ಗೊಂದಲ.

    • 10:35 AM IST

    ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿರುವ ಸಿದ್ದರಾಮಯ್ಯ, ಪುಷ್ಪ ಬೆಳೆಗಾರರಿಗೆ ಅನುಕೂಲವಾಗುಂತೆ ನೆರವ ನೀಡಲು ಮುಂದಾಗಿದ್ದಾರೆ. 15ನೇ ಹಣಕಾಸು ಆಯೋಗದಿಂದ ಶಿಪಾರಸಿನಿಂದ ರಾಜ್ಯಕ್ಕೆ ಕಡಿಮೆ ಅನುದಾನ ಹಂಚಿಕೆ ಆಗುವ ನಿರೀಕ್ಷೆಯಾಗಿದೆ. ರಾಜ್ಯಕ್ಕೆ 92 ಸಾವಿರ ಕೋಟಿ ನಷ್ಟವಾಗಿದೆ. 15ನೇ ಹಣಕಾಸು ಆಯೋಗವು ಮೊದಲನೇ ವರದಿಯಲ್ಲಿ 5 ಸಾವಿರ 445 ಕೋಟಿ ವಿಶೇಷ ಅನುದಾನ ಒದಗಿಸುವಂತೆ ಶಿಫಾರಸು ಮಾಡಿತ್ತು. ಆದರೆ, ಇದನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಡಬಲ್ ಎಂಜಿನ್ ಸರಕಾರ ಎಂದು ಹೇಳಿಕೊಂಡರೂ ಹಿಂದಿನ ಸರಕಾರ ರಾಜ್ಯಕ್ಕೆ ಬರಬೇಕಾಗಿದ್ದ ಪಾಲನ್ನು ಪಡೆಯಲು ವಿಫಲವಾಗಿದೆ. ಎಲ್ಲ ರೀತಿಯಲ್ಲಿಯೂ ರಾಜ್ಯಕ್ಕೆ ನ್ಯಾಯಕ್ಕೆ ಸಿಕ್ಕಿರುವುದಿಲ್ಲ. ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಡೆಯಲು ಜ್ಞಾಪನ ಪತ್ರವನ್ನು ತಯಾರಿಸಿ, 16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಲು ಕರ್ನಾಟಕ ಸರಕಾರ ನಿರ್ಧರಿಸಿದೆ.

    • 10:31 AM IST

    ದೇಶದ ಆರ್ಥಿಕತೆಯನ್ನು ರೂಪಿಸುವಲ್ಲಿ ಕರ್ನಾಟಕದ ಆರ್ಥಿಕ ಅಭಿವೃದ್ಧಿ ಹೆಚ್ಚಿನ ಪಾಲು ನೀಡಲಿದೆ. ಸೇವಾ ವಲಯವು ಬೆಳವಣಿಗೆ ಸಾಧಿಸಿದೆ. ಪ್ರಸಕ್ತ ವರ್ಷದಲ್ಲಿ ಮುಂಗಾರು ವೈಫಲ್ಯದಿಂದ ರಾಜ್ಯ ಬರ ಎದುರಿಸಬೇಕಾಯಿತು. ಎಲ್ಲದರ ನಡುವೆಯೂ ರಾಜ್ಯದಲ್ಲಿ 2.8 ಶತಕೋಟಿ ಅಮೆರಿಕನ್ ಡಾಲರ್ ವಿದೇಶಿ ಹೂಡಿಕೆಯಾಗಿದ್ದು, ವಿದೇಶಿಗರಿಗೆ ರಾಜ್ಯ ಅವರನ್ನು ಹೇಗೆ ಸ್ವಾಗತಿಸುತ್ತದೆ ಎಂಬುದನ್ನು ತೋರಿಸುತ್ತದೆ. 

    ರಾಜ್ಯವು ದೇಶದಲ್ಲಿ ಹೆಚ್ಚು ಜಿಎಸ್ಟಿ ಸಂಗ್ರಹಿಸುತ್ತಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ.12ರಷ್ಟು ಸಾಧನೆ ತೋರಲಿದೆ. ಜನರ ಆರ್ಥಿಕತೆ ಉತ್ತೇಜಿಸುವಲ್ಲಿ ಇದು ಪೂರಕವಾಗಿದೆ. ರಾಜ್ಯಗಳ ಜೊತೆಗೆ ಸಮಾನತೆಯ ಆಧಾರದಲ್ಲಿ ಸಹಕರಿಸಬೇಕೆೆಂದು ಭಾರತ ರತ್ನಿ ಕರ್ಪೂರಿ ಠಾಕೂರ್ ಹೇಳಿದಂತೆ ಕ್ರಮ ಕೈಗೊಳ್ಳಲಾಗುತ್ತದೆ. 

    • 10:28 AM IST

    ಸಾಂಸ್ಥಿಕ ಸುಧಾರಣೆಗಳು, ವಿಕೇಂದ್ರಿಕರಣ, ಆಡಳಿತ ವ್ಯವಸ್ಥೆ ಕುರಿತು ಜನರಲ್ಲಿ ವಿಶ್ವಾಸ ಮೂಡಿಸುವುದು ಸರಕಾರದ ಆಶಯ. ಅಭಿವೃದ್ಧಿಯ ನಕಾಶೆಯನ್ನು ವಾಸ್ತವಗೊಳಿಸಲು ಮುಂದಿನ ನಾಲ್ಕು ವರ್ಷ ಶ್ರಮಿಸುತ್ತೇವೆ. ಬಸವಣ್ಣ ಮತ್ತು ಡಾ.ಅಂಬೇಡ್ಕರ್ ಹೇಳಿದಂತೆ ಕ್ರಾಂತಿಕಾರಕ ಹೆಜ್ಜೆಗಳನ್ನು ಇಡುತ್ತೇವೆ. ಮುಂದಿನ ಒಂದು ದಶಕದಲ್ಲಿ ಕರ್ನಾಟಕವನ್ನು ಜಾಗತಿಕವಾಗಿ ಗುರುತಿಸಲ್ಪಡುವಂತೆ ಅಭಿವೃದ್ಧಿಗೊಳಿಸಲಾಗುವುದು. ಎಲ್ಲರಿಗೂ ಸಮಾನ ಆದ್ಯತೆ ನೀಡಲಾಗುತ್ತದೆ. 

    • 10:26 AM IST

    ಇಷ್ಟು ದೊಡ್ಡ ಮಟ್ಟದ ಗ್ಯಾರಂಟಿ ಯೋಜನೆಗಳು 21 ಸಾವಿರ ಕೋಟಿ ಮೊತ್ತವನ್ನು ನೀಡಿವೆ. ಗ್ರಾಮೀಣ ರಸ್ತೆಗಳು, ವಿಶ್ವದರ್ಜನೆಯ ವಿಮಾನ ನಿಲ್ದಾಣಗಳು ಹಾಗೂ ಅಗತ್ಯ ಯೋಜನೆಗಳನ್ನು ರೂಪಿಸಲು ಆದ್ಯತೆ ನೀಡಲಾಗುತ್ತಿದೆ. ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲಾಗುವುದು. ಬೆಂಗಳೂರನ್ನು ಜಾಗತಿಕ ಮಟ್ಟದ ನಗರವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು. ಪ್ರವರ್ಧಮಾನಕ್ಕೆ ಬರುತ್ತಿರುವ ವಲಯಗಳ ಜಾಗತಿಕ ಪ್ರತಿಭೆಗಳನ್ನು ಗುರುತಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಆಧ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಲಾಗುತ್ತದೆ. 

    ರಾಜ್ಯ ಸರಕಾರ ಯೋಜಿಸಿದ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ. ನಿಷ್ಪಕ್ಷಪಾತ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂಪತ್ತನ್ನು ಎಲ್ಲೆಡೆ ಹಂಚಲು ಕೈ ಕೊಂಡ ಯೋಜನೆಗಳಿವು. ಕೇಂದ್ರ ಸರಕಾರ ಮಾಡದ್ದನ್ನು ಕರ್ನಾಟಕ ಸರಕಾರ ಮಾಡಿ ತೋರಿಸಿದ, ಕೀಳಾದವನೂ ಮೇಲೆ ಬರಲು ಅವಕಾಶ ಮಾಡಿಕೊಡಲು, ಕುವೆಂಪು ಅವರ ಆಧ್ಯಾತ್ಮಿಕ ದೃಷ್ಟಿಯಿಂದ ಮುನ್ನಡೆಸಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೂ ಕನಿಷ್ಠ 50 ಸಾವಿರ ರೂ. ನೀಡಲಾಗುತ್ತಿದೆ. ಇದರ ಜಾರಿಗೆ ಇಡೀ ಭಾರತವೇ ಕರ್ನಾಟಕದ ಮೇಲೆ ಮೆಚ್ಚುಗೆ ಸೂಚಿಸಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳೂ ನಮ್ಮ ಯೋಜನೆಗಳಿಗೆ ಭೇಷ್ ಹೇಳಿವೆ. ಬಸ್ ಹತ್ತುವ ಮುನ್ನ ನಮಸ್ಕರಿಸಿದ ಮಹಿಳೆ, ಹಾಗೂ ಯುವನಿಧಿ ಯೋಜನೆಯ ಫಲಾನುವಭವಿ ಹಾಕಿದ ಆನಂದ ಭಾಷ್ಪ ನನ್ನ ನಂಬಿಕೆಯೆನ್ನು ಹೆಚ್ಚಿಸಿದೆ. 

    ಆದರೆ, ರಾಜ್ಯದಲ್ಲಿ ಬೊಕ್ಕಸದಲ್ಲಿ ಹಣವಿಲ್ಲವೆಂದು ವಿಪಕ್ಷಗಳು ಟೀಕಿಸುತ್ತಿವೆ. ಸುಳ್ಳು ಸುದ್ದಿಗಳನ್ನು ಹರಡಿಸುತ್ತಿವೆ. ಮನ ಶುದ್ಧಿ ಇಲ್ಲದೇ…ಎಂಬ ಶರಣರ ವಚನ ವಿವರಿಸಿ ಬಿಜೆಪಿಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ.

    • 10:20 AM IST

    ಬಜೆಟ್ ಭಾಷಣ ಆರಂಭಿಸಿದ ಸಿಎಂ ಸಿದ್ದರಾಮಯ್ಯ. ದುಡಿಮೆಯ ಭಾಗವನ್ನು ದಾಸೋಹಕ್ಕೆ ಬಳಸಬೇಕೆಂಬ ಆಶಯದೊಂದಿಗೆ ಅನ್ನ ಭಾಗ್ಯ ಯೋಜನೆ. ಬಸವ, ಶರಣಾದಿ ಗಳನ್ನು ಭಾಷಣದ ಆರಂಭದಲ್ಲಿಯೇ ನೆನೆದ ಸಿಎಂ. ಡಾ.ರಾಜ್ ಕುಮಾರ್ ಅವರ ಆಗದು ಎಂದು ಕೈ ಕಟ್ಟಿ ಕುಳಿತರೆ ಹಾಡನ್ನು ನೆನಪಿಸಿಕೊಂಡು, ಸರಕಾರದ ಯೋಜನೆಗಳು ಜನರ ಆಶೋತ್ತರಗಳನ್ನು ಪೂರೈಸಲು ರೂಪಿತವಾಗಿವೆ ಎಂದ ಸಿಎಂ. ಬಡ ಜನರಿಗೆ ನ್ಯಾಯ ಒದಗಿಸುವ ಕಾರ್ಯಕ್ಕಾಗಿ ಸರಕಾರದ ಯೋಜನೆಗಳು. ಆರಂಭದಲ್ಲಿಯೇ ಕೇಂದ್ರ ಸರಕಾರದ ಯೋಜನೆಗಳನ್ನು ಟೀಕಿಸಿದ ಸಿದ್ದರಾಮಯ್ಯ.

    • 10:17 AM IST

    ಶಲ್ಯ ಹಾಕ್ಕೊಂಡು ಬಂದ ಕಾಂಗ್ರೆಸ್ ಸದಸ್ಯರು. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಜೆಟ್ ಭಾಷಣ ಶುರು. ಸದನಕ್ಕೆ ಆಗಮಿಸಿದ ಸ್ಪೀಕರ್. 

    • 10:11 AM IST

    ಟೋಪಿ ಹಾಕೋದು ಬೇಡ ಅಂತ ಹಿರಿಯ ಸದಸ್ಯರ ಸಲಹೆ. ಟೋಪಿ ಹಾಕುವ ನಿರ್ಧಾರದಿಂದ ಬಿಜೆಪಿ ವಾಪಸ್. ಸದನದಲ್ಲಿ ಟೋಪಿ ಹಾಕಿಕೊಂಡು ಭಾಗವಹಿಸಲು ಬಿಜೆಪಿ ಸದಸ್ಯರ ನಿರ್ಧಾರ. ಟೋಪಿ ಬದಲು ಪೋಸ್ಟರ್ ಪ್ರದರ್ಶನಕ್ಕೆ ಬಿಜೆಪಿ ಪ್ಲಾನ್. ಏನಿಲ್ಲ – ಏನಿಲ್ಲ ಬಜೆಟ್ ನಲ್ಲಿ ಏನಿಲ್ಲ ಹೇಳುವುದು ನಿಜವಲ್ಲ ಅನ್ನೋ ಪೋಸ್ಟರ್.

    • 9:54 AM IST

    ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೊದಲ ಪೂರ್ಣಕಾಲಿಕ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸೂಟ್‌ಕೇಸ್‌ ಬಿಟ್ಟು ಲಿಡ್ಕರ್ ಸಂಸ್ಥೆಯ ಲೆದರ್‌ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

     

    • 9:03 AM IST

    ಏನು ಇರೋದಿಲ್ಲಾ, ಏನು ಇರೋದಿಲ್ಲಾ ಬಜೆಟ್ ನಲ್ಲಿ “ಸಾಲ-ಸುಳ್ಳು” ಬಿಟ್ಟರೇ, ಬೇರೆ ಏನು ಇರೋದಿಲ್ಲಾ…!! ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ 15ನೇ ಬಜೆಟ್ ಮಂಡನೆಗೂ ಮುನ್ವವೇ ಬಿಜೆಪಿ ಟ್ವೀಟ್ ಮಾಡಿದೆ.

    • 8:58 AM IST

     ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.16 ರಂದು ರಾಜ್ಯ ಬಜೆಟ್‌ ಮಂಡಿಸಲಿದ್ದು ವಿವಿಧ ವಲಯಗಳಲ್ಲಿ ಬಜೆಟ್‌ ಘೋಷಣೆಗಳ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆದ ಬಳಿಕ ಮಂಡಿಸಲಿರುವ ಎರಡನೇ ಬಜೆಟ್‌ ಇದಾಗಿದ್ದರೂ, ಪೂರ್ಣ ಅವಧಿಗೆ ಮಂಡಿಸಲಿರುವ ಮೊದಲ ಬಜೆಟ್‌ ಆಗಿರುತ್ತದೆ.  

     

    • 8:52 AM IST

    1995- ಎಚ್.ಡಿ. ದೇವೇಗೌಡ ಸಿಎಂ -ಸಿದ್ದರಾಮಯ್ಯ ಹಣಕಾಸು ಸಚಿವ -ಬಜೆಟ್ ಮಂಡನೆ
    1996 – ಎಚ್.ಡಿ. ದೇವೇಗೌಡ ಸಿಎಂ – ಸಿದ್ದರಾಮಯ್ಯ ಡಿಸಿಎಂ – ಬಜೆಟ್ ಮಂಡನೆ
    1997-ಜೆ.ಎಚ್. ಪಟೇಲ್ ಸಿಎಂ – ಸಿದ್ದರಾಮಯ್ಯ ಡಿಸಿಎಂ- ಬಜೆಟ್ ಮಂಡನೆ
    1998- ಜೆ.ಎಚ್. ಪಟೇಲ್ ಸಿಎಂ – ಸಿದ್ದರಾಮಯ್ಯ ಡಿಸಿಎಂ- ಬಜೆಟ್ ಮಂಡನೆ
    1999- ಜೆ.ಎಚ್. ಪಟೇಲ್ ಸಿಎಂ – ಸಿದ್ದರಾಮಯ್ಯ ಡಿಸಿಎಂ- ಬಜೆಟ್ ಮಂಡನೆ
    2005- ಧರಂ ಸಿಂಗ್ ಸಿಎಂ – ಸಿದ್ದರಾಮಯ್ಯ ಡಿಸಿಎಂ – ಬಜೆಟ್ ಮಂಡನೆ 
    2006 – ಧರಂ ಸಿಂಗ್ ಸಿಎಂ – ಸಿದ್ದರಾಮಯ್ಯ ಡಿಸಿಎಂ – ಬಜೆಟ್ ಮಂಡನೆ 
    2013 ರಿಂದ 2018ರವರೆಗೆ ಸಿಎಂ ಆಗಿ ಸತತ 6 ಬಾರಿ ಬಜೆಟ್‌ ಮಂಡನೆ
    2023ರ ಜುಲೈ  7ರಂದು 14ನೇ ಬಾರಿಗೆ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ
    2024, ಫೆಬ್ರವರಿ 16ಕ್ಕೆ 15ನೇ ಬಾರಿಗೆ ಸಿದ್ದರಾಮಯ್ಯ ಬಜೆಟ್ ಮಂಡನೆ

    • 8:17 AM IST

    ಸಿದ್ದು ಬಜೆಟ್..ನಿರೀಕ್ಷೆಗಳೇನು..?
    ಮೇಕೆದಾಟು, ಎತ್ತಿನಹೊಳೆ ಯೋಜನೆಗೆ ಅನುದಾನ ನಿರೀಕ್ಷೆ
    ಕೃಷ್ಣ ಮೇಲ್ದಂಡೆ ಯೋಜನೆಗೆ ವಿಶೇಷ ಅನುದಾನ 
    ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ
    ತಳ ಸಮುದಾಯಗಳ ಅಭಿವೃದ್ಧಿ ಕಲ್ಯಾಣ ಮಂಡಳಿ ರಚನೆ
    ಅಲ್ಪಸಂಖ್ಯಾತರ ಅಭಿವೃದ್ಧಿಗೆ 5,000 ಕೋಟಿ ವಿಶೇಷ ನಿಧಿ ಸಾಧ್ಯತೆ
    ಸಂತ ಶಿಶುನಾಳ ಷರೀಫ್, ಭಗಿರಥ ಪ್ರತಿಮೆ ನಿರ್ಮಾಣಕ್ಕೆ ಅನುದಾನ
    SC/ST ಸಮುದಾಯದ ಯುವತಿಯರ ಉನ್ನತ ಶಿಕ್ಷಣಕ್ಕೆ ಯೋಜನೆ
    ಗರ್ಭಕೋಶ ರೋಗದಿಂದ ಬಳಲುವ ಮಹಿಳೆಯರ ಚಿಕಿತ್ಸೆಗೆ ಯೋಜನೆ
    ಅನಾಥ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಶಾಲೆಗಳ ನಿರ್ಮಾಣಕ್ಕೆ ಪ್ಲಾನ್
    ಹೈನುಗಾರಿಕೆ ಪ್ರೋತ್ಸಾಹಕ್ಕೆ ಉತ್ತರಕರ್ನಾಟಕದಲ್ಲಿ KMF ತರಬೇತಿ ಘಟಕ

    • 8:03 AM IST

    2024-25ನೇ ಸಾಲಿನ ಬಜೆಟ್ 3.70 ಲಕ್ಷ ಕೋಟಿ ಸಾಧ್ಯತೆ
    ಪ್ರಸಕ್ತ ಬಜೆಟ್‌ನಲ್ಲಿ ಸಾಲದ ಪ್ರಮಾಣದಲ್ಲೂ ಹೆಚ್ಚಳ ಸಾಧ್ಯತೆ
    ಈ ಬಾರಿ ತುರ್ತು ಪ್ರಸ್ತಾವನೆಗಳನ್ನಷ್ಟೇ ಪರಿಗಣಿಸುವ ಲೆಕ್ಕಾಚಾರ
    5 ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ 58,000 ಕೋಟಿ ರೂ
    ಬಜೆಟ್‌ ಗಾತ್ರ ಹಿಗ್ಗಿದರೂ ಬಹುಪಾಲು ಮೊತ್ತ ಗ್ಯಾರಂಟಿಗೆ ಮೀಸಲು
    ಬೇರೆ ಯೋಜನೆಗಳಿಗೆ ಹಣಕಾಸು ಹೊಂದಿಸುವುದೇ ಸವಾಲು

    • 7:42 AM IST

    2024-25ರ ಬಜೆಟ್‌ಗೆ ಸಿದ್ದರಾಮಯ್ಯ ತಯಾರಿ
    ದಾಖಲೆ ಬಜೆಟ್ ಮಂಡನೆಗೆ ಸಜ್ಜಾದ ಸಿದ್ದರಾಮಯ್ಯ
    15ನೇ ಆಯವ್ಯಯ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ
    ಲೋಕಸಭೆ ಎಲೆಕ್ಷನ್‌..ಕುತೂಹಲ ಮೂಡಿಸಿದ ಬಜೆಟ್
    ಕಳೆದ ಬಾರಿ 3.27 ಲಕ್ಷ ಕೋಟಿ ಬಜೆಟ್ ಮಂಡನ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

 

Recent Articles

spot_img

Related Stories

Share via
Copy link
Powered by Social Snap