ಕೆ ಎನ್ ಆರ್ ಗೆ ಸಚಿವ ಸ್ಥಾನ ಕೊಡಿ : ಕಾಡುಗೊಲ್ಲರ ಒತ್ತಾಯ

ತುಮಕೂರು:

       ಸನ್ಮಾನ್ಯ ಶ್ರೀ ಕೆ ಎನ್ ರಾಜಣ್ಣನವರು ತಾಲೂಕು ಹಾಗೂ ಜಿಲ್ಲೆಯಲ್ಲಿನ ಎಲ್ಲಾ ತಳ ಸಮುದಾಯಗಳ ಜನಪ್ರಿಯ ನಾಯಕರಾಗಿದ್ದು, ತುಮಕೂರು ಜಿಲ್ಲಾ ಕೇಂದ್ರ ಬ್ಯಾಂಕಿನಲ್ಲಿ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿ ಅಪಾರ ಅನುಭವಿದ್ದು ಇವರ ಸೇವಾ ಅವಧಿಯಲ್ಲಿ ಜಿಲ್ಲೆಯ ಬಹಳಷ್ಟು ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸದರಿ ಬ್ಯಾಂಕಿನಿಂದ ಹೆಚ್ಚಿನ ಪ್ರಯೋಜನಗಳು ಪಡೆದು ಇಂದು ಬಹುತೇಕ ರೈತರು ಸಂತೃಪ್ತಿ ಜೀವನವನ್ನು ಸಾಗಿಸುತ್ತಿದ್ದಾರೆ.

      ಇವರು ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುತ್ತಾರೆ. ಸನ್ಮಾನ್ಯರು ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ಮೀಸಲು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಚುನಾವಣೆಗೆ ನಿಲ್ಲದೆ, ಮಧುಗಿರಿ ಸಾಮಾನ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುತ್ತಾರೆ.

     ಇಂಥ ಸಮರ್ಥ ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಇರುವ ಹಾಗೂ ಎಲ್ಲಾ ಜನಾಂಗದ ರೈತರ, ಗ್ರಾಮೀಣ ಬಡ ಜನಗಳ ಬಗ್ಗೆ ಹೆಚ್ಚಿನ ಕಳಕಳಿ ಹೊಂದಿರುವ ಕೆಎನ್‌ಆರ್ ಇವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸಿ, ಇವರನ್ನು ಸಹಕಾರ ಸಚಿವರನ್ನಾಗಿ ನೇಮಿಸಿ, ರಾಜ್ಯದ ಜನತೆಗೆ ಇನ್ನೂ ಹೆಚ್ಚಿನ ಸೇವೆ ಮಾಡುವ ಅವಕಾಶವನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಲ್ಲಿ ಹಾಗೂ ಉಪಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರಲ್ಲಿ ಸಮಸ್ತ ತುಮಕೂರು ಜಿಲ್ಲಾ ಕಾಡುಗುಲ್ಲರ ಪರವಾಗಿ ಒತ್ತಾಯಿಸಿದ್ದೇವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap