ತಾಲೂಕು ಕೇಂದ್ರಕ್ಕೆ ಅವಮಾನ, ಸರ್ಕಾರದ ದಿವ್ಯ ನಿರ್ಲಕ್ಷ್ಯ
ಗುಡಿಬಂಡೆ : KSRTC ಅಧಿಕಾರಿಗಳ ವಿಫಲ ಹಾಗೂ ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನು ವಿರೋಧಿಸಿ ಬೆಳಂಬೆಳಗ್ಗೆ ಬೀದಿಗಿಳಿದು ತಮ್ಮ ಹಕ್ಕನ್ನು ಪಡೆಯಲು ಹೋರಾಟ ಮಾಡುತ್ತಿದ್ದಾರೆ.
ಮಂಗಳವಾರ ಸಂಜೆ KSRTC ಅಧಿಕಾರಿಗಳ ಹಾಗೂ ಹೋರಾಟಗಾರರ ಸಭೆ ನಡೆಯಿತು ನಿರೀಕ್ಷೆಯಂತೆ ಅಧಿಕಾರಿಗಳಿಂದ ಸ್ಪಂದನೆ ಸಿಗದ ಕಾರಣ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಗಾರರು ಹೇಳುತ್ತಾರೆ.
ಬಂದ್ ಆರಂಭ : ಕೆಎಸ್ ಆರ್ ಟಿಸಿ ಅವ್ಯವಸ್ಥೆ ಖಂಡಿಸಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ
ಬೆಳ್ಳಂಬೆಳಗ್ಗೆ ಬೀದಿಗಿಳಿದು ಹೊರಟ ನಡೆಸುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳು ಶಾಲಾ ಕಾಲೇಜುಗಳು ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು ಅಧಿಕಾರಿಗಳ ಮಾತ್ರ ಮೌನವಾಗಿದ್ದಾರೆ.
KSRTC ಅಧಿಕಾರಿಗಳ ವಿರುದ್ಧ ಆಕ್ರೋಶ : ಜಿಲ್ಲಾ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದೆ ಹಾಗಾಗಿ ತಾಲೂಕಿಗೆ ಬಸ್ ಡಿಪೋ ಅನುಮೋದನೆಯಾಗಿ ವರ್ಷಗಳೇ ಕಳೆದಿದ್ದರೂ ಅದನ್ನು ನಿರ್ಮಾಣ ಮಾಡಿಲ್ಲ. ಹಾಗಾಗಿ ಕೂಡಲೇ ಘಟಕ ಸ್ಥಾಪಿಸಿ ಅಥವಾ ಕೆಂಪು ಬಸ್ ರಹಿತ ತಾಲ್ಲೂಕು ಮಾಡುವಂತೆ ಹೋರಾಟಗಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಗುಡಿಬಂಡೆಯಲ್ಲಿ ಸಾರಿಗೆ ಘಟಕ ಸ್ಥಾಪನೆ ಹೋರಾಟ ಸಮಿತಿಯಿಂದ ಬಂದ್ ಗೆ ಕರೆ ನೀಡಲಾಗಿದೆ.
ಸಾರಿಗೆ ಘಟಕ ಸ್ಥಾಪಿಸಲು ಬಂದ್ ಆರಂಭ ಮಾಡಿದ್ದೇವೆ, ನಗರ ಹಾಗೂ ತಾಲೂಕಿನ ಎಲ್ಲಾ ಸಾರ್ವಜನಿಕರು, ಸಂಘಟನೆಗಳು, ಮುಖಂಡರು ನಿಷ್ಪಕ್ಷಪಾತವಾಗಿ ಸಹಕಾರ ನೀಡಬೇಕು, ನಾವು ನಮ್ಮ ಹಕ್ಕನ್ನು ಪಡೆಯಲು ಮುಂದಾಗಬೇಕು. ಪಲ್ಲದ ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿ. ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿ ಬಂದ್ ಗೆ ಬೆಂಬಲ ನೀಡಿದ್ದಾರೆ. ನಮ್ಮ ಪಟ್ಟಣದ ಎಲ್ಲರೂ ಈ ಹೋರಾಟದಲ್ಲಿ ಯುವಕರು ಹೆಚ್ಚಾಗಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ನೀಡಬೇಕು.
– ದ್ವಾರಕನಾಥ್ ನಾಯ್ಡು, ಮಾಜಿ ಅಧ್ಯಕ್ಷರು ಪಪಂ ಗುಡಿಬಂಡೆ.
ಸಾರ್ವಜನಿಕರ ಅಭಿಪ್ರಾಯ :
ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳು
ಹುಟ್ಟುವ ಮೊದಲೇ ತಾಲೂಕು ಆಗಿತ್ತು, ಆದರೂ ಸರ್ಕಾರ, ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಸ್ತುತ ಗುಡಿಬಂಡೆ ತಾಲೂಕು ಶೋಷಣೆಗೆ ಒಳಗಾಗಿದೆ. ತಾಲೂಕು ಕೇಂದ್ರದಿಂದ ಸರಿಯಾದ ಬಸ್ ಗಳ ವ್ಯವಸ್ಥೆ ಇಲ್ಲ. ಇದರಿಂದ ಶೈಕ್ಷಣಿಕವಾಗಿ ಮಕ್ಕಳು ಹಿಂದುಳಿಯುತ್ತಿದ್ದಾರೆ. ನಮ್ಮ ಸಮಸ್ಯೆ ಕೂಡಲೇ ಬಗೆಹರಿಸಲು ಮುಂದಾಗಿ ಎಂದು ಹೋರಾಟಗಾರರು ನೇರವಾಗಿ ಎಚ್ಚರಿಕೆ ನೀಡುತ್ತಿದ್ದಾರೆ.
