ಚಿಕ್ಕಬಳ್ಳಾಪುರದಲ್ಲಿ 777 ಚಾರ್ಲಿ ಅಭಿಮಾನಿಗಳ ಸಂಘ

ಗಮನ ಸೆಳೆದ 777 ಚಾರ್ಲಿ ಬ್ಯಾನರ್

ಚಿಕ್ಕಬಳ್ಳಾಪುರ : ಸಿನಿಮಾ ನಾಯಕರಿಗೆ ಅಭಿಮಾನಿಗಳ ಸಂಘ ಇರೋದು ಸಹಜ, ಅವರ ನಾಯಕರ ಸಿನಿಮಾಗಳ ರಿಲೀಸ್ ಗೆ ಕಟೌಟ್, ಪ್ಲೆಕ್ಸ್ ಹಾಕಿ ಸಂಭ್ರಿಸುತ್ತಾರೆ, ಆದರೆ ಚಾರ್ಲಿಗೂ ಈಗ ಅಭಿಮಾನಿಗಳ ಸಂಘವೊಂದು ಚಿಕ್ಕಬಳ್ಳಾಪುರದಲ್ಲಿ ಹುಟ್ಟಿಕೊಂಡಿದೆ.

777 ಚಾರ್ಲಿ ಕನ್ನಡ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿದೆ ಯಾರಿಗೂ ಬೇಡವಾದ ನಾಯಿ ಈಗ ಚಾರ್ಲಿ ಸಿನೆಮಾದಲ್ಲಿ ಹೀರೋ ಆಗಿ ಮಿಂಚಿದೆ. 777 ಚಾರ್ಲಿ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

777 ಚಾರ್ಲಿ ಸಂಘ : ಚಿಕ್ಕಬಳ್ಳಾಪುರದಲ್ಲಿ ಸಂಘವೊಂದು ಹುಟ್ಟಿಕೊಂಡಿದ್ದು, ನಗರದ ಬಾಲಾಜಿ ಚಿತ್ರಮಂದಿರ ಬಳಿ ಸಿನಿಮಾ ಯಶಸ್ವಿಯಾಗಬೇಕಂದು
ಹಾರೈಸಿ ಬ್ಯಾನರ್ ಹಾಕಿರೋದು ಎಲ್ಲೆಡೆ ವೈರಲ್ ಆಗಿದೆ. ಚಾರ್ಲಿ ಅಭಿಮಾನಿಗಳ ಸಂಘ,
ಭುವನೇಶ್ವರಿ ವೃತ್ತ ಎಂಬ ಬ್ಯಾನರ್ ಈಗ ಎಲ್ಲೆಡೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಜನರು ಈ ಪೋಸ್ಟರ್ ಅನ್ನು ಪೇಸ್ ಬುಕ್ , ವಾಟ್ಸಾಪ್ ಗಳ ಸ್ಟೇಟಸ್ ಗೆ ಹಾಕಿಕೊಂಡು ಗಮನ ಸೆಳೆದಿದ್ದಾರೆ.

 

ಥಿಯೇಟರ್ ಬಳಿ ಚಾರ್ಲಿ ಸಂಘದ ಬ್ಯಾನರ್ : 777 ಚಾರ್ಲಿ ಸಿನಿಮಾ ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರಮಂದಿರದ ಬಳಿ ಚಾರ್ಲಿ ಅಭಿಮಾನಿಗಳ ಸಂಘ ಎಂದು ನಾಯಿಗಳೇ ಇರೋ ಬ್ಯಾನರ್ ವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೂ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದರು ಕೂಡ ಎಲ್ಲರಿಗೂ ಆಕರ್ಷಣೆ ಆಗಿರುವುದು ಮಾತ್ರ ಚಾರ್ಲಿಯೇ, ಹೀಗಾಗಿ ನಟ
ಚಾರ್ಲಿ(ನಾಯಿ) ಅಭಿಮಾನಿಗಳ ಸಂಘದ ಕಟೌಟ್ ವಿಶೇಷವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚಾರ್ಲಿ ಬ್ಯಾನರ್ ವೈರಲ್ : ಚಾರ್ಲಿ ಅಭಿಮಾನಿಗಳ ಸಂಘ, ಭುವನೇಶ್ವರಿ ವೃತ್ತ ಚಿಕ್ಕಬಳ್ಳಾಪುರ ಎಂಬ ಹೆಸರಿನ ಸಂಘ ವೊಂದಿದೆ ಎಂದು ಬ್ಯಾನರ್ ಹಾಕಿರೋದು ಈಗ ಎಲ್ಲೆಡೆ ವೈರಲ್ ಆಗಿದ್ದು, 777 ಚಾರ್ಲಿ ಸಿನಿಮಾ ಶತದಿನೋತ್ಸವ ಆಚರಿಸಲು ಹಾರೈಸಿದ್ದಾರೆ.

ಚಾರ್ಲಿ ಅಭಿಮಾನಿಗಳ ಸಂಘಕ್ಕೂ ಪದಾಧಿಕಾರಿಗಳು : ಈ ಸಂಘದ ನಾಯಿಗಳಿಗೆ ವಿವಿಧ ಹೆಸರಿಟ್ಟಿದ್ದು, ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ
ಎಂದು ಆ ನಾಯಿಗಳ ಪೊಟೋ ಕೆಳಗೆ ಹೆಸರುಗಳನ್ನು ಹಾಕಿದ್ದಾರೆ. ರಾಯನ್ ಅಧ್ಯಕ್ಷ, ರಾಕಿ-ಉಪಾಧ್ಯಕ್ಷ, ಜಾಕಿ – ಖಜಾಂಚಿ, ಕರಿಯ – ಕಾನೂನು ಸಲಹೆಗಾರ, ಬಂಟು ಸಂಘಟನಾ ಕಾರ್ಯದರ್ಶಿ ಸೆರಿದಂತೆ ಉಳಿದ 7 ನಾಯಿಗಳನ್ನು ಸದಸ್ಯರೆಂದು ಬ್ಯಾನರ್ ನಲ್ಲಿ ಹಾಕಿಕೊಂಡಿದ್ದಾರೆ.