ಎಂ ಎನ್ ಕೋಟೆ :
ಮಕ್ಕಳನ್ನು ಸಂಸ್ಕಾರವಂತನ್ನಾಗಿ ಮಾಡಿ ಉತ್ತಮ ಪ್ರಜೆಗಳನ್ನಾಗಿಸುವುದು ಕೇವಲ ಶಿಕ್ಷಕರ ಜವಬ್ದಾರಿಯಲ್ಲ ಪೋಷಕರು ಹೆಚ್ಚಿನ ಜವಬ್ದಾರಿಯನ್ನು ವಹಿಸಬೇಕು ಎಂದು ಬೆಟ್ಟದಹಳ್ಳಿ ಗವಿಮಠಧ್ಯಕ್ಷರಾದ ಶ್ರೀ ಚಂದ್ರಶೇಳರ ಮಹಾ ಸ್ವಾಮಿಗಳು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮದ ಮಹಾಲಿಂಗೇಶ್ವರ ಸ್ವಾಮಿ ಹೈಟೆಕ್ ಶಾಲೆಯ ಚಿಣ್ಣರ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣವನ್ನು ಕೊಡಬೇಕು. ಟಿವಿಗಳಿಂದ ಮೊಬೈಲ್ ಗಳಿಂದ ದೂರವಿಟ್ಟು ಸಂಕುಚಿತ ಭಾವನೆಯಿಂದ ನೋಡಿಕೊಳಬೇಕು.ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಕೊಂಡಿ ಕಳಚುತ್ತಿದೆ. ಪರಸ್ಪರ ಹೊಂದಾಣಿಕೆ ಇಲ್ಲದೆ ಒಂಟಿಯಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.ತಮ್ಮ ಮಕ್ಕಳನ್ನು ಇತರರೊಂದಿಗೆ ಬಾಳಿ ಬದುಕುವ ಅವಕಾಶವನ್ನು ಪೋಷಕರು ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಚಂದ್ರಶೇಖರ್ ಮಾತನಾಡಿ ವಿದ್ಯೆ ಕದಿಯಲಾಗದ ವಸ್ತು ಆದ್ದರಿಂದ ಮಕ್ಕಳಿಗ ಗುಣ ಮಟ್ಟದ ಶಿಕ್ಷಕಣವನ್ನು ಶಿಕ್ಷಕರು ಕೊಡಬೇಕು. ಜೂತೆಗೆ ಬೆಟ್ಟದಹಳ್ಳಿ ಶ್ರೀಗಳು ಶಿಕ್ಷಣ ತಜ್ಞಾರಾಗಿ ಗುರುತಿಸಿಕೊಂಡಿದ್ದಾರೆ.ಶಾಲೆಯ ಪ್ರತಿಯೊಂದು ವಿಷಯಗಳಲ್ಲಿ ನಮ್ಮೆಲ್ಲರಿಗೂ ಕೂಡ ಮಾರ್ಗದರ್ಶಕರಾಗಿದ್ದರೆ. ಶ್ರೀಗಳ ಆಶಯ ಗುಣ ಮಟ್ಟದ ಶಿಕ್ಷಣವನ್ನು ಕೊಡಬೇಕು. ಆದ್ದರಿಂದ ಮಕ್ಕಳು ಚನ್ನಾಗಿ ಓಧಬೇಕು. ಮಕ್ಕಳಿಗೆ ದಾಸತ ಕೀರ್ತನೆಗಳು , ಶರಣರ ವಚನಗಳು, ನುಡಿ ಮುತ್ತುಗಳನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಭೋದನೆ ಮಾಡುತ್ತಿರುವುದು ಶಿಕ್ಷರರ ಜವಬ್ದಾರಿಯಾಗಿದೆ. ಆದ್ದರಿಂದ ಮಕ್ಕಳು ಸಮಾಜದ ಆಸ್ತಿಯಾಗಬೇಕು ಶ್ರೀಗಳ ಆರ್ಶಿವಾದ ಸದಾ ಮಕ್ಕಳ ಮೇಲೆ ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ ಎನ್ ಭೀಮಶೆಟ್ಟಿ , ನಿವೃತ್ತ ಶಿಕ್ಷಕ ಕ್ಷೇತ್ರಪಾಲ್ , ಮುಖ್ಯ ಶಿಕ್ಷಕರಾದ ಶಾಂತರಾಜು , ನಳಿನ ಮುಖಂಡರಾದ ಬಾಲಕೃಷ್ಠ , ಪರಮೇಶ್ , ಇದ್ದರು.
