ನವದೆಹಲಿ:
ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ದೇವೇಂದ್ರ ಫಡ್ನವಿಸ್ ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ.
ಚುನಾವಣಾ ಸಿದ್ಧತೆಯಲ್ಲಿದ್ದ ಬಿಜೆಪಿ ಮತ್ತು ಮರುಆಯ್ಕೆ ಬಯಸಿ ತುದಿಗಾಲಿನಲ್ಲಿ ನಿಂತಿದ್ದ ಫಡ್ನವೀಸ್ ಅವರಿಗೆ ಕೋರ್ಟ್ ದೊಡ್ಡ ಆಘಾತ ನೀಡಿದೆ ಅವರು 2014ರಲ್ಲಿ ಸಲ್ಲಿಸಿದ್ದ ದೋಶ ಪೂರಿತ ನಾಮಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಆದೇಶಿಸಿದೆ.
ನಾಮಪತ್ರ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ಹಾಗೂ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ್ ಭೋಸ್ ಅವರನ್ನೊಳಗೊಂಡ ಪೀಠ ತನಿಖೆಗೆ ಆದೇಶ ನೀಡಿದೆ.
2014ರಲ್ಲಿ ಫಡ್ನವೀಸ್ ವಿಧಾನಸಭಾ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರ ವಿರುದ್ಧದ ಎರಡು ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದವು. ಇದರ ಹೊರತಾಗಿಯೂ ಫಡ್ನವಿಸ್ ತಮ್ಮ ನಾಮಪತ್ರದಲ್ಲಿ ಈ ಕುರಿತು ಯಾವುದೇ ರೀತಿಯ ಉಲ್ಲೇಖ ಮಾಡದೇ ನಾಮಪತ್ರ ಸಲ್ಲಿಕೆ ಮಾಡಿದ್ದರು.