ಚೆಕ್ ಬೌನ್ಸ್ ಪ್ರಕರಣ : ಜ.31 ರ ಒಳಗೆ ಹಣ ಕೊಡುತ್ತೇವೆ- ಮಧು ಬಂಗಾರಪ್ಪ

ಹುಬ್ಬಳ್ಳಿ

     ಚೆಕ್ ಬೌನ್ಸ್ ವಿಚಾರ ಎಂದು ಮಾಧ್ಯಮದವರು ಹಾಕಿದ್ದೀರಿ. ಮಾಧ್ಯಮದವರು ಮಾಹಿತಿ ಕರೆಕ್ಟ್ ಹಾಕಿ. ಜನವರಿ 31 ರೊಳಗೆ ನಾವೇ ಕೊಡ್ತೀವಿ ಎಂದು ಸೆಟ್ಲಮೆಂಟ್ ಮಾಡಿಕೊಂಡಿದ್ದೇವೆ.
ಕೋರ್ಟ್ ಮನ್ನಣೆ ಮಾಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

    ನಗರದಲ್ಲಿಂದು ಮಾತನಾಡಿದ ಅವರು, ಹಣ ಕಟ್ಟದಿದ್ದರೆ ಶಿಕ್ಷೆಗೆ ಗುರಿ ಆಗತ್ತೆ ಅಂದ್ರೆ ತಪ್ಪಾಗುತ್ತೆ. ಇದು ನಮ್ಮ ತಂದೆಯವರ ಕಾಲದ್ದು.ಅದನ್ನು ನಿಮಗೆ ಹೇಳೋ ಅವಶ್ಯಕತೆ ಇಲ್ಲ . ಇದು ಹಳೇ ಕೇಸ್ ಚೆಕ್ ಬೌನ್ಸ್ ಬಿಟ್ಟ ಬಿಡಿ, ಅದು ಚೇಂಜ್ ಮಾಡಿ.ಇದು ವಯಕ್ತಿಕ ಅಲ್ಲ, ಕಂಪನಿಗೆ ಸಂಬಂಧಿಸಿದ್ದು, ನೀವು ನೋಡಿ ಹಾಕಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.

    ಪ್ರಣಾವನಂದ ಸ್ವಾಮೀಜಿ, ಸ್ವಾಮೀಜಿನೆ ಅಲ್ಲ. ನಾನು ತಲೆಕಟ್ಟೋರಿಗೆ ಉತ್ತರ ಕೊಡಲ್ಲ.
ಬಿಕೆ ಹರಿಪ್ರಸಾದ್‌ ಹೇಳಿಕೆಗೂ ನೋ ಕಾಮೆಂಟ್ ಎಂದು ಹೇಳುವ ಮೂಲಕ ಪ್ರತಿಕ್ರಿಯೆಗೆ ನಿರಾಕರಿಸಿದರು.

    ರಾಜ್ಯದಲ್ಲಿ ಭಷ್ಟಾಚಾರಕ್ಕೆ ಆಡಳಿತ ಎಂದ ಗೋವಿಙದ ಕಾರಜೋಳಗೆ ಟಾಂಗ್ ನೀಡಿದ ಅವರು,
ಗೋವಿಂದ ಕಾರಜೋಳ ಏನಿದ್ದಾರೆ ಇವಾಗ. ಅವರು ಯಾಕೆ ಸೋತರಂತೆ ಎಂದು ಪ್ರಶ್ನಿಸಿದರು.ಶಾಲಾ ಶೌಚಾಲಯ ಮಕ್ಕಳಿಂದ ಕ್ಲೀನಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದಕ್ಕೆ ಹೊಸ ಕಾನೂನು‌ ಮಾಡ್ತೀದಿವಿ. ನಾಳೆ ನಾಡಿದ್ದು ಹೊಸ ಆದೇಶ ಬರುತ್ತೆ. ಮಕ್ಕಳ ಕಡೆ ಯಾರೂ ಇಂತಹ ಕೆಲಸ ಮಾಡಸಬಾರದು. ಕೆಲವು ಕಡೆ ನಾವು ‌ಕೇಸ್ ಮಾಡಿದ್ದೇವೆ ಎಂದರು.

   ಶಿಕ್ಷಕರ ನೇಮಕಾತಿ ವಿಚಾರ: ಈಗಾಗಲೇ 13 ಸಾವಿರ ಶಿಕ್ಷಕರನ್ನು ತೆಗೆದುಕೊಂಡಿದ್ದೇವೆ. ಮುಂದಿನ ಬಜೆಟ್ ಗೆ ಮುಖ್ಯಮಂತ್ರಿಗೆ ಇನ್ನು ಹೆಚ್ಚಿನ ಬೇಡಿಕೆ ಇಟ್ಟಿದ್ದೇವೆ.ಅನುದಾನಿತ ಶಾಲೆಗಳಿಗೂ ಕೂಡ ಹೆಚ್ಚು ಶಿಕ್ಷಕರನ್ನು ತೆಗೆದುಕೊಳ್ಳಬೇಕಿದೆ.

   2015ರಿಂದ ತೆಗೆದುಕೊಂಡಿಲ್ಲ ಹೀಗಾಗಿ ಅವರನ್ನು ತೆಗೆದುಕೊಳ್ಳಬೇಕು. ಅದನ್ನು ಕೂಡ ಮುಂದಿನ ವರ್ಷದಲ್ಲಿ ತೆಗೆದುಕೊಳ್ಳುತ್ತೇವೆ.‌ ನಮ್ಮ ಸರ್ಕಾರ ಬಂದು 7 ತಿಂಗಳಲ್ಲಿ 13 ಸಾವಿರ ತೆಗೆದುಕೊಂಡಿದ್ದೇವೆ. ಇನ್ನು 43 ಸಾವಿರ ಶಿಕ್ಷಕರ ಕೊರತೆ ಇದೆ.ಮುಖ್ಯಮಂತ್ರಿಗಳು ಜಾಸ್ತಿ ಕೊಡ್ತೀವಿ ಅಂತಾ ಹೇಳಿದ್ದಾರೆ ಎಂದರು.

ಕನ್ನಡ ಪರ ಹೋರಾಟಗಾರರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿ,ಕಾನೂನು ಸುವ್ಯವಸ್ಥೆ ಹೆಚ್ಚು ಕಡಿಮೆ ಆದಾಗ ಹೀಗಾಗುತ್ತೆ. ನ್ಯಾಯಾಲಯದಲ್ಲಿರೋದ್ರಿಂದ್ರ ನಾನು ಹೆಚ್ಚು ಹೇಳೋಕೆ ಹೋಗೋದಿಲ್ಲ. ಅವರಿಗೂ ಗೌರವ ಕೊಡಬೇಕು. ಅವರು ಕೇಳಿದ್ದನ್ನು ಅನುಷ್ಠಾನ ಮಾಡಬೇಕು, ಅದು ಕೊರತೆ ಇದೆ ಎಂದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap