ಜಿಂಬಾಬ್ವೆ ಕ್ರಿಕೆಟ್ ಲೆಜೆಂಡ್​ ವಿಧಿವಶ….!

ರಾರೆ:

      ಜಿಂಬಾಬ್ವೆ ಕ್ರಿಕೆಟ್​ ಇತಿಹಾಸದಲ್ಲಿ ತಂಡದ ಶ್ರೇಷ್ಠ ಆಟಗಾರರಲ್ಲಿ ಸ್ಟ್ರೀಕ್​ ಕೂಡ ಒಬ್ಬರು ಎಂದು ಪರಿಗಣಿಸಲಾಗಿದೆ. ಮಾರಕ ಕ್ಯಾನ್ಸರ್​ ಕಾಯಿಲೆ ವಿರುದ್ಧ ಹೋರಾಡುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ಲೆಜೆಂಡ್​ ಹೆಲ್ತ್​ ಸ್ಟ್ರೀಕ್ (49) ಅವರು ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿಯನ್ನು ಹೆಲ್ತ್​ ಸ್ಟ್ರೀಕ್​ ಅವರ ತಂಡದ ಮಾಜಿ ಸಹ ಆಟಗಾರರು ಖಚಿತಪಡಿಸಿದ್ದಾರೆ.​   

     ಸ್ಟ್ರೀಕ್​ ಅವರು 2000 ದಿಂದ 2004ರವರೆಗೆ ಜಿಂಬಾಬ್ವೆ ತಂಡವನ್ನು ನಾಯಕರಾಗಿ ಮುನ್ನಡೆಸಿದರು. 12 ವರ್ಷಗಳ ಕ್ರಿಕೆಟ್​ ವೃತ್ತಿ ಬದುಕಿನಲ್ಲಿ 65 ಟೆಸ್ಟ್​ ಪಂದ್ಯಗಳು ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ, ಆ ಸಂದರ್ಭದಲ್ಲಿ ಜಿಂಬಾಬ್ವೆ ತಂಡದ ಘನತೆಯನ್ನು ಸ್ಟ್ರೀಕ್​ ಎತ್ತಿಹಿಡಿದಿದ್ದರು. ಜಿಂಬಾಬ್ವೆಯಿಂದ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಕ್ರಿಕೆಟಿಗರಾಗಿ ಇಂದಿಗೂ ಉಳಿದುಕೊಂಡಿದ್ದಾರೆ.

    ಸ್ಟ್ರೀಕ್​ ಅವರ ಸಾವಿಗೆ ಅವರ ಮಾಜಿ ಬೌಲಿಂಗ್ ಪಾರ್ಟ್ನರ್​ ಹೆನ್ರಿ ಒಲಂಗಾ, ಸ್ಕಾಟ್​ ಸ್ಟೈರಿಸ್​ ಹಾಗೂ ಸೀನ್​ ವಿಲಿಯಮ್ಸ್​ ಸೇರಿದಂತೆ ವಿಶ್ವ ಕ್ರಿಕೆಟ್​ ಬಳಗ ಸಂತಾಪ ಸೂಚಿಸಿದೆ.

    ಸ್ಟ್ರೀಕ್ ಅವರು ತಮ್ಮ ಬೌಲಿಂಗ್ ಸ್ಕಿಲ್​ ಮೂಲಕ ಪ್ರಾಥಮಿಕವಾಗಿ ಗುರುತಿಸಿಕೊಂಡರು ಸಹ ಅವರು ಬ್ಯಾಟಿಂಗ್​ನಲ್ಲೂ ಹಿಂದುಳಿದಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮೈದಾನಕ್ಕೆ ಇಳಿಯುತ್ತಿದ್ದ ಸ್ಟ್ರೀಕ್​, ಅದ್ಭುರ ಬ್ಯಾಟಿಂಗ್ ಮಾಡುತ್ತಿದ್ದರು. ಅವರ ವೃತ್ತಿಜೀವನದಲ್ಲಿ 1990 ಟೆಸ್ಟ್ ರನ್ ಮತ್ತು 2943 ಏಕದಿನ ರನ್​ಗಳನ್ನು ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಹರಾರೆಯಲ್ಲಿ ಅಜೇಯರಾಗಿ ಗಳಿಸಿದ 127 ರನ್ ಅವರ ಏಕೈಕ ಟೆಸ್ಟ್ ಶತಕವಾಗಿದೆ. 

    ಸ್ಟ್ರೀಕ್ ಅವರ ವೃತ್ತಿಜೀವನವು 1993ರಲ್ಲಿ ಪಾಕಿಸ್ತಾನದ ವಿರುದ್ಧ ಚೊಚ್ಚಲ ಪ್ರವೇಶದೊಂದಿಗೆ ಪ್ರಾರಂಭವಾಯಿತು. ರಾವಲ್ಪಿಂಡಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ಗಳನ್ನು ಪಡೆಯುವ ಮೂಲಕ ತ್ವರಿತವಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. 2006ರಲ್ಲಿ ಎರಡು ವರ್ಷಗಳ ಒಪ್ಪಂದದ ಅಡಿಯಲ್ಲಿ ವಾರ್ವಿಕ್‌ಷೈರ್‌ ತಂಡದ ನಾಯಕನಾಗಿ ಆಯ್ಕೆಯಾದರು. ಆದರೆ, ಅವರ ಅವಧಿಯಲ್ಲಿ ಫಾರ್ಮ್‌ ಸಮಸ್ಯೆಗಳಿಂದ ಅರ್ಧದಲ್ಲಿ ಒಪ್ಪಂದ ಕೊನೆಗೊಂಡ ಬಳಿಕ 2005ರಲ್ಲಿ ನಿವೃತ್ತಿಯನ್ನು ಆರಿಸಿಕೊಂಡರು. 2007ರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ (ICL) ಗೆ ಸಹಿ ಹಾಕಿದರು. ಇದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರಯಾಣದ ಅಂತ್ಯವನ್ನು ಸೂಚಿಸುತ್ತದೆ.

     ನಿವೃತ್ತಿಯ ನಂತರವೂ ಸ್ಟ್ರೀಕ್, ಜಿಂಬಾಬ್ವೆ, ಸ್ಕಾಟ್ಲೆಂಡ್, ಬಾಂಗ್ಲಾದೇಶ, ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ನೊಂದಿಗೆ ಕೋಚಿಂಗ್ ಪಾತ್ರಗಳನ್ನು ವಹಿಸಿಕೊಳ್ಳುವ ಮೂಲಕ ಕ್ರೀಡೆಯೊಂದಿಗೆ ತಮ್ಮ ಸಂಪರ್ಕವನ್ನು ಮುಂದುವರಿಸಿದ್ದರು. ಆದರೆ, ಭ್ರಷ್ಟಾಚಾರ ವಿರೋಧಿ ಉಲ್ಲಂಘನೆಗಾಗಿ ಐಸಿಸಿ ಎಂಟು ವರ್ಷಗಳ ನಿಷೇಧವನ್ನು ವಿಧಿಸಿದಾಗ ಸ್ಟ್ರೀಕ್​ ಅವರ ವೃತ್ತಿಜೀವನಕ್ಕೆ ಮಸಿ ಬಳಿದಂತಾಯಿತು. ಈ ಹಿನ್ನಡೆಯ ಹೊರತಾಗಿಯೂ, ಕ್ರಿಕೆಟಿಗ ಮತ್ತು ನಾಯಕನಾಗಿ ಸ್ಟ್ರೀಕ್ ಅವರ ಪರಂಪರೆ ಅಳಿಸಲಾಗದು. 

 

Recent Articles

spot_img

Related Stories

Share via
Copy link
Powered by Social Snap