ಬೆಂಗಳೂರು :
ಜೂನ್ 15 ರಂದು ಸಿಇಟಿ ಫಲಿತಾಂಶ ಪ್ರಕಟಿಸಲು ಮುಂದಾಗಿದೆ. ಸಿಇಟಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಪ್ರಸ್ತುತ ಸಿಇಟಿ ಫಲಿತಾಂಶ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಎರಡನ್ನೂ ಆಧರಿಸಿ ರ್ಯಾಂಕ್ ಪಟ್ಟಿ ಸಿದ್ದಪಡಿಸುವ ಕಾರ್ಯ ನಡೆಯುತ್ತಿದ್ದು, ಜೂನ್ 15 ರಂದು ಸಿಇಟಿ ಫಲಿತಾಂಶ ಪ್ರಕಟಿಸಲಿದೆ.
ಕಳೆದ ಮೇ ತಿಂಗಳು ನಡೆದ ಸಿಇಟಿ ಫಲಿತಾಂಶ ಜೂನ್ 15 ರಂದು ಬಿಡುಗಡಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ಜೂನ್ 12 ಅಥವಾ 14 ರಂದು ಫಲಿತಾಂಶ ನೀಡಲು ಸಿದ್ದತೆ ನಡೆದಿತ್ತು. ಆದರೆ ಫಲಿತಾಂಶ ಬಿಡುಗಡೆಗೆ ಉನ್ನತ ಶಿಕ್ಷಣ ಲಭ್ಯವಾಗದ ಕಾರಣ ಜೂ. 15 ರಂದು ದಿನಾಂಕ ನಿಗದಿಪಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ