ಡಬಲ್ ಎಂಜಿನ್ ಸರ್ಕಾರವಿದ್ದಲ್ಲಿ ಅಭಿವೃದ್ಧಿಗೆ ಬಲ, ತುಮಕೂರು ನಗರವೇ ನಿದರ್ಶನ: ಶಾಸಕ

ತುಮಕೂರು

      ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಮಾತ್ರ ಅಭಿವೃದ್ಧಿಗೆ ಬಲ ದೊರೆಯುತ್ತದೆ. ಇದಕ್ಕೆ ತುಮಕೂರು ನಗರವೇ ನಿದರ್ಶನವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸ್ಮಾರ್ಟ್ಸಿಟಿ ಹಾಗೂ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಸ್ತುತ ಸಿಎಂ ಬಸವರಾಜಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ನೀಡಿದ ವಿಶೇಷ ಕೊಡುಗೆಗಳಿಂದಾಗಿ ತುಮಕೂರು ನಗರ ಪ್ರಗತಿಯತ್ತ ದಾಪುಗಾಲಿಟ್ಟಿದೆ ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಪ್ರಜಾಪ್ರಗತಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

     ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರದಿಂದ ಕ್ಷೇತ್ರಕ್ಕೆ ಅನುಕೂಲವಾಗಿದೆಯೇ?
ನಾನು 2018ರಲ್ಲಿ ತುಮಕೂರು ನಗರದ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು. 14 ತಿಂಗಳ ಬಳಿಕ ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿತು. ಕೇಂದ್ರ-ರಾಜ್ಯದಲ್ಲಿ 2 ಕಡೆ ಒಂದೇ ಪಕ್ಷದ ಸರ್ಕಾರದಿಂದ ಅಭಿವೃದ್ಧಿವೇಗ ಪಡೆಯಿತು.

     ಕೇಂದ್ರದ ಸ್ಮಾರ್ಟ್ಸಿಟಿ ಯೋಜನೆಯಡಿ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿ, ರಿಂಗ್ ರಸ್ತೆ, ಕೆರೆ, ಉದ್ಯಾನವನಗಳು, ಆತ್ಯಾಧುನಿಕ ಸ್ಟೇಡಿಯಂ, ಡಿಜಿಟಲ್ ಗ್ರಂಥಾಲಯ, ಹೀಗೆ ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ತುಮಕೂರು ನಗರದಲ್ಲಿ ನೆರವೇರಿದ್ದು, ಬಸ್ ನಿಲ್ದಾಣ ಸೇರಿ ಕೆಲವು ಕಾಮಗಾರಿ ಮಾತ್ರ ಬಾಕಿ ಇವೆ. ರಾಜ್ಯ ಬಿಜೆಪಿ ಸರ್ಕಾರ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ ಕ್ಷೇತ್ರಕ್ಕೆಕೊಟ್ಟ ಒತ್ತಿನಿಂದಾಗಿ 40 ವರ್ಷಗಳಲ್ಲಿ ಕಾಣದ ಅಭಿವೃದ್ಧಿ 5 ವರ್ಷದಲ್ಲಿ ನಗರದಲ್ಲಿ ಕಾಣಿಸುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಟ್ರೋಮಾ ಕೇರ್ ಸೆಂಟರ್ ಸ್ಥಾಪನೆಯಾಗಿದೆ. 100ಬೆಡ್‌ಗೆ ಮೇಲ್ದರ್ಜೆಗೇರಿಸಲಾಗಿದೆ. ಅಮಾನಿಕೆರೆ, ಗಂಗಸಂದ್ರ, ಮರಳೂರು ಕೆರೆ ಅಭಿವೃದ್ಧಿ ಕಾಮಗಾರಿಗಳು ಬಿಜೆಪಿ ಸರ್ಕಾರದ ಕೊಡುಗೆಗಳಿಗೆ ನಿದರ್ಶನವಾಗಿದೆ

ಸ್ಮಾರ್ಟ್ಸಿಟಿ ಕಾಮಗಾರಿ ಲೋಪ ಆರೋಪಗಳ ಕುರಿತು ನೀವೇನು ಹೇಳುವಿರಿ?

     ಸ್ಮಾರ್ಟ್ಸಿಟಿ ಯೋಜನೆ ಜಿಲ್ಲೆಯಲ್ಲಿ ತುಮಕೂರು ನಗರಕ್ಕೆ ಮಾತ್ರ ಧಕ್ಕಿದ್ದು, ಸಾವಿರಾರು ಕೋಟಿ ಕಾಮಗಾರಿ ನಡೆಯುವಾಗ ಗುತ್ತಿಗೆದಾರರಿಂದ ಕೆಲವು ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲದಿರುವುದು ಕಂಡುಬAದಿತು. ಈ ಬಗ್ಗೆ ಸÀಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕೆಂದು ತಿಳಿಸಿ ಸಕ್ಷಮ ಪ್ರಾಧಿಕಾರದಿಂದ ಲೋಪಗಳನ್ನು ಸರಿಪಡಿಸುವ ಕ್ರಮವಾಗಿದೆ. ಚುನಾವಣೆ ಕಾರಣಕ್ಕೆ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡಲಾಗುತ್ತಿದೆ. ತುಮಕೂರು ಸ್ಮಾರ್ಟ್ಸಿಟಿಗೆ ರಾಜ್ಯದ ನಂ.1 ಸ್ಮಾರ್ಟ್ಸಿಟಿ ಹಾಗೂ ದೇಶದ 20 ಅಗ್ರ ಸ್ಮಾರ್ಟ್ ಸಿಟಿಯ ಪಟ್ಟಿಯಲ್ಲಿ ಸ್ಥಾನ ದೊರೆತಿದ್ದು, ಕಾಮಗಾರಿ ಪೂರ್ಣ ಕಳಪೆಯಾಗಿದ್ದಲ್ಲಿ ಈ ಮನ್ನಣೆ ಸಿಗುತ್ತಿರಲಿಲ್ಲ.

ಚುನಾವಣಾ ಅಖಾಡದಲ್ಲಿರುವವರ ನಿಮ್ಮ ಎದುರಾಳಿಗಳ ಬಗ್ಗೆ ಏನು ಹೇಳುವಿರಿ?

        ನಾನು ಪ್ರಸಕ್ತ ಚುನಾವಣೆ ಸೇರಿ 3 ಬಾರಿ ಸ್ಪರ್ಧಿಸಿದ್ದು, 2013ರಲ್ಲಿ ಪರಾಭವಗೊಂಡು. 2018ರಲ್ಲಿ 2ನೇ ಪ್ರಯತ್ನದಲ್ಲಿ ಗೆದ್ದು ಶಾಸಕನಾದೆ. ತುಮಕೂರು ನಗರದಲ್ಲಿ ನಮಗೆ ಕಾಂಗ್ರೆಸ್ ಪ್ರತಿಸ್ಪರ್ಧಿ. 1994ರ ಬಳಿಕ ಜೆಡಿಎಸ್ ಕ್ಷೇತ್ರದಲ್ಲಿ ಖಾತೆ ತೆರೆಯಲಾಗಿಲ್ಲ. ಚುನಾವಣೆಯನ್ನು ಪ್ರಜಾಪ್ರಭುತ್ವದ ಮಾರ್ಗದಲ್ಲಿಎದುರಿಸಬೇಕು. ಹಣ ಸೀರೆ ಇತ್ಯಾದಿ ಆಮಿಷಗಳಿಗೆ ಬಲಿಯಾದರೆ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗು ವುದಿಲ್ಲ. ತುಮಕೂರಿನ ಪ್ರಜ್ಞಾವಂತ ಮತದಾರರು ಚುನಾವಣಾ ಅಖಾಡದಲ್ಲಿ ಯಾರು ಯೋಗ್ಯರು ಎಂಬುದನ್ನು ಅರಿಯುವಷ್ಟು ಪ್ರಬುದ್ಧರಿದ್ದಾರೆ. ಶಾಸಕನಾಗಿ ಮಾಡಿರುವ ಕಾರ್ಯಗಳು ಕಣ್ಣಮುಂದಿದೆ

 ಅಭಿವೃದ್ಧಿ ಮತ್ತು ಒಳ್ಳೆ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಬಿಜೆಪಿ ಶಾಸಕನಾಗಿ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡುವ ಅಚಲ ವಿಶ್ವಾಸವಿದೆ.

      ಕಾಂಗ್ರೆಸ್ ಗ್ಯಾರಂಟಿ ಕಾರ್ಡ್, ಜೆಡಿಎಸ್ ಪಂಚರತ್ನ ಯೋಜನೆಗಳ ಬಗ್ಗೆ ಏನು ಹೇಳುವಿರಿ?
ಚುನಾವಣೆ ಸಂದರ್ಭದಲ್ಲಿ ಪ್ರತೀ ರಾಜಕೀಯ ಪಕ್ಷಗಳು ಪ್ರಣಾಳಿಕೆ ಮೂಲಕ ಮತದಾರರಿಗೆ ಹಲವು ಭರವಸೆಗಳನ್ನು ಮುಂದಿಡುತ್ತಿವೆ. ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಕಾರ್ಡ್ಗಳು, ಜೆಡಿಎಸ್‌ನ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಬೇಕಾದರೆ ರಾಜ್ಯ ಬಜೆಟ್‌ಗೂ ದುಪ್ಪಟ್ಟಾದ ಅನುದಾನ ಅವಶ್ಯಕ. ಹಾಗಾಗಿ ಬಿಜೆಪಿ ಪ್ರಜಾಪ್ರಣಾಳಿಕೆಯನ್ನು ಹೊರತಂದು ಸಾಕಾರಗೊಳಿಸಬಹುದಾದ ಯೋಜನೆಗಳನ್ನು ಮಾತ್ರ ಘೋಷಿಷಿದೆ. ಬಿಜೆಪಿಯದ್ದು ಭರವಸೆಯಲ್ಲ ಬದ್ದತೆ.

     ಪ್ರಧಾನಿ ಮೋದಿ ಅವರ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ತತ್ವದಡಿ ಎಲ್ಲರನ್ನೂ, ಎಲ್ಲರಂಗದ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಕಲ್ಪವಾಗಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಮತ್ತೆ ಬಿಜೆಪಿ ಸರ್ಕಾರದಿಂದ ಮತ್ತಷ್ಟು ಯೋಜನೆಗಳನ್ನು ಜಾರಿಗೆತಂದು ತುಮಕೂರು ನಗರವನ್ನು ಸ್ವಚ್ಛ, ಸುಂದರ, ರಾಜಧಾನಿಗೆ ಪೂರಕವಾದ ಉಪನಗರಿಯಾಗಿ ಅಭಿವೃದ್ಧಿ ಪಡಿಸುವ ಸಂಕಲ್ಪ ಹೊಂದಿದ್ದೇನೆ.

 

Recent Articles

spot_img

Related Stories

Share via
Copy link
Powered by Social Snap