ಡ್ರಗ್ಸ್ ವಿಚಾರ ಸ್ಟಾರ್ ನಟನ ಮಗನಿಗೆ ಜಾಮೀನು

ಬೆಂಗಳೂರು: ನಗರದ ಹೋಟೆಲ್‌ ವೊಂದರಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್‌ ಸೇವನೆ ಮಾಹಿತಿ ಪಡೆದು ಹಲಸೂರು ಪೊಲೀಸರು ದಾಳಿ ನಡೆಸಿದಾಗ ಬಾಲಿವುಡ್‌ ಹಿರಿಯ ನಟ ಶಕ್ತಿಕಪೂರ್‌ ಪುತ್ರ ಸಿದ್ಧಾಂತ್ ಕಪೂರ್‌ ಸೇರಿ ಐವರನ್ನು ಬಂಧಿಸಲಾಗಿತ್ತು.

ಕರೆದಾಗ ವಿಚಾರಣೆಗೆ ಹಾಜರಾಗಬೇಕು : ಸೋಮವಾರ ಸಿದ್ದಾಂತ್ ಕಪೂರ್ ಸೇರಿ 4 ಜನರಿಗೆ ಜಾಮೀನು ಸಿಕ್ಕಿದೆ. ಇವರಲ್ಲಿ ಪೊಲೀಸರು ವಿಚಾರಣೆಗೆ ಹಾಜರಾಗಲು ತಿಳಿಸಿದಾಗ ಬರಲು ಹೇಳುತ್ತಾರೋ ಆಗ ಅವರು ಠಾಣೆಗೆ ಬರಬೇಕು ಎಂದು ಸೂಚಿಸಲಾಗಿದೆ ಎಂಬುದು ಪೊಲೀಸ್ ಮೂಲಕಗಳಿಂದ ಮಾಹಿತಿ ಸಿಕ್ಕಿದೆ.

ಎಂಜಿ ರಸ್ತೆಯ ಸ್ಟಾರ್‌ ಹೋಟೆಲ್‌ನಲ್ಲಿ ಭಾನುವಾರ ರಾತ್ರಿ ಡಿಜೆ ಪಾರ್ಟಿ ನಡೆಯುತ್ತಿತ್ತು. ಪಾರ್ಟಿಯಲ್ಲಿ ಡ್ರಗ್ಸ್‌ ಸರಬರಾಜು ನಡೆದಿದೆ ಎಂಬ ಮಾಹಿತಿ ಆಧರಿಸಿ ಹೋಟೆಲ್‌ ಮೇಲೆ ದಾಳಿ ನಡೆಸಿದಾಗ ಒಂದು ಪಾಕೆಟ್‌ ಗಾಂಜಾ, ಏಳು  ಪತ್ತೆಯಾಗಿದೆ.

ಆರೋಪಿಗಳು : ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 35 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ನಟ ಸಿದ್ಧಾಂತ್ ಕಪೂರ್‌ ಸೇರಿ ಐವರು ಡ್ರಗ್ಸ್‌ ಸೇವಿಸಿರುವುದು ಧೃಡಪಟ್ಟಿದೆ. ಹೀಗಾಗಿ, ಆರೋಪಿಗಳಾದ ಸಿದ್ದಾಂತ್‌ ಕಪೂರ್‌, ಅಕಿಲ್‌ ಸೋನಿ, ಹರ್ಜೋತ್‌ ಸಿಂಗ್‌, ಅಖಿಲ್‌,ಹನಿ ಎಂಬುವವರ ವಿರುದ್ಧ ಮಾದಕವಸ್ತು ಸೇವನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳಿಗೆ ಡ್ರಗ್ಸ್ ಸರಬರಾಜು ಮಾಡಿದ್ದು ಯಾರು.? ನಗರದಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್‌ ತಲುಪಿಸಿದವರ ಯಾರು.? ಎಂಬದರ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್‌ ಮಾಹಿತಿ ನೀಡಿದ್ದಾರೆ.