ದೇಹದ ತೂಕ ಇಳಿಸಿಕೊಳ್ಳಲು ಖರ್ಜೂರ ತಿನ್ನಿ..!

 Image result for karjura

      ಮರುಭೂಮಿಯ ಬಂಗಾರವೆಂದೇ ಪರಿಗಣಿಸಲಾರುವ ಖರ್ಜೂರದಲ್ಲಿ ಹಲವಾರು ರೀತಿಯ ವಿಟಮಿನ್ ಗಳು, ಖನಿಜಾಂಶಗಳು, ಕ್ಯಾಲ್ಸಿಯಂ ಮತ್ತು ಕಬ್ಬಿನಾಂಶವಿದೆ. ಖರ್ಜೂರವನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ರಕ್ತಹೀನತೆ ದೂರವಾಗುವುದು ಮಾತ್ರವಲ್ಲದೆ ಇನ್ನೂ ಹಲವಾರು ಆರೋಗ್ಯ ಲಾಭಗಳು ಇವೆ. ಖರ್ಜೂರವನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದು ನಿಮ್ಮನ್ನು ಫಿಟ್ ಆಗಿ ಇಡುವುದು ಮಾತ್ರವಲ್ಲದೆ, ಪ್ರತಿರೋಧಕ ಶಕ್ತಿ ಹೆಚ್ಚಿಸಿ, ವಿವಿಧ ರೀತಿಯ ಕಾಯಿಲೆಗಳು ಬರದಂತೆ ತಡೆಯುವುದು. ತೂಕ ಇಳಿಸಲು ಬಯಸುವವರಿಗು ಖರ್ಜೂರವು ತುಂಬಾ ಪರಿಣಾಮಕಾರಿ.

      ತೂಕ ಕಳೆದುಕೊಳ್ಳಲು ಖರ್ಜೂರವು ಯಾವ ರೀತಿ ನೆರವಾಗುವುದು ಎಂದು ನೀವು ತಿಳಿಯಿರಿ. ಕರಿದಿರುವ ತಿಂಡಿಗಳ ಬದಲಿಗೆ 4-5 ಖರ್ಜೂರವನ್ನು ತಿನ್ನಬಹುದು. ಖರ್ಜೂರದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಮತ್ತು ಇದು ಆರೋಗ್ಯಕ್ಕೆ ತುಂಬಾನೇ ಉಪಯೋಗಿ. ತೂಕ ಇಳಿಸಲು ಖರ್ಜೂರವು ಯಾವ ರೀತಿ ನಿಮಗೆ ನೆರವಾಗುವುದು ಎಂದು ಮುಂದೆ ತಿಳಿಯಿರಿ..

ಹೊಟ್ಟೆ ತುಂಬಿದಂತೆ ಮಾಡುವುದು:

Image result for kharjura for health

ಖರ್ಜೂರದಲ್ಲಿ ವಿಟಮಿನ್ ಗಳು ಹಾಗೂ ಖನಿಜಾಂಶಗಳಾಗಿರುವ ಸೆಲೆನಿಯಂ, ಮೆಗ್ನಿಶಿಯಂ, ತಾಮ್ರ ಇತ್ಯಾದಿಗಳು ಇವೆ. ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶವನ್ನು ಹೊಂದಿರುವ ಇದು ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ತಿನ್ನುವ ಬಯಕೆ ಕಡಿಮೆ ಮಾಡಿಸಿ, ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುವುದು. 

ವಿರೇಚಕ ಗುಣ:

      ಕರುಳಿನ ಕ್ರಿಯೆಗಳು ಸರಾಗವಾಗಿ ಆಗಲು ಮತ್ತು ಮಲಬದ್ಧತೆ ನಿವಾರಣೆ ಮಾಡಲು ಖರ್ಜೂರವು ನೆರವಾಗುವುದು. ಇದು ಆರೋಗ್ಯಕರ ಜೀರ್ಣಕ್ರಿಯೆ ವ್ಯವಸ್ಥೆ ಕಾಪಾಡುವುದು ಮತ್ತು ಚಯಾಪಚಯ ವೃದ್ಧಿಸುವುದು. ಈ ವಿಧದಲ್ಲಿ ಇದು ತೂಕ ಕಳೆದುಕೊಳ್ಳಲು ನೆರವಾಗುವುದು. ತೂಕ ಇಳಿಸಲು ಮತ್ತು ಆರೋಗ್ಯಕಾರಿ ಹೊಟ್ಟೆಗೆ ಖರ್ಜೂರ ತಿನ್ನಬಹುದು.

ಜೀರ್ಣಕ್ರಿಯೆ ಉತ್ತೇಜಿಸುವುದು:

      ತೂಕ ಇಳಿಸಲು ಖರ್ಜೂರವು ಹೇಗೆ ನೆರವಾಗುವುದು? ಖರ್ಜೂರದಲ್ಲಿ ನಿಕೋಟಿನ್ ಇದ್ದು, ಜೀರ್ಣಕ್ರಿಯೆ ವ್ಯವಸ್ಥೆ ಮತ್ತು ಕರುಳಿನ ಸಮಸ್ಯೆ ನಿವಾರಣೆ ಮಾಡುವುದು. ಖರ್ಜೂರವು ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವುದು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾ ಕೊಲ್ಲುವುದು. ಜೀರ್ಣಕ್ರಿಯೆ ಸುಧಾರಣೆ ಮಾಡುವ ಕಾರಣದಿಂದ ಇದು ತೂಕ ಕಳೆದುಕೊಳ್ಳಲು ಸಹಕಾರಿ. ತೂಕ ಕಳೆದುಕೊಳ್ಳಲು ಇದು ಖರ್ಜೂರದ ಅತ್ಯುತ್ತಮ ಲಾಭವಾಗಿದೆ.  

ಶಕ್ತಿಯ ಆಗರ:

      ಖರ್ಜೂರದಲ್ಲಿ ಕ್ಯಾಲರಿ ಕಡಿಮೆ ಮತ್ತು ಶಕ್ತಿಯು ಉನ್ನತ ಮಟ್ಟದಲ್ಲಿದೆ. ನೈಸರ್ಗಿಕ ಸಕ್ಕರೆಯಾಗಿರುವ ಫ್ರಕ್ಟೋಸ್ ಮತ್ತು ಗ್ಲೂಕೋಸ್ ಇದರಲ್ಲಿದೆ. ಇದು ದೇಹಕ್ಕೆ ತಕ್ಷಣ ಶಕ್ತಿ ನೀಡುವುದು. ಕಾರ್ಬ್ರೋಹೈಡ್ರೇಟ್ಸ್ ಅಧಿಕ ಮತ್ತು ಕ್ಯಾಲರಿ ಹೆಚ್ಚಿರುವ ಆಹಾರದ ಬದಲು ಖರ್ಜೂರ ಸೇವಿಸಿ.

ಕೊಲೆಸ್ಟ್ರಾಲ್ ಮತ್ತು ಟ್ರಾನ್ಸ್ ಫ್ಯಾಟ್ ಮುಕ್ತ:

      ಈ ಎರಡು ಅಂಶಗಳು ತೂಕ ಹೆಚ್ಚಿಸಲು ಪ್ರಮುಖ ಕಾರಣ. ಖರ್ಜೂರವು ತುಂಬಾ ರುಚಿಕರವಾಗಿದ್ದು, ಕೊಬ್ಬಿನಿಂದ ಮುಕ್ತವಾಗಿದೆ. ನೀವು ಇದನ್ನು ಹಾಗೆ ಸೇವಿಸಬಹುದು. ಎಲ್ಲಾ ಪೋಷಕಾಂಶಗಳು ಇರುವ ಕಾರಣದಿಂದ ಹೆಚ್ಚಿನ ಕ್ಯಾಲರಿ ದಹಿಸಲು ನೆರವಾಗುವುದು.

ಆಹಾರ ಪಥ್ಯ:

Related image

      ನೀವು ತುಂಬಾ ಕಠಿಣ ಆಹಾರ ಪಥ್ಯ ಮಾಡುತ್ತಿದ್ದರೆ ಆಗ ನೀವು ಎಲ್ಲಾ ಪೋಷಕಾಂಶಗಳಿಂದ ವಂಚಿತರಾಗುವಿರಿ ಮತ್ತು ಹೆಚ್ಚು ತಿಂದು ತೂಕ ಹೆಚ್ಚಿಸಿಕೊಳ್ಳುವಿರಿ. ನಿಮ್ಮ ಕಾರ್ಬ್ರೋಹೈಡ್ರೇಟ್ ಬಯಕೆಯು ಹೆಚ್ಚಾಗಿ ತೂಕ ಹೆಚ್ಚಾಗುವುದು. ನೀವು ಖರ್ಜೂರವನ್ನು ಕೇವಲ ಪೋಷಕಾಂಶಗಳನ್ನು ಪಡೆಯಲು ಮಾತ್ರವಲ್ಲದೆ, ತೂಕ ಕಳೆದುಕೊಳ್ಳಲು ಬಳಸಿ.

ಕೊಬ್ಬು ವಿಘಟಿಸಲು ನೆರವಾಗುವುದು:

      ಖರ್ಜೂರದಲ್ಲಿ ಇರುವಂತಹ ಪೊಟಾಶಿಯಂ ಮತ್ತು ಸಲ್ಫರ್ ನಂತಹ ಅಂಶಗಳು ಹೃದಯದ ಆರೋಗ್ಯ ಕಾಪಾಡಲು ನೆರವಾಗುವುದು ಮಾತ್ರವಲ್ಲದೆ, ದೇಹದಲ್ಲಿ ಕೊಬ್ಬನ್ನು ವಿಘಟಿಸುವುದು. ಬೆಳಗ್ಗೆ ಉಪಾಹಾರದಲ್ಲಿ ನೀವು ಖರ್ಜೂರ ಸೇವನೆ ಮಾಡಿದರೆ ಅದರಿಂದ ಚಯಾಪಚಯ ಕ್ರಿಯೆ ಹೆಚ್ಚುವುದು ಮತ್ತು ತೂಕ ಇಳಿಯುವುದು.

ಜಡತ್ವ ನಿವಾರಣೆ:

      ಹಸಿವಾದ ಬಳಿಕ ನೀವು ಹೆಚ್ಚು ಆಹಾರ ತಿಂದರೆ ಆಗ ನಿಮಗೆ ಆಲಸ್ಯ ಬರುವುದು. ಇದರಿಂದ ನಿಮ್ಮ ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದು ಮತ್ತು ನಿಮ್ಮಲ್ಲಿ ಜಡತ್ವ ಬರುವುದು. ನೀವು ಖರ್ಜೂರ ಸೇವನೆ ಮಾಡಿದರೆ ಆಗ ನೀವು ತುಂಬಾ ತಾಜಾ ಹಾಗೂ ಶಕ್ತಿಯುತವಾಗಿರುವಿರಿ. ನೀವು ತುಂಬಾ ಚುರುಕಾಗಿ, ಹೆಚ್ಚು ತೂಕ ಕಳೆದುಕೊಳ್ಳುವಿರಿ. ಇನ್ನು ನಿಯಮಿತವಾಗಿ ಖರ್ಜೂರದ ಸೇವನೆಯಿಂದ ವಿಶೇಷವಾಗಿ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ಕರಗುವ ನಾರು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ. ಬನ್ನಿ ಖರ್ಜೂರದ ಇನ್ನಿತರ ಪ್ರಯೋಜನಗಳ ಬಗ್ಗೆ ನೋಡೋಣ

ಮಲಬದ್ಧತೆಯಿಂದ ರಕ್ಷಿಸುತ್ತದೆ:

      ಕೆಲವು ಖರ್ಜೂರಗಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಈ ನೀರನ್ನು ಮತ್ತು ಖರ್ಜೂರವನ್ನು ಸೇವಿಸುವುದರಿಂದ ನಿಸರ್ಗದ ಕರೆಗೆ ಸುಲಭವಾಗಿ ಸ್ಪಂದಿಸುವಂತಾಗುತ್ತದೆ. ವಾಸ್ತವವಾಗಿ ಈ ನೀರು ಒಂದು ಉತ್ತಮ ವಿರೇಚಕವಾಗಿದೆ.

ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ:

      Related imageಖರ್ಜೂರದಲ್ಲಿ ಉತ್ತಮ ಪ್ರಮಾಣದ ಕಬ್ಬಿಣ ಇರುವ ಕಾರಣ ರಕ್ತದ ಕೆಂಪುಕಣಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತವೆ.ವಿಶೇಷವಾಗಿ ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಇದು ಉತ್ತಮವಾಗಿದೆ. ಬಾಣಂತಿಯರಿಗೆ ಮತ್ತು ಮಾಸಿಕ ದಿನಗಳಲ್ಲಿ ಮಹಿಳೆಯರಿಗೆ ಖರ್ಜೂರದ ಸೇವನೆ ಉತ್ತಮ.

ಶಕ್ತಿಯನ್ನು ಹೆಚ್ಚಿಸುತ್ತದೆ

      ಕೆಲವು ಖರ್ಜೂರಗಳನ್ನು ಕೊಂಚ ಹಾಲಿನಲ್ಲಿ ಗೊಟಾಯಿಸಿ ಕೊಂಚ ಜೇನು ಸೇರಿಸಿ ಕುಡಿದರೆ ತಕ್ಷಣ ದೇಹದಲ್ಲಿ ಶಕ್ತಿ ಸಂಚಾರವಾಗುತ್ತದೆ. ಈ ಪೇಯ ಉತ್ತಮ ವೀರ್ಯವರ್ಧಕವೂ ಆಗಿದೆ.

ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ:

      ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ನಿತ್ಯವೂ ಮೂರರಿಂದ ನಾಲ್ಕು ಖರ್ಜೂರಗಳನ್ನು ತಿನ್ನುವ ಮೂಲಕ ನಿಧಾನವಾಗಿ ಆರೋಗ್ಯಕರ ಮಟ್ಟಕ್ಕೆ ಇಳಿಯಲು ನೆರವಾಗುತ್ತದೆ.

ಅತಿಸಾರದಿಂದ ರಕ್ಷಿಸುತ್ತದೆ:

      ಖರ್ಜೂರದಲ್ಲಿರುವ ಪೊಟ್ಯಾಶಿಯಂ ಅತಿಸಾರ ತಡೆಯುವಲ್ಲಿ ನೆರವಾಗುತ್ತದೆ. ಅಲ್ಲದೇ ಕರುಳುಗಳಲ್ಲಿ ಆಶ್ರಯ ಪಡೆದಿರುವ ಬ್ಯಾಕ್ಟೀರಿಯಾ ಮತ್ತು ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ:

     ಖರ್ಜೂರದ ಸೇವನೆಯಿಂದ ಹೃದಯದ ಕ್ಷಮತೆ ಹೆಚ್ಚುತ್ತದೆ. ಇದಕ್ಕಾಗಿ ಕೆಲವು ಖರ್ಜೂರಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ನಿತ್ಯವೂ ಬೆಳಿಗ್ಗೆ ಸೇವಿಸುವ ಮೂಲಕ ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಕೂದಲ ಆರೋಗ್ಯಕ್ಕೆ:

      Related imageಪ್ರತಿದಿನ ಸುಮಾರು ಎರಡರಿಂದ ಮೂರು ಖರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೂದಲ ಬುಡಗಳು ದೃಢಗೊಳ್ಳುವ ಮೂಲಕ ಕೂದಲು ಉದುರುವ ಸಂಖ್ಯೆ ಕಡಿಮೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಬಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲಿಗೂ ಉತ್ತಮ ಪೋಷಣೆ ದೊರೆತು ಆರೋಗ್ಯಕರವಾಗುತ್ತದೆ. ಇದು ನಿಮ್ಮ ಕೂದಲನ್ನು ಉದ್ದ ಮತ್ತು ಆರೋಗ್ಯಕರವಾಗಿಸುತ್ತದೆ.

ಹಾಲಿನೊಂದಿಗೆ ಮಿಶ್ರ ಮಾಡಿಕೊಂಡು ಸೇವಿಸಿ:

Image result for khajur with milk

      ಸೇವಿಸಿ ನೈಸರ್ಗಿಕ ಸಕ್ಕರೆಯಾದ ಗ್ಲುಕೋಸ್, ಸುಕ್ರೋಸ್ ಮತ್ತು ಫ್ರುಕ್ಟೋಸ್ ಅನ್ನು ಖರ್ಜೂರ ಒಳಗೊಂಡಿರುವುದರಿಂದ ಶಕ್ತಿ ವರ್ಧಕ ಡ್ರೈ ಫ್ರುಟ್ ಇದಾಗಿದೆ. ಖರ್ಜೂರದಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಇದನ್ನು ಹಾಲಿನೊಂದಿಗೆ ಮಿಶ್ರ ಮಾಡಿಕೊಂಡು ಸೇವಿಸಬೇಕು. ಇದೊಂದು ಉತ್ತಮ ನ್ಯೂಟ್ರಿಶಿಯಸ್ ಬೆರೆತ ಪೇಯವಾಗಿದೆ. ಖರ್ಜೂರದಲ್ಲಿನ ಕ್ಯಾಲೋರಿ ಅಂಶ ಕಡಿಮೆ ಇದ್ದು ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸುವವರಿಗೆ ಹೆಚ್ಚು ಹೊಂದುವ ಹಣ್ಣಾಗಿದೆ.

ವಿಟಮಿನ್‌ಗಳ ಆಗರ:

      ಪ್ರೋಟೀನ್, ಜೀರ್ಣಕ್ರಿಯೆಗೆ ಸಹಾಯಕವಾಗುವ ಫೈಬರ್ ಮತ್ತು ವಿಟಮಿನ್ ಬಿ1, ಬಿ2, ಬಿ3 ಮತ್ತು ಬಿ5 ಅಲ್ಲದೆ ವಿಟಮಿನ್ ಎ1 ಮತ್ತು ಸಿ ಯಿಂದ ಸಮೃದ್ಧಗೊಂಡಿದೆ. ಇನ್ನು ಖರ್ಜೂರದ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ, ತನ್ಮೂಲಕ ನರಗಳ ಒಳಭಾಗವನ್ನು ಜಿಡ್ಡು ಮುಕ್ತವಾಗಿಸುವಲ್ಲಿ ನೆರವಾಗುತ್ತದೆ.

ವಿಟಮಿನ್ ಕೆ:

      ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಲ್ಲಿ ಸಹಕಾರಿ. ಗರ್ಭಿಣಿಯರಿಗೆ ಈ ವಿಟಮಿನ್ ಬಹಳ ಅಗತ್ಯವಾಗಿರುತ್ತದೆ. ಮಗುವಿನ ಅಸ್ತಿಪಂಜರ ಹಾಗೂ ಮೂಳೆಗಳ ಬೆಳವಣಿಗೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

ನಾರಿನಂಶ:

Related image

      ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆಗೆ ನಾರಿನಂಶದ ಪಾತ್ರ ಮಹತ್ವವಾದದ್ದು. ಈ ಹಣ್ಣು ಉತ್ತಮ ನಾರಿನಂಶವನ್ನು ಹೊಂದಿದೆ. ಗರ್ಭಾವಸ್ಥೆಯಲ್ಲಿ ಇರುವಾಗ ಉಂಟಾಗುವ ಮಲಬದ್ಧತೆ, ಕೊಲೆಸ್ಟ್ರಾಲ್ ಸಮಸ್ಯೆ ಹಾಗೂ ಕೆಲವು ಸೋಂಕುಗಳನ್ನು ತಡೆಗಟ್ಟುವಲ್ಲಿ ಸಹಾಯಮಾಡುತ್ತದೆ. ಇನ್ನು ಖರ್ಜೂರದಲ್ಲಿ ಫೋಲೇಟ್‍ನ ಪ್ರಮಾಣ ಸಮೃದ್ಧವಾಗಿದೆ. ಇದು ಹೊಸ ಕೋಶಗಳ ರಚನೆಗೆ ಸಹಾಯಮಾಡುತ್ತದೆ. ಶಿಶುವಿನ ಮೆದುಳು ಹಾಗೂ ಬೆನ್ನುಹುರಿಯ ಆರೋಗ್ಯಕರ ಬೆಳವಣಿಗೆಗೆ ಸಹಾಯವಾಗುತ್ತದೆ.

 

Recent Articles

spot_img

Related Stories

Share via
Copy link
Powered by Social Snap