ನಾಗರಿಕರಿಗೆ ಸೌಲಭ್ಯ ಕಲ್ಪಿಸುವುದು ಸವಾಲಿನ ಕೆಲಸ : ಸಿದ್ದರಾಮಯ್ಯ

ಬೆಂಗಳೂರು

     ಯೋಜಿತ ರೀತಿಯಲ್ಲಿ ನಗರ, ಪಟ್ಟಣಗಳ ಅಭ್ಯುದಯದ ಮಹತ್ವಾಕಾಂಕ್ಷೆಯ ಗುರಿ ಹೊಂದಿರುವ, ಸುರಕ್ಷಿತ, ಸ್ಮಾರ್ಟ್ ಮತ್ತು ಸುಸ್ಥಿರ ನಗರಗಳ ಬೆಳವಣಿಗೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದ ಮೂರು ದಿನಗಳ 17 ನೇ ಆವೃತ್ತಿಯ “ಮುನಿಸಿಪಾಲಿಕಾ 2023” ಅಂತರರಾಷ್ಟಿçÃಯ ಮಟ್ಟದ ಪ್ರದರ್ಶನ ಮತ್ತು ಸಮ್ಮೇಳನಕ್ಕೆ ಕ್ಕೆ ವೈಭವದ ಚಾಲನೆ ದೊರೆಯಿತು.

     ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನವೆಂಬರ್ 30 ರವರೆಗೆ ನಡೆಯಲಿರುವ ಈ ಸಮ್ಮೇಳನ ವಸತಿ, ನಗರ ಮೂಲಸೌಕರ್ಯ, ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಿಗೆ ಸಂಬAಧಿಸಿದAತೆ ಮಹತ್ವದ ಚರ್ಚೆ, ಸಂವಾದ, ನೀತಿ ನಿರೂಪಣೆ ರೂಪಣೆಗೆ ವೇದಿಕೆಯಾಗಿದೆ. ರಾಜ್ಯದ 216 ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರ ಒಳಗೊಂಡAತೆ ದೇಶಾದ್ಯಂತ ಸುಮಾರು 5,000ಕ್ಕೂ ಹೆಚ್ಚು ಉನ್ನತ ಮಟ್ಟದ ಪ್ರತಿನಿಧಿಗಳು, 200ಕ್ಕೂ ಅಧಿಕ ಪ್ರದರ್ಶಕರು ಒಂದೇ ವೇದಿಕೆಯಲ್ಲಿ ಮಾಹಿತಿ ವಿನಿಮಯ, ಸಂವಾದ ನಡೆಸಲಿದ್ದಾರೆ.

     ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಾಗತಿಕ ಮಟ್ಟದ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಮ್ ಖಾನ್, ಆಸ್ಟೆçÃಲಿಯದ ವಾಣಿಜ್ಯ ಸಚಿವೆ ಕ್ಯಾಥರೀನ್ ಗಲ್ಲಾಘರ್ ಮತ್ತಿತರರು ಉಪಸ್ಥಿತರಿದ್ದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ ಪ್ರದೇಶದ ಜೊತೆಗ್ರಾಮೀಣ ಭಾರತವೂ ಸುಸ್ಥಿರ ಬೆಳವಣಿಗೆ ಕಾಣಬೇಕು. ರಾಜ್ಯ ಸರ್ಕಾರ ನಗರಗಳಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದ ಶ್ರೇಯೋಭಿವೃದ್ಧಿಗೂ ಒತ್ತು ನೀಡಿದೆ. ರಾಜ್ಯದ 316 ನಗರಗಳಿಗೆ ಅಗತ್ಯ ಎಲ್ಲಾ ನಾಗರಿಕ ಸವಲತ್ತುಗಳನ್ನು ನಮ್ಮ ಸರ್ಕಾರ ಒದಗಿಸುತ್ತಿದೆ.

     ರಾಜ್ಯದಲ್ಲಿ 2011 ರ ಜನಗಣತಿ ಪ್ರಕಾರ ಶೇ38 ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇವರೆಲ್ಲರಿಗೂ ಸಂಚಾರ ಒತ್ತಡದ ಕಿರಿಕಿರಿ ಇಲ್ಲದೇ ಸುಗಮ ಸಾರಿಗೆ ವ್ಯವಸ್ಥೆ, ಸುಗಮ ಜೀವನ, ಅಗತ್ಯ ರೀತಿಯಲ್ಲಿ ಕಸ ವಿಲೇವಾರಿ, ಒಳಚರಂಡಿ ವ್ಯವಸ್ಥೆ ಸೇರಿ ನಾಗರಿಕ ಸವಲತ್ತುಗಳನ್ನು ಒದಗಿಸುವುದು ಸವಾಲಿನ ಕೆಲಸ. ಆದರೆ ಇದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿದರು.

     ನಗರ ಪ್ರದೇಶದ ಹಲವು ಪಟ್ಟಣಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಇತ್ತೀಚೆಗೆ 9 ಸಾವಿರ ಕೋಟಿ ರೂ ನೀಡಲು ಸರ್ಕಾರ ನಿರ್ಧರಿಸಿದೆ. 53 ಪಟ್ಟಣಗಳಿಗೆ ಒಳಚರಂಡಿ ಸೌಲಭ್ಯ ಕಲ್ಪಿಸಲು 1900 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಜನರ ಜೀವನಮಟ್ಟ ಇನ್ನಷ್ಟು ಸುಗಮಗೊಳಿಸಲು ಅಗತ್ಯ ಇರುವ ಎಲ್ಲಾ ವಲಯಗಳಿಗೂ ಸರ್ಕಾರ ಅಗತ್ಯ ಅನುದಾನವನ್ನು ಒದಗಿಸುತ್ತಿದೆ ಎಂದರು.

    ಹಿಂದಿನ ಸರ್ಕಾರದಲ್ಲಿ 197 ಇಂದಿರಾ ಕ್ಯಾಂಟಿನ್ ತೆರೆದಿದ್ದು, ಈ ಬಾರಿ ನಾವು ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯುತ್ತಿದ್ದೇವೆ. ಬೆಲೆ ಏರಿಕೆ ಹೆಚ್ಚಾಗಿದ್ದರೂ ಹಿಂದಿನ ದರದಲ್ಲೇ ಬಡವರು, ಮಧ್ಯಮ ವರ್ಗದವರಿಗೆ ಊಟ-ಉಪಹಾರದ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ವಿವರಿಸಿದರು.

     ದೇಶದಲ್ಲಿ ಬ್ರಾಂಡ್ ಬೆಂಗಳೂರನ್ನು ನಂಬರ್ ಒನ್ ಆಗಿಸಬೇಕಿದ್ದು, ಇದಕ್ಕಾಗಿ ಬ್ರಾಂಡ್ ಬೆಂಗಳೂರು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ವಿಜ್ಞಾನ ? ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಂಚೂಣಿಯಲ್ಲಿದ್ದು, ಬೆಂಗಳೂರು ನಗರದ ಹಿರಿಮೆ ? ಗರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಾಗುವುದು ಎಂದು ಹೇಳಿದರು.

     ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಸೇರಿದಂತೆ ನಗರ ಪಟ್ಟಣ ಪ್ರದೇಶಗಳಲ್ಲಿ ಆಸ್ತಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿದರೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವ ಜೊತೆಗೆ ನ್ಯಾಯಯುತ ಮಾರ್ಗದಲ್ಲಿ ತೆರಿಗೆ ವಿಧಿಸಲು ಸಾಧ್ಯವಾಗಲಿದೆ. ನಗರ ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

     ಬೆಂಗಳೂರು ನಗರದಲ್ಲಿ ಆಸ್ತಿಗಳ ಡಿಜಿಟಲೀಕರಣಕ್ಕೆ ಕ್ರಮ ಕೈಗೊಂಡಿದ್ದು, ಮನೆ ಮನೆ ಬಾಗಿಲಿಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಆಸ್ತಿಗಳಿಗೆ ಶೀಘ್ರದಲ್ಲೇ ಪಿಐಡಿ ಸಂಖ್ಯೆ ನೀಡುತ್ತಿದ್ದು, ಇದರಿಂದ ವರಮಾನ ಸಂಗ್ರಹಣೆಗೆ ಸಕಾರಿಯಾಗಲಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಬಗ್ಗೆ ರಾಜ್ಯದಲ್ಲಿರುವ ಕಾನೂನಿನಲ್ಲಿ ಬದಲಾವಣೆ ತರಲು ಉದ್ದೇಶಿಸಲಾಗಿದೆ. ಶೀಘ್ರದಲ್ಲೇ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವರ ಸಭೆ ಕರೆದು ಚರ್ಚಿಸಿ ಸೂಕ್ತ ನಿಯಮಗಳನ್ನು ರೂಪಿಸಲಾಗುವುದು. ಒಂದು ಮಹಡಿ ಎಂದು ಅನುಮತಿ ಪಡೆದು ನಾಲ್ಕು ಮಹಡಿ ನಿರ್ಮಿಸುತ್ತಿದ್ದು, ಇಂತಹ ನಡಾವಳಿಕೆಗಳಿಗೆ ಕಡಿವಾಣ ಹಾಕುತ್ತೇವೆ. ಸೂಕ್ತ ರೀತಿಯಲ್ಲಿ ತೆರಿಗೆ ವಸೂಲಿ ಮಾಡುತ್ತೇವೆ ಎಂದು ಹೇಳಿದರು.

      ಬೆಂಗಳೂರು ನಗರದಲ್ಲಿ 12 ವರ್ಷಗಳಿಂದ ಕುಡಿಯುವ ನೀರಿನ ದರ ಏರಿಕೆಮಾಡಿಲ್ಲ. ನೂರಾರು ಕಿಲೋಮೀಟರ್ ದೂರದಿಂದ ನೀರನ್ನು ಪಂಪ್ ಮಾಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಇದಕ್ಕೆ ಹೆಚ್ಚಿನ ಹಣ ವೆಚ್ಚವಾಗುತ್ತದೆ. ನಗರ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಮತ್ತು ಗಾಳಿ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಗರ ಪ್ರದೇಶಗಳನ್ನು ಹಸಿರುಮಯಗೊಳಿಸುವ, ಸರ್ಕಾರಿ ಸೇವೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಸುಗಮ ಜೀವನಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನಗರಾಭಿವೃದ್ಧಿ ಸಚಿವ ಬಿ. ಸುರೇಶ್ ಮಾತನಾಡಿ, ನಗರಾಡಳಿತದಲ್ಲಿ ಸುಸ್ಥಿರ ಬದಲಾವಣೆಗೆ ಸರ್ಕಾರ ಕಾರ್ಯೋನ್ಮುಖವಾಗಿದ್ದು, ನಗರ ಯೋಜನೆಯಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದೆ. ನಾಗರಿಕ ಸೇವೆಗಳನ್ನು ಡಿಜಿಟಲೀಕರಣಗೊಳಿಸಲು ಒತ್ತು ನೀಡಲಾಗಿದೆ ಎಂದರು.

     ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ನಗರ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಪೂರಕವಾಗಿದ್ದು, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ವಿಶೇಷ ಗಮನಹರಿಸಲಾಗಿದೆ ಎಂದು ಹೇಳಿದರು.

     ಈ ಸಮಾವೇಶವನ್ನು ಗುಡ್ ಗವರ್ನೆನ್ಸ್ ಇಂಡಿಯಾ ಫೌಂಡೇಶನ್ ಆಯೋಜಿಸಿದೆ ಮತ್ತು ಫೇರ್ಫೆಸ್ಟ್ ಮೀಡಿಯಾ ಲಿಮಿಟೆಡ್ ಈ ಕಾರ್ಯಕ್ರವನ್ನು ಸಂಘಟಿಸಿದೆ. ಸುರಕ್ಷಿತ, ಸುರಕ್ಷಿತ ಮತ್ತು ಸುಸ್ಥಿರ ನಗರಗಳನ್ನು ನಿರ್ಮಿಸುವ ಹೊಣೆ ಹೊತ್ತಿರುವ ಎಲ್ಲಾ ಪಾಲುದಾರರು, ನೀತಿ ನಿರೂಪಕರು ಮತ್ತು ಉದ್ಯಮದ ಪ್ರಮುಖರು ಸಹಮತದಿಂದ ನಮ್ಮ ನಗರಗಳನ್ನು ಅಭಿವೃದ್ಧಿ ಪಡಿಸುವ ಸಂಬAಧ ಚರ್ಚಿಸಲು ಇದು ದೊಡ್ಡ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

    ಜೊತೆಗೆ ಸಮ್ಮೇಳನದ ಚರ್ಚೆಗಳನ್ನು ಹೆಚ್ಚು ಒಳಗೊಳ್ಳುವ ಪ್ರಯತ್ನದ ಭಾಗವಾಗಿ ಈ ವರ್ಷ ಸೀಮಿತ ವೃತ್ತಿಪರ ಎಂಜಿನಿಯರ್ ಗಳು, ವಾಸ್ತುಶಿಲ್ಪಿಗಳು, ನಗರ ಯೋಜಕರು, ಶೈಕ್ಷಣಿಕ ಸಂಸ್ಥೆಗಳು, ನಿವಾಸಿ ಸಂಘಗಳು, ರಿಯಲ್ ಎಸ್ಟೇಟ್ ಡೆವಲಪರ್ ಗಳು ಮತ್ತು ಬಿಲ್ಡರ್ಸ್ ಗಳು, ಸ್ವಯಂ ಸೇವಾ ಸಂಘಗಳ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗಿದೆ. ಮುನ್ಸಿಪಾಲಿಕಾ 2023 ಕಲ್ಪನೆಗಳು, ಪರಿಹಾರಗಳು ಮತ್ತು ಸಹಯೋಗಗಳ ಕ್ರಿಯಾತ್ಮಕ ವಿನಿಮಯಕ್ಕೆ ಇದು ವೇದಿಕೆಯನ್ನು ಸೃಷ್ಟಿಸಿದೆ. ಇದು ಭವಿಷ್ಯದ ಸುಸ್ಥಿರ ಕಲ್ಪನೆಯ ನಗರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸುವ ವೇದಿಕೆಯಾಗಿದೆ.

    ಸಮ್ಮೇಳನದಲ್ಲಿ ಶಾಸಕ ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಎಸ್ ರವಿ, ನಾಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ಜಯರಾಮ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎಂ.ಎನ್.ಅಜಯ್ ನಾಗಭೂಷಣ ಮತ್ತಿತರರು ವೇದಿಕೆ ಮೇಲೆ ಉಪಸ್ಥಿರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap