ನಿರೂಪಕರ ಬದಲಾವಣೆ: ಸಿಎಂ ಮನೆ ಬಳಿ ಏಕಾಂಗಿ ಹೋರಾಟ ನಡೆಸಿದ್ದ ಡಾ.ಗಿರಿಜಾಗೆ ಮಣೆ, ಅಪರ್ಣಾಗೆ ತಪ್ಪಿದ ಅವಕಾಶ

ಬೆಂಗಳೂರು: 

ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪರ್ಣಾ ಬದಲು ಡಾ. ಗಿರಿಜಾ ಅವರು ನಿರೂಪಣೆ ಮಾಡಿದ್ದಾರೆ.

ಬೆಂಗಳೂರಿನ ಮಾಣಿಕ್ ಷಾ ಪರೇಡ್​​ ಮೈದಾನದಲ್ಲಿ ಬುಧವಾರ ನಡೆದ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಹೊಸಬರಿಗೆ ನೀಡಲಾಗಿದ್ದು, ನಿರೂಪಕಿ ಅಪರ್ಣಾ ಅವರಿಗೆ ಈ ಭಾರಿ ಅವಕಾಶ ಕೈತಪ್ಪಿದೆ.

        ಕಳೆದ 10-15 ವರ್ಷಗಳಿಂದ ಅಪರ್ಣಾ ಮತ್ತು ಶಂಕರ್​ ಪ್ರಕಾಶ್​ ಇಬ್ಬರಿಗೇ ಸರ್ಕಾರಿ ಕಾರ್ಯಕ್ರಮಗಳ ನಿರೂಪಣೆ ಜವಾಬ್ದಾರಿ ಸಿಗುತ್ತಿದೆ. ಹೊಸಬರಿಗೆ ಅವಕಾಶ ಸಿಗುತ್ತಿಲ್ಲ. ಬದಲಾವಣೆ ಆಗಬೇಕು. ಸಾಕಷ್ಟು ಮಂದಿ ನಿರೂಪಕರಿದ್ದರೂ ಇಬ್ಬರಿಗಷ್ಟೇ ಸರ್ಕಾರದ ಮಟ್ಟದಲ್ಲಿ ಮಣೆ ಹಾಕಲಾಗುತ್ತಿದೆ.

ಸರ್ವರಿಗೂ ಸಮ ಬಾಳು, ಸಮ ಪಾಲು ನೀಡಬೇಕು. ಕರೊನಾ ಸಂಕಷ್ಟಕಾಲದಲ್ಲಿ ಬಹುತೇಕ ನಿರೂಪಕರಿಗೆ ಕೆಸಲ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನಾದರೂ ಸರ್ಕಾರ ಹೊಸಬರಿಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿ ನಿರೂಪಕಿ ಡಾ.ಗಿರಿಜಾ ಅವರು 2021ರ ಆಗಸ್ಟ್​ 8ರಂದು ಸಿಎಂ ಮನೆ ಮುಂದೆ ಏಕಾಂಗಿ ಹೊರಾಟ ಮಾಡಿದ್ದರು.

ಕೊನೆಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಕರು ಹಾಗೂ ಗಾಯಕರ ಬದಲಾವಣೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳ ಮನೆ ಮುಂದೆ ಈ ಹಿಂದೆ ಡಾ.ಗಿರಿಜಾ ಪ್ರತಿಭಟನೆ ಮಾಡಿದ್ದರು.

ಹೋರಾಟ ನಡೆಸಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಕರ ಬದಲಾವಣೆಗೆ ಆಗ್ರಹಿಸಿದ್ದ ಗಿರಿಜಾಗೆ ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದ ನಿರೂಪಣೆಗೆ ಅವಕಾಶ ನೀಡಲಾಗಿದೆ. ಅಪರ್ಣಾ ಬದಲಿಗೆ ಡಾ.ಗಿರಿಜಾಗೆ ಸ್ಥಾನ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link