ಕೊಡಗು:
ಇಂಡೋನೇಷ್ಯಾದ ಜಕಾರ್ತದಲ್ಲಿ ಆಯೋಜಿಸಲಾಗಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಜಯಿಸಿದ ಚಿನ್ನದ ಪದಕವನ್ನು ಕೊಡಗಿನ ನೆರೆ ಹಾವಳಿಯ ಸಂತ್ರಸ್ತರಿಗೆ ಅರ್ಪಿಸಲಾಗಿದೆ.
ಟೆನಿಸ್ ಆಟಗಾರ ಕೊಡಗಿನ ರೋಹನ್ ಬೋಪಣ್ಣ ಅವರು, ಭಾರತ ತಂಡದ ಪರವಾಗಿ ಏಷ್ಯನ್ ಗೇಮ್ಸ್‍ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾಗವಹಿಸಿ ಆಡಿ ಪಡೆದ ಚಿನ್ನದ ಪದಕವನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ನೀಡಿದ್ದಾರೆ.
ಕೊಡಗಿನಲ್ಲಿ ಉಂಟಾದ ನೆರೆ ಹಾವಳಿಯಿಂದಾಗಿ ಉಂಟಾದ ಜನಜೀವನದ ಪ್ರತಿ ಸನ್ನಿವೇಶವನ್ನು ಮನಸ್ಸಿಗೆ ಆಘಾತ ಉಂಟುಮಾಡಿತು ಇದರಿಂದಾಗಿ ಈ ಚಿನ್ನದ ಪದಕವನ್ನು ನೀಡಿರುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ