ಪ್ರಮುಖ ಟಿಪ್ಪಣಿ ಹೊರಡಿಸಿದ ಸಿಎಂ….!

ಬೆಂಗಳೂರು

     ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಪ್ರಕಟಗೊಂಡಿದೆ. 135 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಹಿಂದಿನ ಸರ್ಕಾರದ ಹಲವು ತೀರ್ಮಾನಗಳಿಗೆ ತಡೆ ಹಾಕಲಾಗುತ್ತಿದೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪಣಿಯೊಂದನ್ನು ಹೊರಡಿಸಿದ್ದಾರೆ.

     ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ಇತರೆ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಎಲ್ಲಾ ಅಧ್ಯಕ್ಷರು/ ನಿರ್ದೇಶಕರುಗಳ ಸದಸ್ಯರುಗಳ ನಾಮ ನಿರ್ದೇಶನಗಳನ್ನು 22/05/2023 ರಿಂದ ಜಾರಿಗೆ ಬರುವಂತೆ ರದ್ದುಪಡಿಸಿ, ಆದೇಶ ಹೊರಡಿಸಲು ಸೂಚಿಸಿದ್ದಾರೆ.

    ಮುಖ್ಯಮಂತ್ರಿಗಳ ಟಿಪ್ಪಣಿ ಅನ್ವಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಟಿಪ್ಪಣಿ ಹೊರಡಿಸಿದ್ದು ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಿಗೆ ಈ ಕುರಿತು ಸೂಚನೆ ನೀಡಿದ್ದಾರೆ.

     ಮಾನ್ಯ ಮುಖ್ಯಮಂತ್ರಿಯವರ ಟಿಪ್ಪಣಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ. ಸದರಿ ಟಿಪ್ಪಣಿಯಲ್ಲಿ ಮಾನ್ಯ ಮುಖ್ಯಮಂತ್ರಿಯವರು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ಇತರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಎಲ್ಲಾ ಅಧ್ಯಕ್ಷರು/ ನಿರ್ದೇಶಕರುಗಳು/ ಸದಸ್ಯರುಗಳ ನಾಮ ನಿರ್ದೇಶನಗಳನ್ನು ದಿನಾಂಕ 22/05/2023ರಿಂದ ಜಾರಿಗೆ ಬರುವಂತೆ ರದ್ದುಪಡಿಸಿ, ಆದೇಶ ಹೊರಡಿಸಲು ಸೂಚಿಸಿರುತ್ತಾರೆ.

        ಶಾಲು, ಹೂವು ಕೊಡಬೇಡಿ ಎಂದು ಸಿದ್ದರಾಮಯ್ಯ ಮನವಿ: ಮತ್ತೊಮ್ಮೆ ಸರಳತೆ ತೋರಿದ ಮುಖ್ಯಮಂತ್ರಿ ಮಾನ್ಯ ಮುಖ್ಯಮಂತ್ರಿಯವರ ಆದೇಶದಂತೆ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರದ ಅಗತ್ಯ ಅಧಿಸೂಚನೆ/ ಆದೇಶವನ್ನು ಕೂಡಲೇ ಹೊರಡಿಸಬೇಕಾಗಿ ಸೂಚಿಸಿದೆ ಎಂದು ಹೇಳಿದ್ದಾರೆ. ಹೊಸ ನೇಮಕವಾಗುತ್ತದೆ; ರಾಜ್ಯದ ವಿವಿಧ ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ಇತರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಎಲ್ಲಾ ಅಧ್ಯಕ್ಷರು/ ನಿರ್ದೇಶಕರುಗಳು/ ಸದಸ್ಯರುಗಳ ನಾಮ ನಿರ್ದೇಶನ ಖಾಯಂ ಅಲ್ಲ.

      ಪ್ರತಿ ಬಾರಿ ಸರ್ಕಾರ ಬದಲಾವಣೆ ಆದಂತೆ ನಾಮ ನಿರ್ದೇಶನವೂ ಬದಲಾಗುತ್ತದೆ. ಹೊಸ ಸರ್ಕಾರ ತಮ್ಮ ಶಾಸಕರು, ಆಪ್ತರು, ವಿವಿಧ ಕ್ಷೇತ್ರದ ಗಣ್ಯರನ್ನು ನೇಮಕ ಮಾಡುತ್ತದೆ. ಕಾನೂನಿನ ನಿಯಮದಂತೆ ಸರ್ಕಾರ ವಿಸರ್ಜನೆ ಆದ ತಕ್ಷಣವೇ ನಿಗಮ/ ಮಂಡಳಿಗಳ ನೇಮಕಾತಿಯೂ ರದ್ದಾಗುತ್ತದೆ. ಹೊಸ ಸರ್ಕಾರ ಬಳಿಕ ನೇಮಕಾತಿ ಕಾರ್ಯವನ್ನು ಕೈಗೊಳ್ಳುತ್ತದೆ. ರಾಜ್ಯದಲ್ಲಿ 32ಕ್ಕೂ ಅಧಿಕ ನಿಗಮ/ ಮಂಡಳಿಗಳಿವೆ.

     ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಹಿಂದಿನ ಸರ್ಕಾರ ಕೈಗೊಂಡಿದ್ದ ಎಲ್ಲಾ ಇಲಾಖೆಗಳ ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ/ ಮಂಡಳಿ/ ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಮುಂದಿನ ಹಣ ಬಿಡುಗಡೆ/ ಪಾವತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆ ಹಿಡಿಯಲು ಹಾಗೂ ಪ್ರಾರಂಭವಾಗದಿರುವ ಎಲ್ಲಾ ಕಾಮಗಾರಿಗಳನ್ನು ಸಹ ತಡೆ ಹಿಡಿಯಲು ಸಹ ತಿಳಿಸಿದ್ದರು. ಬಿಜೆಪಿ ಟೀಕೆ; ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ಇತರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಎಲ್ಲಾ ಅಧ್ಯಕ್ಷರು/ ನಿರ್ದೇಶಕರುಗಳು/ ಸದಸ್ಯರುಗಳ ನಾಮ ನಿರ್ದೇಶನ ರದ್ದುಗೊಳಿಸಿದ ಬಗ್ಗೆ ಪ್ರತಿಪಕ್ಷ ಬಿಜೆಪಿ ಟೀಕೆ ಮಾಡಿದೆ.

       ಈ ಕುರಿತು ಟ್ವೀಟ್ ಮಾಡಿರುವ ಪಕ್ಷ, ‘ದೆಹಲಿಗೆ ಕಪ್ಪ ಕಳುಹಿಸಲೇಬೇಕು!. ಕಾಂಗ್ರೆಸ್ ಹೈ ಕಮಾಂಡಿಗು ಸಿದ್ದರಾಮಯ್ಯನವರ #ATMSarkaraಕ್ಕು ಇರುವ ಡೀಲೇ ಅದು. ಸರಕಾರದ ಈ ಆದೇಶ ರಾಜ್ಯದ ಪ್ರಗತಿಗೆ ಮಾರಕ, ಕಾಂಗ್ರೆಸ್ ಖಜಾನೆಗೆ ಪೂರಕ’ ಎಂದು ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap