ಪ್ರೇಯಸಿಯನ್ನು ಕಾಲ್ ಗರ್ಲ್ ಎಂದು ವೆಬ್ ಸೈಟ್ ನಲ್ಲಿ ಜಾಹಿರಾತು ನೀಡಿದ ಕಾಮುಕ ಬಂಧನ

ಬೆಂಗಳೂರು

        ಪ್ರೀತಿಸಿದ ಯುವತಿಯ ಅಶ್ಲೀಲ ಫೋಟೊಗಳನ್ನು ಲೊಕಾಂಟೊ ವೆಬ್‍ಸೈಟ್‍ನಲ್ಲಿ ಹಾಕಿ ಕಾಲ್‍ಗರ್ಲ್ ಎಂದು ಜಾಹೀರಾತು ನೀಡಿದ್ದ ಕಾಮುಕ ಖದೀಮನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

       ಕುರುಬರ ಹಳ್ಳಿಯ ರೋಹಿತ್ ಕುಮಾರ್ (21) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ನಂತರ ಉಂಟಾದ ವೈಮನಸ್ಯದಂದ ಇಬ್ಬರು ಬೇರೆಯಾಗಿದ್ದರು.

        ಕಳೆದ ಫೆ. 27 ರಂದು ದೂರವಾಗಿದ್ದ ಪ್ರೇಯಸಿಯನ್ನು ಆಕೆಯ ಸ್ನೇಹಿತೆಯ ರೂಮಿನಲ್ಲಿದ್ದಾಗ ನೋಡಲು ಬಂದಿದ್ದ ಆರೋಪಿಯು ಆಕೆಯೊಂದಿಗೆ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ತಾವು ಪ್ರೀತಿಸುತ್ತಿದ್ದ ಸಮಯದಲ್ಲಿ ಕೆಲವು ಫೋಟೊಗಳನ್ನು ತೆಗೆದುಕೊಂಡಿದ್ದು, ಅವುಗಳನ್ನು ಮನೆಯವರಿಗೆ ಕಳುಹಿಸಿದ್ದಲ್ಲದೆ, ವೆಬ್‍ಸೈಟ್‍ನಲ್ಲಿ ಹಾಕಿ ಕಾಲ್‍ಗರ್ಲ್ ಎಂದು ಜಾಹೀರಾತು ನೀಡಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿ ಹೊರಟು ಹೋಗಿದ್ದ.

      ಒಂದು ತಿಂಗಳ ನಂತರ ಕಳೆದ ಮಾ. 21 ರಂದು ಯುವತಿಯ ಮೊಬೈಲ್ ಸಂಖ್ಯೆಗೆ ಅಪರಿಚಿತ ಸಂಖ್ಯೆಗಳಿಂದ ಅಶ್ಲೀಲವಾದ ಸಂದೇಶಗಳು, ಕರೆಗಳು ಬರಲು ಪ್ರಾರಂಭವಾಗಿವೆ. ಈ ಬಗ್ಗೆ ಕರೆ ಮಾಡಿದವರನ್ನು ಯುವತಿಯು ವಿಚಾರಿಸಿದಾಗ ಲೊಕೊಂಟೊ ವೆಬ್‍ಸೈಟ್‍ನಲ್ಲಿ ಮಾಹಿತಿ ಇರುವುದಾಗಿ ತಿಳಿಸಿದ್ದಾರೆ.

      ಯುವತಿಯು ಕೂಡಲೇ ಲೊಕಾಂಟೊ ವೆಬ್‍ಸೈಟ್‍ನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಆಕೆಯ ಅಶ್ಲೀಲ ಫೋಟೊ ಹಾಕಿ ಕಾಲ್‍ಗರ್ಲ್ ಎಂದು ಜಾಹೀರಾತು ಹಾಕಿರುವುದು ಕಂಡು ಬಂದಿದ್ದು, ಕೂಡಲೇ ಆಕೆ ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದರು.

      ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸ್ ಇನ್ಸ್‍ಪೆಕ್ಟರ್ ಮುದ್ದುರಾಜು ಅವರು ಕಾರ್ಯಾಚರಣೆ ನಡೆಸಿ ಆರೋಪಿ ರೋಹಿತ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಯುವತಿಯು ನನ್ನ ಪ್ರೀತಿಯನ್ನು ಧಿಕ್ಕರಿಸಿ ದೂರವಾಗಿದ್ದರಿಂದ ಬೇಸತ್ತು ಈ ಕೃತ್ಯ ನಡೆಸಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link