ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳ ಓಡಾಟಕ್ಕೆ ಶೀಘ್ರವೇ ಒಪ್ಪಂದ

ಬೆಂಗಳೂರು:

      ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಒಂದು ಮಿಲಿಯನ್ ಡಾಲರ್ಸ್ ಟೆಕ್ನಿಕಲ್ ಅಸಿಸ್ಟೆಂಟ್ಸ್ ನೀಡಲು ಜರ್ಮನ್ ದೇಶ ಒಪ್ಪಿದ್ದು, ಈ ಸಂಬಂಧ ಶೀಘ್ರವೇ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಚರ್ಚಿಸಿದರು.

      ಜರ್ಮನ್ ಪ್ರತಿನಿಧಿಗಳಾದ ಮುನ್ಸಿಪಾಲ್ ಫಿನಾನ್ಸ್ ಎಕ್ಸ್‌ಪರ್ಟ್ ಜರ್ಗನ್ ಬೌವ್ಮಾನ್ನ್, ಸಿ40 ಸಿಟಿ ಮುಖ್ಯಸ್ಥ ಜೇಮ್ಸ್ ಅಲೆಗ್ಸಾಂಡರ್ ಸೋಮವಾರ ವಿಧಾನಸೌಧದಲ್ಲಿ ಭೇಟಿ ಮಾಡಿ ಸಭೆ ನಡೆಸಿದರು.  

      ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಡೀಸೆಲ್ ಬಸ್‌ಗಳ ಬದಲು ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಿದರೆ ಬಹುತೇಕ ವಾಯುಮಾಲಿನ್ಯ ಹತೋಟಿಗೆ ಬರಲಿದೆ. ಎಲೆಕ್ಟ್ರಿಕ್ ಬಸ್‌ಗಳ ದರ ಹೆಚ್ಚಿರಬಹುದು. ಆದರೆ, ಒಂದು ಮಿಲಿಯನ್ ಟೆಕ್ನಿಕಲ್ ಅಸಿಸ್ಟೆನ್ಸ್ ನೀಡಲು ಸಿದ್ಧವಿರುವುದಾಗಿ ಜರ್ಮನ್ ಪ್ರತಿನಿಧಿಗಳು ತಿಳಿಸಿದರು. ಇದಕ್ಕೆ ಒಪ್ಪಿದ ಪರಮೇಶ್ವರ್ ಅವರು, ಈ ಬಗ್ಗೆ ಸಾರಿಗೆ ಸಚಿವರೊಂದಿಗೆ ಚರ್ಚಿಸಿ, ಎಂಒಯು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link