ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಕರಡು ಪ್ರತಿ ಪ್ರಕಟಿಸಿದ ಸರ್ಕಾರ

ಸೆಪ್ಟೆಂಬರ್ ನಲ್ಲಿ ಚುನಾವಣೆ ಸಾಧ್ಯತೆ? ಆಕ್ಷೇಪಣೆಗೆ 15ದಿನ ಗಡುವು.

ಬಿಬಿಎಂಪಿಯಲ್ಲಿ 198 ರಿಂದ 243 ವಾರ್ಡ್ ಗಳ ಘೋಷಣೆ

ಸರ್ಕಾರದಿಂದ ಬಿಬಿಎಂಪಿ ಡಿ ಲಿಮಿಟೇಷನ್ ಗೆ ಒಪ್ಪಿಗೆ

ಬೆಂಗಳೂರು : ರಾಜ್ಯ ಸರ್ಕಾರ ಬಿಬಿಎಂಪಿ ಯಲ್ಲಿದ್ದ 198 ವಾರ್ಡ್ ಗಳನ್ನು 243 ವಾಡ್ರ್ಗಳಾಗಿ ಹೆಚ್ಚಿಸಿದ್ದು, ಯಾವುದೇ ಆಕ್ಷೇಪಣೆ ಮತ್ತು ಸಲಹೆ ನೀಡಲು 15 ದಿನಗಳ ಕಾಲಾವಕಾಶ ನೀಡಿ ಅಧಿಸೂಚನೆಯನ್ನು ಹೊರಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕೊನೆಗೂ ಮುಹೂರ್ತ ನಿಗಧಿಯಾಗುವ ಲಕ್ಷಣ ಕಾಣುತ್ತಿದೆ. ವಾರ್ಡ್ ಮರುವಿಂಗಡಣೆ ವಿಚಾರವನ್ನೇ ಮುಂದಿಟ್ಟುಕೊಂಡು ಕಳೆದ ಎರಡು ವರ್ಷಗಳಿಂದ ಚುನಾವಣೆಯನ್ನು ಮುಂದೂಡಿಕೊಂಡು ಬಂದಿದ್ದ ಸರ್ಕಾರ, ಇದೀಗ ವಾರ್ಡ್ ಮರುವಿಂಗಡಣೆಯ ಕರಡು ಪ್ರತಿಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಸಾರ್ವಜನಿಕರ ಆಕ್ಷೇಪಣೆ ಅವಕಾಶ : ಸರ್ಕಾರ ಕರಡು ಪ್ರತಿ ಪ್ರಕಟಿಸಿದ್ದು. ಸಾರ್ವಜನಿಕರು 15 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಮೊದಲು ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‍ಗಳಿದ್ದವು. ಈಗ ಅವುಗಳನ್ನು ಮರುವಿಂಗಡಣೆ ಮಾಡಿ, ಒಂದಷ್ಟು ಪ್ರದೇಶಗಳನ್ನು ಸೇರಿಸಿಕೊಂಡು 243 ವಾರ್ಡ್‍ಗಳಾಗಿ ವಿಂಗಡಿಸಲಾಗಿದೆ.

ಸೆಪ್ಟೆಂಬರ್ ನಲ್ಲಿ ಚುನಾವಣೆ : ಬಿಬಿಎಂಪಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಬಿಜೆಪಿಯನ್ನು ಅಧಿಕಾರಕ್ಕೆ ತರಲು ವಾರ್ಡ್‍ಗಳ ಗಡಿಯನ್ನು ಬದಲಾಯಿಸಿ 243ಕ್ಕೆ ಹೆಚ್ಚಿಸಿದೆ. ಇನ್ನ ನಗರಕ್ಕೆ ಪ್ರಧಾನ ಮತ್ರಿಯರು ಬಂದು ಹೋದ ಬೆನ್ನಲ್ಲೆ ಬಿಜೆಪಿ ಅಲೆ ಇರುವುದು ಕಂಡು ಬಂದಿದೆ, ಹಾಗಾಗಿ ಶೀಘ್ರದಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸರ್ಕಾರ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ನ್ಯಾಯಾಲದ ತೀರ್ಪು ಆಧರಿಸಿ ಸೆಪ್ಟೆಂಬರ್ ಅಥವ ಅಕ್ಟೋಬರ್ ನಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿದೆ.

ಆರ್.ಆರ್ ನಗರ ವಿಧಾನಸಭಾ ಕ್ಷೇತ್ರವೇ ಹೈಲೇಟ್ : ಆರ್.ಆರ್ ನಗರದ ವಾರ್ಡ್‍ಗಳಿಗೆ ಇತಿಹಾಸ ಪುರುಷರ ಹೆಸರು ನಾಮಕರಣ ಮಾಡಲಾಗಿದ್ದು ಹೊಸ ಹೆಸರುಗಳನ್ನು ಕರಡು ಪ್ರತಿಯಲ್ಲಿ ಉಲ್ಲೇಖ ಮಾಡಿ ಪ್ರಕಟಿಸಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಮೊದಲು 9 ವಾರ್ಡ್ ಗಳಿತ್ತು, ಆದರೆ ಈಗ ವಾರ್ಡ್ ವಿಂಗಡಣೆ ಬಳಿಕ ಒಟ್ಟು 14 ವಾರ್ಡ್‍ಗಳಿಗೆ ಏರಿಕೆಯಾಗಿದೆ ಇದರಲ್ಲಿ 9 ವಾರ್ಡ್ ಗಳಿಗೆ ಇತಿಹಾಸ, ಪುರಾಣ ಪ್ರಸಿದ್ದ ಹೆಸರುಗಳನ್ನು ಬಿಬಿಎಂಪಿ ನಾಮಕರಣ ಮಾಡಿದೆ, ವಾರ್ಡ್ ಸಂಖ್ಯೆ 36 ರಿಂದ 49 ರವರೆಗೂ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ.

ಅವುಗಳ ವಿಶೇಷ ಹೆಸರುಗಳು ಹೀಗಿವೆ :

 ವಾರ್ಡ್ ನಂ 36 – ಕನ್ನೇಶ್ವರರಾಮ
ವಾರ್ಡ್ ನಂ 37 – ವೀರಮದಕರಿ
ವಾರ್ಡ್ ನಂ 38 – ಜೆಪಿ ಪಾರ್ಕ್
ವಾರ್ಡ್ ನಂ 39 – ಚಾಣಕ್ಯ
ವಾರ್ಡ್ ನಂ 40 – ಛತ್ರಪತಿ ಶಿವಾಜಿ
ವಾರ್ಡ್ ನಂ 41 – ಪೀಣ್ಯ
ವಾರ್ಡ್ ನಂ 42 – ಲಕ್ಷ್ಮೀದೇವಿನಗರ
ವಾರ್ಡ್ ನಂ 43 – ರಣಧೀರ ಕಂಠೀರವ
ವಾರ್ಡ್ ನಂ 44 – ವೀರಸಿಂಧೂರ ಲಕ್ಷ್ಮಣ
ವಾರ್ಡ್ ನಂ 45 – ವಿಜಯನಗರ ಕೃಷ್ಣದೇವರಾಯ
ವಾರ್ಡ್ ನಂ 46 – ಸರ್ ಎಂ ವಿಶ್ವೇಶ್ವರಯ್ಯ
ವಾರ್ಡ್ ನಂ 47 – ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್
ವಾರ್ಡ್ ನಂ 48 – ಜ್ಞಾನಭಾರತಿ
ವಾರ್ಡ್ ನಂ 49 – ರಾಜರಾಜೇಶ್ವರಿ ನಗರ

ವಿಂಗಡಣೆಯಾದ ವಾರ್ಡ್‍ಗಳ ವಿವರ

ಬಿಟಿಎಂ ಲೇಔಟ್ ಮೊದಲು 8 – ಈಗ 9

ಬೆಂಗಳೂರು ದಕ್ಷಿಣ ಮೊದಲು 8 -ಈಗ 13

ಬಸವನಗುಡಿ ಮೊದಲು 6- ಈಗ 7

ಬೊಮ್ಮನಹಳ್ಳಿ ಮೊದಲು 8- ಈಗ 14

ಬ್ಯಾಟರಾಯನಪುರ ಮೊದಲು 7 -ಈಗ11

ಸಿವಿ ರಾಮನ್‍ನಗರ ಮೊದಲು 7- ಈಗ 9

ಚಾಮರಾಜಪೇಟೆ ಮೊದಲು 7- ಈಗ 7

ಚಿಕ್ಕಪೇಟೆ ಮೊದಲು 7 -ಈಗ 7

ದಾಸರಹಳ್ಳಿ ಮೊದಲು 8 – ಈಗ 13

ಗಾಂಧಿನಗರ ಮೊದಲು 7 -ಈಗ 7

ಗೋವಿಂದರಾಜನಗರ ಮೊದಲು 9 -ಈಗ 9

ಹೆಬ್ಬಾಳ ಮೊದಲುಮ8 – ಈಗ 8

ಜಯನಗರ ಮೊದಲು 7- ಈಗ 7

ಕೆ.ಆರ್.ಪುರ ಮೊದಲು 9 -ಈಗ 13

ಮಹದೇವಪುರ ಮೊದಲು 8 -ಈಗ 12

ಮಹಾಲಕ್ಷ್ಮೀಲೇಔಟ್ ಮೊದಲು 7 -ಈಗ 9

ಮಲ್ಲೇಶ್ವರ ಮೊದಲು 7- ಈಗ 7

ಪದ್ಮನಾಭನಗರ ಮೊದಲು 8-ಈಗ 9

ಪುಲಕೇಶಿನಗರ ಮೊದಲು 7 – ಈಗ 7

ರಾಜಾಜಿನಗರ ಮೊದಲು 7- ಈಗ 7

ರಾಜರಾಜೇಶ್ವರಿನಗರ ಮೊದಲು 9 -ಈಗ 13

ಸರ್ವಜ್ಞನಗರ ಮೊದಲು 8-ಈಗ 10

ಶಾಂತಿನಗರ ಮೊದಲು 7 -ಈಗ 7

ಶಿವಾಜಿನಗರ ಮೊದಲು 7-ಈಗ 6

ವಿಜಯನಗರ ಮೊದಲು 8-ಈಗ 9

ಯಲಹಂಕ ಮೊದಲು 4- ಈಗ 5

ಯಶವಂತಪುರ ಮೊದಲು 5- ಈಗ 8

ಆನೇಕಲ್ ಮೊದಲು 1 – ಈಗ 1

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 198 ವಾರ್ಡ್‍ಗಳನ್ನು ಮರುವಿಂಗಡಣೆ ಮಾಡಿ 243 ವಾರ್ಡ್‍ಗಳಾಗಿ ಹೆಚ್ಚಿಸಿದ್ದು, ಸಮಿತಿಯ ವರದಿಗೆ ಸರ್ಕಾರ ಅಸ್ತು ಅಧಿಸೂಚನೆ ಹೊರಡಿಸಿದೆ.

Recent Articles

spot_img

Related Stories

Share via
Copy link
Powered by Social Snap