ಬೆಂಗಳೂರಿನಲ್ಲಿ ಬೈಕ್ ವೀಲಿಂಗ್ ಗೆ ಬ್ರೇಕ್ ಇಲ್ವಾ..?? ನಕಲಿ ನಂಬರ್ ಪ್ಲೇಟ್ ಅಳವಡಿಸಿ ಹುಚ್ಚಾಟ

ಯುವಕರ ದುಸ್ಸಾಹಸಕ್ಕೆ ಬೇಸತ್ತ ಸವಾರರು
ಬೆಂಗಳೂರಿಗೆ ಬೇಕಿದೆ ಹೊಸ ರೂಲ್ಸ್
ಗುಡಿಬಂಡೆ ಭರತ್ ಜಿ.ಎಸ್
ಬೆಂಗಳೂರು : ನೀವು ಬೈಕ್ ವೀಲಿಂಗ್ ಮಾಡ್ತೀರಾ..? ಅಥವಾ ನಿಮ್ಮ ಗೆಳೆಯರು ಅಕ್ಕ-ಪಕ್ಕದವರು ವಿಲೀಂಗ್ ಮಾಡ್ತಾ ಇದ್ದಾರೆ. ಅವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿ ಅದಕ್ಕೆ ಬ್ರೇಕ್ ಹಾಕಲೇ ಬೇಕು. ಇಲ್ಲದಿದ್ದರೆ ಅಮಾಯಕರ ಪ್ರಾಣಕ್ಕೆ ಈ ಬೈಕ್ ವೀಲರ್ಸ್ ಕಂಟಕವಾಗುತ್ತಿದ್ದಾರೂ. ಪೊಲೀಸರು ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರಾ..? ಎಂಬ ಅನುಮಾನಗಳು ಸಿಲಿಕಾನ್ ಸಿಟಿ ಜನರನ್ನು ಕಾಡುತ್ತಿದೆ.
ದಿನೇ ದಿನೇ ರಾಜಧಾನಿಯಲ್ಲಿ ಬೈಕ್‌ ವ್ಹೀಲಿಂಗ್‌ ಮಾಡುವ ಪುಂಡರ ಹಾವಳಿ ಹೆಚ್ಚಾಗಿದ್ದು,  ಪುಂಡರ ಗುಂಪು ಬೈಕ್‌ ವೀಲಿಂಗ್‌ ಮಾಡೋದನ್ನು ಇನ್ನೊಂದು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಹರೆ ಬಿಡುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಯಲಹಂಕದ ಅಟ್ಟೂರು, ಬೆಟ್ಟಹಳ್ಳಿ, ವೀರಸಂದ್ರದ ಬಳಿ ವೀಲಿಂಗ್‌ ಹಾವಳಿ ಮಿತಿ ಮೀರುತ್ತಿದೆ. ಮಾದಕ ವಸ್ತು ಸೇವಿಸಿದ ಅಮಲಿನಲ್ಲಿ ಯುವಕರು ಬೈಕ್‌ ವೀಲಿಂಗ್‌ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಮುಂದಾಗುವವರಿಗೆ ಪ್ರಾಣ ಬೆದರಿಕೆ ಹಾಕುತ್ತಾರೆ ಎಂದು ಈ ಹಿಂದೆ ಸಾರ್ವಜನಿಕರು ದೂರಿದ್ದರು. ಇದಕ್ಕೆ ಪ್ರತಿಕ್ರೀಯಿಸಿದ ಪೊಲೀಸ್‌ ಆಯುಕ್ತರು, ವೀಲಿಂಗ್‌ಗೆ ಬ್ರೇಕ್‌ ಹಾಕಲು ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನೂ ಸಹ ನೀಡಿದ್ದರು ಆದರೆ ಇದುವರೆಗೂ ಕಠಿಣವಾದ ಕಾನೂನು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಲ್ಲುತ್ತಿಲ್ಲ ಪುಂಡರ ವೀಲ್ಹಿಂಗ್ ಹಾವಳಿ : ರಾಜಧಾನಿಯಲ್ಲಿ ದಿನೇ ದಿನೇ ಯುವಕರ ವಿಲ್ಹಿಂಗ್ ಹಾವಳಿ ಹೆಚ್ಚಾಗಿದ್ದು ಅದನ್ನು ನೋಡಿದ್ರೆ ಎದೆ ಝಲ್ ಎನ್ನುತ್ತದೆ, ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ  ಮೂರು ಸ್ಕೂಟಿಯಲ್ಲಿ ಕಳೆದ ರಾತ್ರಿ 9 ಗಂಟೆ ಸುಮಾರಿಗೆ ವಾಹನ ದಟ್ಟನೆ ಇರುವ ವೇಳೆಯಲ್ಲೇ ವಿಲ್ಹಿಂಗ್ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಇದಕ್ಕೆ ಸಿಟಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಅಮಾಯಕರಿಗೆ ಸಂಕಷ್ಟ : ನಗರದಲ್ಲಿ ವೀಲಿಂಗ್ ಮಾಡುವ ಯುವಕರು ಹೆಲ್ಮೆಟ್ ಧರಿಸದೇ ಒವರ್ ಸ್ಪೀಡ್ ಅಗಿ ಬೈಕ್ ಓಡಿಸಿ ಹುಚ್ಚಾಟ‌‌ ಆಡುತ್ತಿದ್ದಾರೆ. ಯುವಕರ ಹುಚ್ಚಾಟದಿಂದ ಇತರೇ ಅಮಾಯಕ ವಾಹನ ಸವಾರರಿಗೂ ಸಂಕಷ್ಟ ತಂದಿದೆ. ಒಂದು ವೇಳೆ ಅಪಘಾತ ಸಂಭವಿಸಿದರೆ  ಅಮಾಯಕರ ಪ್ರಾಣಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ.
ನಕಲಿ ನಂಬರ್ ಪ್ಲೇಟ್ ಅಳವಡಿಸಿ ವೀಲಿಂಗ್ : ಶೋಕಿಗಾಗಿ ವಿಲ್ಹಿಂಗ್ ಮಾಡುವುದನ್ನು ಇನ್ನೊಂದು ಮೊಬೈಲ್ ನಲ್ಲಿ ವಿಡಿಯೋ ಚಿತ್ರಿಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ನಕಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಂಡು ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.
ಸ್ಥಳೀಯರಿಂದ ಮಾಹಿತಿ ಕಲೆ ಹಾಕಬೇಕು : ಸ್ಥಳೀಯ ಏರಿಯಾದಲ್ಲಿ ವಿಲ್ಹಿಂಗ್ ಹುಚ್ಚಾಟ ನಡೆಸುವವರ ಬಗ್ಗೆ ಸಾರ್ವಜನಿಕರ ಬಳಿ ಪೊಲೀಸರು ಮಾಹಿತಿ ಕಲೆ ಹಾಕಬೇಕು ಹಾಗೂ ಅಂತವರ ವಿರುದ್ಧ ಕ್ರಮ ತೆಗೆದು ಕೊಂಡಾಗ ಮಾತ್ರ ವಿಲ್ಹಿಂಗ್ ಹಾವಳಿಗೆ ಬ್ರೇಕ್ ಬೀಳುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಕೋಟ್-1
ನಗರದಲ್ಲಿ ಹೊಸ ರೂಲ್ಸ್ ತಂದಾಗ ಮಾತ್ರ ಈ ಬೈಕ್ ವೀಲಿಂಗ್ ಮಾಡುವುದನ್ನು ತಡೆಯಬಹುದು. ಹಾಗೂ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು, ಆಗ ಮಾತ್ರ ವೀಲಿಂಗ್ ಮಾಡುವವರನ್ನು ತಡೆಗಟ್ಟಲು ಸಾಧ್ಯ.
ಅರವಿಂದ್, ಸ್ಥಳೀಯ ನಾಗರಿಕ ಬೆಂಗಳೂರು
ಕೋಟ್ -2
ನಗರದಲ್ಲಿ ಯಾವ ಪ್ರದೇಶದಲ್ಲಿ ಯುವಕರು ಹೆಚ್ಚಾಗಿ ಬೈಕ್ ವೀಲಿಂಗ್ ಮಾಡುತ್ತಾರೆ ಎಂಬ ಮಾಹಿತಿ ಸಂಗ್ರಹಿಸಿ, ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು, ಹಾಗೂ ಸ್ಥಳೀಯ ಸಾರ್ವಜನಿಕರಿಂದ ಮಾಹಿತಿ ಪಡೆದು ಎಚ್ಚರಿಕೆ ವಹಿಸಬೇಕು.
ಹರೀಶ್, ವಾಹನ ಸವಾರ ಬೆಂಗಳೂರು.

Recent Articles

spot_img

Related Stories

Share via
Copy link