ಮಗಳ ನಿಶ್ಚಿತಾರ್ಥ್: ವಿನೂತನ ಪರಿಸರ ದಿನಾಚರಣೆ
- ದಿನಾಂಕ: 05/06/2022 ರಂದು ಹುಳಿಯಾರು ಹೋಬಳಿ ಭೈರಣ್ಣನ ಕಟ್ಟೆ ಸರ್ಕಾರಿ ಪ್ರೌಢಶಾಲೆ ಬೋರನಕಣಿವೆ, ಹಿರಿಯ ಶಿಕ್ಷಕರಾದ ಟಿ.ಎನ್ ರಮೇಶ್ ರವರು ತಮ್ಮ ಮಗಳ ನಿಶ್ಚಿತಾರ್ಥ ದಿನದಂದು, ಸರ್ಕಾರಿ ಪ್ರೌಢಶಾಲೆ ಬೋರನಕಣಿವೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಹುಳಿಯಾರು ಘಟಕದ ಸಹಕಾರದೊಂದಿಗೆ ಪರಿಸರ ದಿನ ಹಮ್ಮಿಕೊಳ್ಳುವುದರ ಮೂಲಕ ವಿಶಿಷ್ಟವಾಗಿ ಆಚರಿಸಿಹಸಿರಿನ ಮಹತ್ವ ಸಾರಿದರು. ಕಾರ್ಯಕ್ರಮದಲ್ಲಿ ಮಧುಮಕ್ಕಳಾದ ಲಿಕೇಶ್ ಕುಮಾರ್ ಹಾಗೂ ಪುಣ್ಯ ಅವರಿಂದ ಸಸಿ ನಡೆಸಲಾಯಿತು. ಸಿ ಪಿ ಆರ್ ಪರಿಸರ ಶಿಕ್ಷಣ ಕೇಂದ್ರ ತುಮಕೂರು ಇದರ ಸಂಯೋಜಕರಾದ ರವಿಶಂಕರ್ ಎಸ್ ರವರು ಪರಿಸರದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಕಸಾಪ ಹುಳಿಯಾರು ಘಟಕದ ಅಧ್ಯಕ್ಷರಾದ ನಾರಾಯಣಪ್ಪ ನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಹುಳಿಯಾರು ಘಟಕದ ಪದಾಧಿಕಾರಿಗಳು ಹಾಗೂ ಸರ್ಕಾರಿ ಪ್ರೌಢಶಾಲೆ ಬೋರನಕಣಿವೆ ಶಾಲಾ ಸಿಬ್ಬಂಧಿ, ಟಿ ಎನ್ ರಮೇಶ್ ಸರ್ ರವರ ಬಂಧು ಬಳಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಿದರು.