ಮತದಾನ ಜಾಗೃತಿಗೆ ಹರಟೆ ಕಾರ್ಯಕ್ರಮ ಪ್ರಜಾಪ್ರಭುತ್ವದಲ್ಲಿ ಮತದಾನದ ಪಾತ್ರ ಮಹತ್ವದ್ದು

ಚಿತ್ರದುರ್ಗ:

       ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ತ.ರಾ.ಸು. ರಂಗಮಂದಿರದಲ್ಲಿ ಆಯೋಜಸಿಲಾಗಿದ್ದ ಹರಟೆ ಕಾರ್ಯಕ್ರಮದಲ್ಲಿ ನೈತಿಕ ಮತದಾನದ ಮಹತ್ವ ಕೊನೆಗೂ ಮೇಲುಗೈ ಸಾಧಿಸುವ ಮೂಲಕ ಜನಮನ್ನಣೆಗೆ ಪಾತ್ರವಾಯಿತು.

        ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ನಗರಸಭೆ,ಕನ್ನಡ ಮತ್ತು ಸಂಸ್ಕøತ ಇಲಾಖೆ, ರಂಗಸೌರಭ ಕಲಾ ಸಂಘ, ಆದರ್ಶ ಕಲಾ ಸಂಘ, ಪ್ರಜಾ ಸೇವಾ ಸಾಂಸ್ಕøತ ಮತ್ತು ಕ್ರೀಡಾ, ಕರ್ನಾಟಕ ಜಾನಪದ ಅಕಾಡಮಿ ಚಿತ್ರದುರ್ಗ ಇವರ ಸಹಯೋಗದೊಂದಿಗೆ ವಿಶೇಷ ಹರಟೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

        ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಯೋಚಿಸುವ ಶಕ್ತಿ ಮಾನವನಿಗಿದ್ದು, ಹಣ ಮತ್ತಿತರ ಆಮಿಷಗಳಿಗೆ ಬಲಿಯಾಗದೆ ಯೋಜಿಸಿ ಇದೇ ಏ.18 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಬೇಕು.

       ಪ್ರಜಾಪ್ರಭುತ್ವದಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರಜಾಪ್ರಭುತ್ವ ಗೆಲ್ಲಿಸಬೇಕೆಂದರೆ ಪ್ರಜೆಗಳು ಹೆಚ್ಚಿನದಾಗಿ ಮತದಾನ ಮಾಡಬೇಕು. ಕೆಲ ಮತದಾರರು ಓಟ್ ಮಾಡಿದರೆ ತಮಗೇನು ಸಿಗುತ್ತದೆ ಎಂಬ ತಪ್ಪು ಕಲ್ಪನೆಯೊಂದಿಗೆ, ಮತದಾನ ಮಾಡದೆ ಸೋಮಾರಿಗಳಾಗಿ ಮನೆಯಲ್ಲಿ ಮಲಗುತ್ತಾರೆ, ಇಲ್ಲವೆ ಅರ್ಥಹೀನ ಹರಟೆಯಲ್ಲಿ ತೊಡಗಿಕೊಂಡಿರುತ್ತಾರೆ. ಅದರಿಂದ ಅವರಿಗೆ ಮತದಾನದ ಮಹತ್ವ ತಿಳಿಸಲು ಜಿಲ್ಲೆಯಲ್ಲಿ ಸಾಹಿತ್ಯ ಆಸಕ್ತಿಯುಳ್ಳ ಪ್ರತಿಭೆಗಳಿಂದ ಇಂದು ಹರಟೆ ಕಾರ್ಯಕ್ರಮದಲ್ಲಿ ಮತದಾನ ಮಹತ್ವ ಹಾಗು ಮತದಾನ ಜನಸಾಮಾನ್ಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿಸುವ ಪ್ರಯತ್ನ ಮಾಡಲಾಗಿದೆ.

          ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ವಿ. ಬಸವರಾಜ್ ಪ್ರಸ್ತಾವಿಕ ಮಾತನಾಡಿದ ಅವರು, ಮೌನ ಮತ್ತು ಶಾಂತತೆ ಹರಟೆಗೆ ಬೇಕಾಗಿಲ್ಲ, ಮಾತುಗಾರಿಕೆ, ವಿಷಯದ ಜ್ಞಾನ ಹೊಂದಿರಬೇಕು, ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನ ಮಾಡುವ ಶಕ್ತಿಯಿದೆ ಅದರಿಂದ ಮತವನ್ನು ಮೌಲ್ಯವಾಗಿ ಚಲಾಯಿಸಬೇಕು ಅದು ಅಮೌಲ್ಯವಾಗಬಾರದು, ಮತ ಮೌಲ್ಯವಾದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

             ಪ್ರಪಂಚದಲ್ಲಿ ಯಾವುದೇ ವಸ್ತುವಿಗೆ ಬೆಲೆ ಕಟ್ಟ ಬಹುದು ಅದರೆ ಮೌಲ್ಯ ಮತ್ತು ಮತಕ್ಕೆ ಬೆಲೆ ಕಟ್ಟಲಾಗುವುದಿಲ್ಲ, ಮತವನ್ನು ಎಲ್ಲರೂ ದೇಶಕ್ಕೆ ದಾನ ಮಾಡುವುದರ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಬಲ ಪಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ನಿರ್ದೇಶಕ ನಿಜಲಿಂಗಪ್ಪ, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಕೆ.ಕೆ ಕಮಾನಿ, ಕನ್ನಡ ಉಪನ್ಯಾಸಕ ವಸಂತ ಕುಮಾರ ಹಿರಿಯ ರಂಗಭೂಮಿ ಕಲಾವಿದರಾದ ದಾಸಯ್ಯ ಗೌಡ್ರು, ವಕೀಲ ವಿಜಯ್ ಕುಮಾರ, ಬಸವರಾಜ, ಚಂದ್ರಪ್ಪ, ನನ್ನಿವಾಳದ ಹನುಮಂತಪ್ಪ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹರಟೆ ಕಾರ್ಯಕ್ರಮದ ಅಂಗವಾಗಿ ನಡೆದ ಸಂವಾದದಲ್ಲಿ ಮತದಾನದ ಮಹತ್ವ ಕುರಿತು ವಿಶಿಷ್ಟ ಸಂದೇಶಗಳು ವಿನಿಮಯಗೊಂಡವು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link