ಮದುವೆ ಬಗ್ಗೆ ಕುರುಬನ ರಾಣಿ ಹೇಳಿದ್ದಾದರೂ ಏನು….?

ಚೆನ್ನೈ:

      90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ನಗ್ಮಾ ಅವರು ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.ನಗ್ಮಾ  ವಯಸ್ಸು 48 ಆದರೂ ಇಂದಿಗೂ ಮದುವೆ ಆಗಿಲ್ಲ. ಆದರೂ ನಗ್ಮಾ ಹೆಸರು ಹಲವರ ಜತೆಯಲ್ಲಿ ಆ ಕಾಲದಲ್ಲಿ ತಳುಕು ಹಾಕಿಕೊಂಡಿತ್ತು.

    ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಗ್ಮಾ 2008ರಂದ ಇಲ್ಲಿಯವರೆಗೂ ಸಿನಿಮಾಗಳಿಂದ ತುಸು ಅಂತರ   ಕಾಯ್ದುಕೊಂಡಿದ್ದಾರೆ. ಇದಾದ ಬಳಿಕ ರಾಜಕೀಯ ಪ್ರವೇಶ ಮಾಡಿದ ಅವರು ಪ್ರಸ್ತುತ ಕಾಂಗ್ರೆಸ್​ ನಲ್ಲಿ ನಗ್ಮಾ ಸಕ್ರಿಯರಾಗಿದ್ದಾರೆ. 

     ಟೀಮ್​ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಮತ್ತು ನಗ್ಮಾ ಪ್ರೇಮ ಪ್ರಕರಣ ಭಾರೀ ಸುದ್ದಿಯಾಗಿತ್ತು . ಇಷ್ಟೇ ಅಲ್ಲದೆ, ವಿವಾಹಿತ ನಟರಾದ ಶರತ್​ ಕುಮಾರ್​, ಮನೋಜ್​ ತಿವಾರಿ ಮತ್ತು ರವಿ ಕಿಶಾನ್​ ಜತೆ ಸಂಬಂಧ ಹೊಂದಿದ್ದಾರೆ ಎಂಬ ವಿಚಾರವೂ ಸಿನಿ ವಲಯದಲ್ಲಿ ಬಹಳ ಚರ್ಚೆಯಾಗಿತ್ತು. ಆದರೆ, ಇಂತಹ ಯಾವುದೇ ಸುದ್ದಿಯ ಬಗ್ಗೆ ನಗ್ಮಾ ಎಲ್ಲಿಯೂ ಮಾತನಾಡಿಲ್ಲ.

    ನಟಿ ನಗ್ಮಾ ತಮ್ಮ ಮದುವೆ ಕುರಿತು ಕೊನೆಗೂ ಮಾತನಾಡಿದ್ದಾರೆ. ವಯಸ್ಸು 48 ಆದ್ರೂ ಇನ್ನೂ ಏಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ನಗ್ಮಾ, ನಾನು ಮದುವೆ ಆಗುವುದಿಲ್ಲ ಎಂದು ಯೋಚಿಸಲೇ ಇಲ್ಲ. ತನಗೂ ಸಂಗಾತಿ ಮತ್ತು ಮಕ್ಕಳಾಗುವ ಭರವಸೆ ಈಗಲೂ ಇದೆ. ಮದುವೆಯ ಮೂಲಕ ಸಂಸಾರ ಆರಂಭಿಸುವ ಯೋಚನೆ ಇದೆ. ಸಮಯ ಸಿಕ್ಕರೆ ತನ್ನ ಮದುವೆ ಆಗಬಹುದಾ ಎಂದು ನೋಡುತ್ತೇನೆ. ಮದುವೆಯಾದರೆ ನನಗೂ ತುಂಬಾ ಖುಷಿಯಾಗುತ್ತದೆ ಎಂದು ನಗ್ಮಾ ಹೇಳಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap