ಮಧುಗಿರಿ ಗಡಿಯಲ್ಲಿ ವಿಮಾನ ನಿಲ್ದಾಣ..?!

ಮಧುಗಿರಿ :

   ಏಷ್ಯಾ ಖಂಡದ ನಂ 1 ಪಟ್ಟ ಗಳಿಸಿರುವ ಏಕಾಶಿಲಾ ನಗರಿಯ ಸಮೀಪವೇ ಬಣ್ಣ ಬಣ್ಣಗಳ ಲೋಹದ ಹಕ್ಕಿಗಳ ನಿಲ್ದಾಣವು ನಿರ್ಮಾಣವಾಗುತ್ತಿರುವುದು ಕ್ಷೇತ್ರದ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ನೀಡುವಂತಿದೆ.

   ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಸಿರುವಂತೆ ಅತಿ ಹಿಂದುಳಿದ ತಾಲ್ಲೂಕುಗಳಾದ ಕೊರಟಗೆರೆ, ಮಧುಗಿರಿ, ಸಿರಾ ತಾಲ್ಲೂಕುಗಳ ಜನರಿಗೆ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಇದರಿಂದ ಭಾರಿ ಅನುಕೂಲವಾಗಲಿದ್ದು ಬರಗಾಲ ಪೀಡಿತ ಪ್ರದೇಶಗಳೆಂಬ ಹೆಸರು ಆರ್ಥಿಕಾಭಿವೃದ್ಧಿಯಿಂದಾಗಿ ಮರೆಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

   ಈಗಾಗಲೇ ಜಿಲ್ಲಾ ಕೇಂದ್ರವಾಗುವತ್ತ ದಾಪುಗಾಲಿಟ್ಟಿರುವ ಮಧುಗಿರಿ ಕ್ಷೇತ್ರದಲ್ಲಿ ಕೆಲವೊಂದು ಇಲಾಖೆಗಳನ್ನು ಹೊರತುಪಡಿಸಿ ಜಿಲ್ಲೆಗೆ ಅಗತ್ಯವಾಗಿರುವ ಇಲಾಖೆಗಳನ್ನು ಈ ಹಿಂದೆಯೇ ಮೇಲ್ದರ್ಜೆಗೆ ಏರಿಸಿದ ಕೀರ್ತಿ ಕೆ.ಎನ್. ರಾಜಣ್ಣನವರಿಗೆ ಸಲ್ಲುತ್ತದೆ. ಆಗೊಮ್ಮೆ ಈಗೊಮ್ಮೆ ಆಕಾಶದಲ್ಲಿ ವಿಮಾನಗಳ ಹಾರಾಟವನ್ನು ನೋಡುತ್ತಿದ್ದ ಜನರು ಮುಂದಿನ ದಿನಗಳಲ್ಲಿ ವಿಮಾನ ಹಾರಾಟದ ಶಬ್ದಕ್ಕೆ ಬಸವಳಿದು ಹೋಗಲಿದ್ದಾರೆ

   ಜಿಲ್ಲೆಯ ಇಬ್ಬರು ಸಚಿವರು ಹಾಗೂ ಲೋಕಸಭಾ ಸದಸ್ಯರಿಗೆ ಮಧುಗಿರಿ ತಾಲ್ಲೂಕಿನ ಕೊಡುಗೆ ಅನನ್ಯವಾಗಿದೆ. ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ನವರು ನೇರ ನುಡಿಯ ಹಾಗೂ ನುಡಿದಂತೆ ನಡೆಯುವವುದರ ಜೊತೆಯಲ್ಲಿ ಜಿಲ್ಲೆಯ ಜನರು ಇವರನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.

   ಇವರು ಕಳೆದ ಮೂರೂವರೆ ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಕ್ಷೇತ್ರದ ಕೆರೆಗಳಿಗೆ ಎತ್ತಿನಹೊಳೆಯ ನೀರು ಹರಿಸುವುದು, ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ , ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ, ಕೆರೆಗಳಪಾಳ್ಯದಿಂದ ಕೆ.ಎಸ್.ಆರ್.ಟಿ.ಸಿ ಡಿಪೋವರೆವಿಗೂ ಬೈಪಾಸ್ ನಿರ್ಮಾಣದ ಮೂಲಕ ಮಧುಗಿರಿ ತಾಲ್ಲೂಕು ಅಭಿವೃದ್ಧಿಯನ್ನು ಸದಾ ಕೆಎನ್‌ಆರ್ ಬಯಸುತ್ತಿರುತ್ತಾರೆ.

ಮಧುಗಿರಿ ಜಿಲ್ಲೆ ಏಕೆ ಆಗಬೇಕು?

     ಬ್ರಿಟಿಷ್‌ರ ಕಾಲದಿಂದಲೂ ಉಪವಿಭಾಗವಾಗಿರುವ ಮಧುಗಿರಿ ತಾಲ್ಲೂಕು ಅಕ್ಕಪಕ್ಕದ ತಾಲ್ಲೂಕುಗಳಾದ ಕೊರಟಗೆರೆ, ಸಿರಾ, ಪಾವಗಡ ತಾಲ್ಲೂಕುಗಳು ಹಾಗೂ ಎರಡು ಕಡೆ ನೆರೆಯ ಸೀಮಾಂಧ್ರ ಗಡಿಗಳನ್ನು ಹಂಚಿಕೊಂಡಿದ್ದು, ಮಧುಗಿರಿ ತಾಲ್ಲೂಕಿನ ಜನತೆ ಅನ್ಯೋನ್ಯವಾದ ಸಂಬಂಧ ಹೊಂದಿದ್ದಾರೆ. ಈ ಕ್ಷೇತ್ರವು ಜೇನು, ದಾಳಿಂಬೆ, ಬೆಲ್ಲ ತಯಾರಿಕೆಯ ಆಲೆಮನೆ, ರೇಷ್ಮೆ, ಶೇಂಗಾ, ಹಲಸು ಬೆಳೆಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ.

    ಈ ಹಿಂದೆ ಪ್ರಸನ್ನ ಗಿರಿ, ಫತೇಹಾಬಾದ್, ಮಾಧವಗಿರಿ, ಮದ್ದಗಿರಿ ಎಂಬಾ ಪ್ರಾಚೀನ ಹೆಸರುಗಳಿಂದ ಕರೆಯಲ್ಪಡುತ್ತಿದ್ದಾಗ 1927 ರಲ್ಲಿ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು ಇಲ್ಲಿ ಉಪವಿಭಾಗಾಧಿಕಾರಿಯಾಗಿದ್ದಾಗ ಮಧುಗಿರಿಯೆಂದು ನಾಮಕರಣ ಮಾಡಿದರು. ಐತಿಹಾಸಿಕ ಹಿನ್ನೆಲೆ ಯುಳ್ಳ ಮಧುಗಿರಿ ತಾಲೂಕಿನಲ್ಲಿ ಸುರ್ವಣಮುಖಿ, ಜಯಮಂಗಲಿ, ಕುಮುದ್ವತಿ, ಉತ್ತರ ಪಿನಾಕಿನಿ ನದಿಗಳು ಕ್ಷೇತ್ರದಲ್ಲಿ ಹರಿಯುವುದರ ಜೊತೆಯಲ್ಲಿ ತಿಮ್ಮಲಾಪುರದ ಕರಡಿ ವನ್ಯಧಾಮ, ಮೈದನಹಳ್ಳಿ ಯ್ಯಾಂಟಿಲೋಪ್ ತಳಿಯ ಕೃಷ್ಣ ಮೃಗಧಾಮ, ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ, ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಗಳ ಜತೆಗೆ  ಪೂನಾ ದಶಪಥ ಹಾಗೂ ನಾಲ್ಕು ಪಥಗಳ ರಸ್ತೆಗಳು ಕ್ಷೇತ್ರದ ಮೂಲಕವೇ ಹಾದು ಹೋಗ ಬೇಕಾಗಿದ್ದು, ಈ ರಸ್ತೆ ಕಾರಿಡಾರ್‌ನಿಂದಾಗಿ ಸಂಪರ್ಕ ಕ್ರಾಂತಿ ಉಂಟಾಗಲಿದೆ.

     ಉತ್ತರ ಕರ್ನಾಟಕದ ಹೆಬ್ಬಾಗಿಲು ಖ್ಯಾತಿಯ ತುಮಕೂರು ಜಿಲ್ಲೆಗೆ ಮುಂದಿನ ದಿನಗಳಲ್ಲಿ ಮೆಟ್ರೋ ರೈಲು ಆಗಮಿಸಲಿದ್ದು, ವಸಂತ ನರಸಾಪುರ ಕೈಗಾರಿಕಾ ವಲಯ, ಕ್ಷೇತ್ರದಲ್ಲಿ ಜವಳಿ ಉದ್ದಿಮೆಯು ಆರಂಭವಾದರೆ ಈ ವಿಮಾನ ನಿಲ್ದಾಣದಿಂದ ಸಾಕಷ್ಟು ಉತ್ತೇಜನ ದೊರೆಯಲಿದ್ದು, ವಿಮಾನ ನಿಲ್ದಾಣದ ಸುತ್ತ ಮುತ್ತಲ ತಾಲ್ಲೂಕುಗಳು ಸಹ ಅಭಿವೃದ್ಧಿಯಾಗಲಿವೆ.

    ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ವಿಮಾನ ನಿಲ್ದಾಣದ ನೀಲಿ ನಕ್ಷೆಯೊಂದು ಹರಿದಾಡುತ್ತಿದ್ದು, ಈ ನಕ್ಷೆಯು ತುಮಕೂರು ಜಿಲ್ಲೆಯದು ಎಂದು ಬಿಂಬಿಸಲಾಗಿದ್ದು ಕೊರಟಗೆರೆ, ಮಧುಗಿರಿ, ಸಿರಾ, ತುಮಕೂರಿನ ಆಯ್ದ ಗ್ರಾಮಗಳ ಜಮೀನುಗಳ ಒಂದು ಭಾಗವನ್ನು ಕೇಂದ್ರೀಕರಿಸಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂಬ ಊಹಾಪೋಹಗಳು ಜನರ ಬಾಯಿ ಮಾತುಗಳಲ್ಲಿ ಹರಿದಾಡತೊಡಗಿದೆ. ಸಂಬಂಧಪಟ್ಟ ಇಲಾಖೆಯವರು ನಿರ್ಮಾಣದ ಬಗ್ಗೆ ಸ್ಪಷ್ಟೀಕರಿಸುವುದು ಅಗತ್ಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap