ಮೆಟ್ರೋ 3ನೇ ಹಂತ : ಭೂಸ್ವಾಧೀನ ಪ್ರಕ್ರಿಯೇ ಆರಂಭ….!

ಬೆಂಗಳೂರು:

    ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರದ ಅನುಮತಿಗಾಗಿ ಕಾಯುತ್ತಿರುವಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ. 106 ಎಕರೆ ವ್ಯಾಪ್ತಿಯಲ್ಲಿರುವ ಒಟ್ಟು 713 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾಗಿದ್ದು, ಆ ಎಲ್ಲ ಆಸ್ತಿಗಳನ್ನು ಯೋಜನೆಗೆ ಬಿಟ್ಟುಕೊಡಲು ಮಾಲೀಕರು ಸಿದ್ಧರಿಲ್ಲ. 

   ಮೆಟ್ರೋ ಮೂರನೇ ಹಂತದ ಎರಡು ಎಲಿವೇಟೆಡ್ ಕಾರಿಡಾರ್‌ಗಳಲ್ಲಿ 21 ನಿಲ್ದಾಣಗಳನ್ನು ಒಳಗೊಂಡಿದೆ. ಒಂದು ಜೆಪಿ ನಗರ IVನೇ ಹಂತದಿಂದ ಹೊರವರ್ತುಲ ರಸ್ತೆಯ ಮೂಲಕ ಕೆಂಪಾಪುರದವರೆಗೆ 32.5 ಕಿಮೀ ಮತ್ತು ಇನ್ನೊಂದು ಮಾಗಡಿ ರಸ್ತೆಯ ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಮೀ ಆಗಿದೆ.

   ರಾಜ್ಯ ಸಚಿವ ಸಂಪುಟವು ಈ ಯೋಜನೆಗೆ ಅನುಮತಿ ನೀಡಿದೆ. ಆದರೆ, ತಿಂಗಳಿನಿಂದ ಕೇಂದ್ರದ ಅನುಮತಿಗಾಗಿ ಕಾಯಲಾಗುತ್ತಿದೆ. ಇದೀಗ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಅನುಮತಿ ದೊರಕಬಹುದೆಂದು ನಿರೀಕ್ಷಿಸಲಾಗಿದೆ. 

    ‘ನಾವು ಈಗ ಮೊದಲ ಎಲಿವೇಟೆಡ್ ಕಾರಿಡಾರ್‌ನಲ್ಲಿ ಮಾತ್ರ ಆಸ್ತಿಗಳನ್ನು ಗುರುತಿಸಲು ಪ್ರಾರಂಭಿಸಿದ್ದೇವೆ. ಅವುಗಳ ಸ್ವಾಧೀನ ಪ್ರಾರಂಭಿಸಬೇಕಿದೆ. ನಮಗೆ ಇಲ್ಲಿ 106 ಎಕರೆ ಬೇಕಾಗಿದ್ದು, ಅದರಲ್ಲಿ 75 ಎಕರೆ ಡಿಪೋಗೆ ಮಾತ್ರ ಬೇಕಾಗುತ್ತದೆ. ಇದು ಎರಡೂ ಕಾರಿಡಾರ್‌ಗಳಿಗೆ ಸಾಮಾನ್ಯವಾಗಿರುತ್ತದೆ’ ಎಂದು ಬಿಎಂಆರ್‌ಸಿಎಲ್‌ನ ಭೂ ಸ್ವಾಧೀನ ಕೋಶದ ಪ್ರಧಾನ ವ್ಯವಸ್ಥಾಪಕ ಎಂಎಸ್ ಚನ್ನಪ್ಪ ಗೌಡರ್ ಹೇಳಿದರು.

    ಭೂ ಸ್ವಾಧೀನಕ್ಕೆ BMRCL ನೀಡುತ್ತಿರುವ ಅತ್ಯುತ್ತಮ ಪರಿಹಾರದಿಂದಾಗಿ, ಇದು ಮಾರುಕಟ್ಟೆ ಮೌಲ್ಯದ 200% ರಷ್ಟು ಹೆಚ್ಚಿದೆ. ಇದರಿಂದಾಗಿ ಸಾರ್ವಜನಿಕರು ತಮ್ಮ ಆಸ್ತಿಯನ್ನು ಮೆಟ್ರೋ ಯೋಜನೆಗಳಿಗೆ ನೀಡಲು ಉತ್ಸಾಹದಿಂದ ಮುಂದೆ ಬರುತ್ತಾರೆ. ಆದರೆ, ಸದ್ಯ ಮೂರು ಕುಟುಂಬಗಳು ತಮ್ಮ ಆಸ್ತಿ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿವೆ ಎಂದು ಅವರು ಹೇಳಿದರು.

   ‘ಈ ಮೂರು ಆಸ್ತಿಗಳ ವಿಷಯದಲ್ಲಿ, ಈ ಯೋಜನೆಗಾಗಿ ಪ್ರತಿಯೊಂದು ಆಸ್ತಿಯ ಒಂದು ಭಾಗವನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲು ಮೆಟ್ರೋ ಮುಂದಾಗಿದೆ. ಇದರಿಂದಾಗಿ ತಮ್ಮ ಉಳಿದ ಭಾಗದ ಭೂಮಿ ಮೌಲ್ಯ ಕಡಿಮೆಯಾಗುತ್ತದೆ ಎಂದು ಅವರು ಭಾವಿಸಿದ್ದಾರೆ. ನಾವು ಸಂಪೂರ್ಣ ಆಸ್ತಿಯನ್ನು ಸ್ವಾಧೀನಪಡಿಸಿ ಕೊಳ್ಳಬೇಕೆಂದು ಅಥವಾ ಸ್ವಾಧೀನದಿಂದ ಸಂಪೂರ್ಣವಾಗಿ ಕೈಬಿಡಬೇಕೆಂದು ಅವರು ಬಯಸುತ್ತಾರೆ. ವಿನಾಯಕ ಲೇಔಟ್ ಮೆಟ್ರೊ ನಿಲ್ದಾಣಕ್ಕೆ ಎರಡು ಆಸ್ತಿಗಳು ಬೇಕಾಗಿವೆ’ ಎಂದು ಗೌಡರ್ ಹೇಳಿದರು. 

    ಈ ಮೂರು ಆಸ್ತಿಗಳು ಒಟ್ಟು 165.65 ಚ.ಮೀ. ಇದ್ದು, 78.18 ಚ.ಮೀ, 40.14 ಚದರ ಮೀ ಮತ್ತು 47.33 ಚ.ಮೀ. ವಿಸ್ತೀರ್ಣದ ಮೂರು ನಿರ್ದಿಷ್ಟ ಪ್ಲಾಟ್‌ಗಳಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap