ಬೆಂಗಳೂರು:
ಕರ್ನಾಟಕದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಬಿಗ್‌ಬಾಸ್ ಶೋ ಒಂದು ಸೀಸನ್ ಮುಗಿಯುತ್ತಿದ್ದಂತೆ ಮತ್ತೆ ಹೊಸ ಸೀಸನ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. 9 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಗ್ ಬಾಸ್ ಶೋನಲ್ಲಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳೂ ಕೂಡ ಬಿಗ್ ಬಾಸ್ ಸ್ಪರ್ಧಿಗಳಾಗಿದ್ದರು.
ಇನ್ನು ಬಿಗ್ ಬಾಸ್ ಸೀಸನ್ 9 ರಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆಗಿ ರಾಕೇಶ್ ಅಡಿಗ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಸೀಸನ್ 10 ಬಗ್ಗೆ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದ್ದು, ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಗೆ ಬರುವ ಸ್ಪರ್ಧಿಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಹೌದು ಸೀಸನ್ 10 ರಲ್ಲಿ ಯಾರು ಬರಲಿದ್ದಾರೆ ಎನ್ನುವುದು ಎಲ್ಲರಿಗೂ ಕುತೂಹಲ ಹೆಚ್ಚಿಸುವ ವಿಚಾರವೇ. ಇನ್ನು ಸೀಸನ್ 9ರಲ್ಲಿ ಬಿಗ್‌ಬಾಸ್ ಸ್ಪರ್ಧಿಗಳು ಓಟಿಟಿ ಮೂಲಕ ಪರಿಚಿತರಾಗಿದ್ದರು. ನಂತರ ಆಯ್ಕೆಯಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕೆಲವು ಮೂಲಗಳ ಪ್ರಕಾರ ಓಟಿಟಿ ಅಷ್ಟು ಓಡಲಿಲ್ಲ ಎನ್ನಲಾಗಿದೆ. ಆದ್ದರಿಂದ ಈ ಸೀಸನ್ 10ನಲ್ಲಿ ಸ್ಪರ್ಧಿಗಳು ಮನೆಯ ಟಿವಿಗೆ ನೇರವಾಗಿಯೇ ಬರಲಿದ್ದಾರೆ ಎನ್ನಲಾಗಿದೆ.
ಈ ಬಾರಿ ದೊಡ್ಡಮನೆಯಲ್ಲಿಕ ಮಿಂಚಲಿರುವ ಸ್ಪರ್ಧಿಗಳು ಅಂದರೆ ನಮೃತಾ ಗೌಡ, ಕಿಚ್ಚ ಸಿನಿಮಾದ ನಾಯಕಿ ರೇಖಾ, ಭೂಮಿಕಾ ಬಸವರಾಜ್, ಅಗ್ನಿಸಾಕ್ಷಿ ರಾಜೇಶ್ ದ್ರುವ, ಕಾಫಿ ನಾಡು ಚಂದು, ವರ್ಷ ಕಾವೇರಿ ಸದ್ಯ ಇವರೆಲ್ಲರ ಹೆಸರು ಜೋರಾಗಿ ಕೇಳಿಬರುತ್ತಿದೆ. ಆದರೆ ಅಧಿಕೃತವಾಗಿ ಯಾವುದೇ ಘೋಷಣೆಗಳಾಗಿಲ್ಲ. ಇದು ನಿಜಾನಾ? ಸುಳ್ಳಾ? ಅನ್ನೋದನ್ನು ಕಾದು ನೋಡಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ