ವಲಯಕ್ಕೊಂದು ಕ್ರೈಂ ಮಾನಿಟರಿಂಗ್ ಸೆಲ್, ಟೋಯಿಂಗ್ ಮರು ಜೀವ: ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಬೆಂಗಳೂರು:

 

ಬೆಂಗಳೂರು ಐಟಿ ಹಬ್ ರಾಜಧಾನಿಯಲ್ಲಿ ನಡೆಯುವಂತಹ ಗಂಭೀರ ಸ್ವರೂಪದ್ದಾಗಿರುತ್ತದೆ. ಸೈಬರ್ ಅಪರಾಧ ಪ್ರಕರಣ ನಿಯಂತ್ರಣಕ್ಕೆ ಮತ್ತು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಪ್ರತಿಯೊಂದು ವಿಭಾಗಗಳಲ್ಲಿ ಮೇಜರ್ ಕ್ರೈಂ ಮಾನಿಟರಿಂಗ್ ಸೆಲ್ ತೆರೆಯುವುದಾಗಿ ನೂತನ‌ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿಯವರು ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರು ಸೈಬರ್ ವಿಚಾರದಲ್ಲಿ ಸಾಕಷ್ಟು ಜ್ಞಾನವನ್ನು ಹೊಂದಿದ್ದಾರೆ. ಇದರಿಂದಾಗಿ ಸೈಬರ್ ಅಪರಾಧ ನಿಯಂತ್ರಣಕ್ಕೆ ಒತ್ತು ನೀಡುವ ವಿಚಾರವನ್ನು ತಿಳಿಸಿದರು. ಇನ್ನು ಬೆಂಗಳೂರು ನಗರದಲ್ಲಿ ದೊಡ್ಡ ಮಟ್ಟದ ಅಪರಾಧಗಳು ನಡೆದಾಗ ಕೂಡಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಸೂಕ್ತ ಸಾಕ್ಷ್ಯಧಾರಗಳು ಸಂಗ್ರಹಿಸುವುದು ಅಗತ್ಯವಾಗಿದೆ. ಆರೋಪಿ ಬಂಧನದಿಂದ ಹಿಡಿದು ಚಾರ್ಜ್ ಶೀಟ್ ಹಂತದವರೆಗೂ ಚುರುಕಿನಿಂದ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕು. ಈ‌‌ ವಿಚಾರದಲ್ಲಿ ನಗರದ ಪ್ರತಿಯೊಂದು ವಲಯದಲ್ಲಿ ಮೇಜರ್ ಕ್ರೈಂ ಮಾನಿಟರಿಂಗ್ ಸೆಲ್ ತೆರೆಯಲಾಗುತ್ತದೆ. ಈ‌ ಮೂಲಕ ಆರೋಪಿಗಳಿಗೆ ಬೇಗನೇ ಶಿಕ್ಷೆ ಪ್ರಕಟವಾಗುವ ಹಾಗೇ ನೋಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ರೌಡಿಗಳ ನಿಗ್ರಹ, ಡ್ರಗ್ಸ್ ಚಟುವಟಿಕೆಗೆ ಕಡಿವಾಣ ನಗರ ಪೊಲೀಸ್ ಆಯುಕ್ತರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದೇನೆ‌. ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕಮಲ್‌ಪಂತ್ ನನ್ನ‌ ಆಪ್ತಮಿತ್ರ. ಅವರಿಂದ ಅಧಿಕಾರ ಸ್ವೀಕರಿಸಿರುವುದು‌ ಖುಷಿಯಾಗಿದೆ. ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ಮುಂದುವರೆಸುತ್ತೇನೆ. ಬೆಂಗಳೂರು ನಗರ ಗ್ಲೋಬಲ್‌ ಸಿಟಿಯಾಗಿದೆ‌. ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅಂತರಾಷ್ಟ್ರೀಯ ‌ಮಟ್ಟದಲ್ಲಿ ಸುದ್ದಿಯಾಗಲಿದೆ. ಈ‌ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಿ ಕೆಲಸ ಮಾಡುತ್ತೇನೆ. ರೌಡಿಗಳ ನಿಗ್ರಹ, ಡ್ರಗ್ಸ್ ಚಟುವಟಿಕೆ ಇನ್ನಷ್ಟು ಕಡಿವಾಣ ಹಾಕುತ್ತೇನೆ ಎಂದು ವಿಶ್ವಾಸವನ್ನು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಪ್ರತಾಪ್ ರೆಡ್ಡಿ ವ್ಯಕ್ತಪಡಿಸಿದರು.

ಕಾನೂನು‌‌ ಸುವ್ಯವಸ್ಥೆ ಕಾಪಾಡುವಲ್ಲಿ ಎಡವಿದ್ರೆ ಶಿಸ್ತು ಕ್ರಮ ಕಾನೂನು‌‌ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ‌‌ ಆಯಾ ಠಾಣಾ ವ್ಯಾಪ್ತಿಯ ಇನ್ಸ್‌ಪೆಕ್ಟರ್‌ಗಳು ಸರಿಯಾಗಿ ಕೆಲಸ ಮಾಡಬೇಕು. ಒಂದು ವೇಳೆ ಇನ್ಸ್ ಪೆಕ್ಟರ್ ಗಳು ವಿಫಲರಾದರೆ ಅಂತಹವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಕ್ಕಳ ಹಾಗೂ ಮಹಿಳೆಯರ ದೌರ್ಜನ್ಯ ನಿಯಂತ್ರಣಕ್ಕೆ ಕ್ರಮ ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನ ನಡೆದಾಗ ಕೂಡಲೇ ತ್ವರಿತಗತಿಯಲ್ಲಿ ತನಿಖೆ ನಡೆಸಿ ಬಂಧಿತರನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ಹಾಜರುಪಡಿಸುವ ಹಾಗೇ ಕ್ರಮ‌ಕೈಗೊಳ್ಳುತ್ತೇವೆ. ಅದೇ ಸಂಚಾರಿ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಆದ್ಯತೆ ನೀಡುತ್ತೇನೆ ಎಂದರು.

ಟೊಯಿಂಗ್ ವ್ಯವಸ್ಥೆ ಮತ್ತೆ ಬರಬೇಕಿದೆ‌‌‌ ನಗರ ಪೊಲೀಸ್ ಆಯುಕ್ತರು ಸೈಬರ್ ಕ್ರೈಂ ‌ ನಿಯಂತ್ರಣಕ್ಕೆ ಒತ್ತು ಕೊಡುತ್ತೇನೆ. ಕೊರೊನಾ ಬಳಿಕ ವರ್ಕ್ ಫ್ರಂ ಹೋಮ್ ವ್ಯವಸ್ಥೆಯಿಂದ ಜನ ಹೊರ ಬಂದಿದ್ದಾರೆ‌, ಇದರಿಂದಾಗಿ ಟ್ರಾಫಿಕ್ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ನಿಲ್ಲಿಸಲಾಗಿರುವ ಟೊಯಿಂಗ್ ವ್ಯವಸ್ಥೆ ಮತ್ತೆ ಬರಬೇಕಿದೆ‌‌‌ ಎಂದು ಅಭಿಪ್ರಾಯವನ್ನು ಆಯುಕ್ತರು ಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಕರ್ತವ್ಯವನ್ನು ನಿರ್ವಹಿಸಿರುವ ಅನುಭವವನ್ನು ಹೊಂದಿರುವ ನೂತನ ನಗರ ಪೊಲೀಸ್ ಆಯುಕ್ತ ಸಿ ಹೆಚ್ ಪ್ರತಾಪ್ ರೆಡ್ಡಿಯವರು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಸೈಬರ್ ಕ್ರೈಂ ನಿಯಂತ್ರಣವನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಮೊದಲ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap