ವಿಜಯ್‌ ಈಗ ‘ಭೀಮ’: ಹೊಸ ಚಿತ್ರದ ಟೈಟಲ್‌ ರಿಲೀಸ್‌

“ದುನಿಯಾ’ ವಿಜಯ್‌ ಸಿನಿಮಾದ ಮೊದಲ ಹಂತದ ಕುತೂಹಲಕ್ಕೆ ತೆರೆಬಿದ್ದಿದೆ. ಅದು ಚಿತ್ರದ ಟೈಟಲ್‌ ಕುರಿತಾಗಿದ್ದು. ವಿಜಯ್‌ ನಟನೆ ಹಾಗೂ ನಿರ್ದೇಶನದ ಹೊಸ ಸಿನಿಮಾಕ್ಕೆ “ಭೀಮ’ ಎಂದು ಟೈಟಲ್‌ ಇಡಲಾಗಿದೆ.

ಹೌದು, ವಿಜಯ್‌ ನಿರ್ದೇಶನದ ಎರಡನೇ ಹಾಗೂ ನಟನೆಯ 28ನೇ ಸಿನಿಮಾಕ್ಕೆ “ಭೀಮ’ ಎಂದು ಹೆಸರಿಡಲಾಗಿದ್ದು, ಶಿವರಾತ್ರಿ ದಿನ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಖತ್‌ ರಗಡ್‌ ಆಗಿ ಮೂಡಿಬಂದಿದೆ.

ಕೆಣಕದಿದ್ರೆ ಕ್ಷೇಮ ಅನ್ನೋ ಟ್ಯಾಗ್‌ಲೈನ್‌ ಇದೆ.

“ಸಲಗ’ ಸಿನಿಮಾ ಮೂಲಕ ನಿರ್ದೇಶಕರಾಗಿಯೂ ಯಶಸ್ಸು ಕಂಡಿದ್ದ ವಿಜಯ್‌ ಈಗ “ಭೀಮ’ನ ಕನಸು ಕಾಣುತ್ತಿದ್ದಾರೆ. ಇದು ಕೂಡಾ ಒಂದು ಗಂಭೀರ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುವ ವಿಷಯವನ್ನಿಟ್ಟುಕೊಂಡು ಮಾಡುತ್ತಿರುವ ಸಿನಿಮಾ ಎನ್ನಲಾಗಿದೆ.

ಈ ಕಥೆಗಾಗಿ ಸುಮಾರು ಎಂಟು ತಿಂಗಳಿಗೂ ಹೆಚ್ಚು ತಮ್ಮನ್ನು ವಿಜಯ್‌ ತೊಡಗಿಸಿಕೊಂಡು, ಎಲ್ಲವನ್ನು ಪಕ್ಕಾ ಮಾಡಿಕೊಂಡಿದ್ದಾರೆನ್ನಲಾಗಿದೆ.

ಅಂದಹಾಗೆ, ಈ ಚಿತ್ರವನ್ನು ಕೃಷ್ಣ ಸಾರ್ಥಕ್‌ ಹಾಗೂ ವಿತರಕ ಜಗದೀಶ್‌ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಕೃಷ್ಣ ಸಾರ್ಥಕ್‌ ಸದ್ಯ ಶಿವರಾಜ್‌ಕುಮಾರ್‌ ಅವರ “ಬೈರಾಗಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದ ತಾರಾಬಳಗ, ತಾಂತ್ರಿಕವರ್ಗದ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap