ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು : ಪ್ರಧಾನಿ

ನವದೆಹಲಿ: 

     ವಿಭಜನೆ  ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ದೇಶ ‘ವಿಭಜನೆಯ ಕರಾಳ ನೆನಪಿನ ದಿನ’ವಾದ ಇಂದು ಆ ಅವಧಿಯಲ್ಲಿ ಜನರು ಅನುಭವಿಸಿದ ನೋವುಗಳನ್ನು ನೆನಪಿಸಿಕೊಂಡರು.

    ವಿಭಜನೆ  ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರನ್ನು ಸ್ಮರಿಸಿಕೊಳ್ಳುವ ಸಂದರ್ಭ ಇದಾಗಿದೆ ಎಂದು ಅವರು ಹೇಳಿದರು. 

    ದೇಶ ವಿಭಜನೆಯಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯರನ್ನು ಪೂಜ್ಯಭಾವದಿಂದ ಸ್ಮರಿಸುವ ಸಂದರ್ಭವೇ ವಿಭಜನೆಯ ಸಂಸ್ಮರಣಾ ದಿನವಾಗಿದೆ. ಇದರೊಂದಿಗೆ, ಈ ದಿನವು ಸ್ಥಳಾಂತರದ ಭಾರವನ್ನು ಹೊರಲು ಒತ್ತಾಯಿಸಲ್ಪಟ್ಟವರ ನೋವು ಮತ್ತು ಹೋರಾಟವನ್ನು ನಮಗೆ ನೆನಪಿಸುತ್ತದೆ. ಅಂತಹ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಈ ದಿನವು ಬಲವಂತವಾಗಿ ವಲಸೆ ಬಂದವರ ಸಂಕಷ್ಟ ಮತ್ತು ಹೋರಾಟದ ಸ್ಮರಣಾರ್ಥವೂ ಆಗಿದೆ ಎಂದು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

    ದೇಶ ವಿಭಜನೆಯ ದಿನವಾದ ಆಗಸ್ಟ್ 14 ಅನ್ನು, ಇನ್ನು ಮುಂದೆ ‘ವಿಭಜನೆಯ ಕರಾಳ ನೆನಪಿನ ದಿನ’ವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ 2021ರಲ್ಲಿ ಘೋಷಿಸಿದ್ದರು.

    ವಿಭಜನೆಯ ಸಂದರ್ಭವನ್ನು ನೆನಪಿಸಿಕೊಂಡ ಪ್ರಧಾನಿ, ‘ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು. ತಿಳಿಗೇಡಿಗಳಿಂದ ಭುಗಿಲೆದ್ದ ದ್ವೇಷ–ಹಿಂಸಾಚಾರದಲ್ಲಿ ನಮ್ಮ ಲಕ್ಷಾಂತರ ಸೋದರ-ಸೋದರಿಯರು ಸ್ಥಳಾಂತರಗೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡರು’ ಎಂದು ಹೇಳಿದ್ದರು.

    ಅವರ ಹೋರಾಟ ಹಾಗೂ ತ್ಯಾಗದ ಸ್ಮರಣೆಗಾಗಿ ಆಚರಿಸುವ ಈ ದಿನವು, ಸಮಾಜ ವಿಭಜಿಸುವ, ಸಾಮರಸ್ಯವನ್ನು ಕದಡುವಂಥ ವಿಷವನ್ನು ತೆಗೆದುಹಾಕುವ ಅಗತ್ಯವನ್ನು ನೆನಪಿಸುತ್ತದೆ ಹಾಗೂ ನಮ್ಮ ಏಕತೆಯ ಭಾವಕ್ಕೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಬಲೀಕರಣಕ್ಕೆ ಬಲ ತುಂಬಲಿದೆ’ ಎಂದು ಹೇ ಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap