ವಿಲ್ಲಾ ಮಾಲೀಕರಿಗೆ 2 .1ಲಕ್ಷ ಬಿಡಿಎ ಪಾವತಿಸಬೇಕು : ಕೋರ್ಟ್‌ ಆದೇಶ

ಬೆಂಗಳೂರು: 

   ಸೇವೆಯಲ್ಲಿನ ಕೊರತೆ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿಗೆ ಬಿಡಿಎಯನ್ನು ಹೊಣೆ ಮಾಡಿರುವ ಬೆಂಗಳೂರಿನ ಹೆಚ್ಚುವರಿ ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಲ್ಲಾ ಮಾಲಿಕರೊಬ್ಬರಿಗೆ 2 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಸೂಚನೆ ನೀಡಿದೆ. 

   ವಿಲ್ಲಾ ಹಂಚಿಕೆಯಾದ ಬಳಿಕ 2 ಲಕ್ಷ ರೂಪಾಯಿಗಳನ್ನು ಕಾರು ಪಾರ್ಕಿಂಗ್ ಗಾಗಿ ಪಡೆಯಲಾಗಿತ್ತು. ಈ ಹಣವನ್ನು ಹಿಂತಿರುಗಿಸಿ 10,000  ರೂಪಾಯಿಗಳ ದಾವೆ ವೆಚ್ಚಗಳನ್ನೂ ಭರಿಸುವಂತೆ ಆಯೋಗ ಬಿಡಿಎ ಗೆ ಸೂಚನೆ ನೀಡಿದೆ.

   ಆಯೋಗದ ಅಧ್ಯಕ್ಷರಾಗಿರುವ ಶಿವರಾಮ ಕೆ, ಚಂದ್ರಶೇಖರ್ ಎಸ್ ನೂಲಾ ಹಾಗೂ ರೇಖಾ ಸಾಯಣ್ಣವರ್ ಈ ಆದೇಶವಿತ್ತಿದ್ದು, ಅಪೂರ್ವ ಎಂಬುವವರು ದೂರು ದಾಖಲಿಸಿದ್ದರು.  

       ಆದರೆ ಇದರ ಬಗ್ಗೆ ಪೂರ್ಣ ಮಾಹಿತಿಯನ್ನು  ಹಂಚಿಕೆ ಮಾಡುವ ಸಮಯದಲ್ಲಿ ಅಥವಾ ಅದಕ್ಕಿಂತಲೂ ಮುಂಚೆ ನೀಡಿರಲಿಲ್ಲ.  ಯಾವುದೇ ಶುಲ್ಕವನ್ನು ವಿಧಿಸುವ ಅಥವಾ ಹಣದ ಮೊತ್ತವನ್ನು ಗ್ರಾಹಕರು ಪಾವತಿಸುವ ಬಗ್ಗೆ  ಪ್ರಾರಂಭಿಕ ಹಂತದಲ್ಲೇ ಮಾಹಿತಿ ನೀಡುವುದು ಬಿಡಿಎಯ ಜವಾಬ್ದಾರಿಯಾಗಿರುತ್ತದೆ ಎಂದು ಆಯೋಗ ಹೇಳಿದೆ.

 

Recent Articles

spot_img

Related Stories

Share via
Copy link
Powered by Social Snap