ಶಿಕ್ಷಕರು ವೃತ್ತಿಯಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು

ತುಮಕೂರು:
             ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮತ್ತು ಶಿಸ್ತುಗಳ ಜೊತೆಗೆ ಆರೋಗ್ಯಕರ ಸಮಾಜದ ಸೃಷ್ಟಿಗಾಗಿ ಯುವಕ-ಯುವತಿಯರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಲು ಶಿಕ್ಷಕರ ಪಾತ್ರ ಅತ್ಯುತ್ತಮವಾಗಿದೆ ಎಂದು ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಎಂ.ಆರ್. ಹುಲಿನಾಯ್ಕರ್‍ರವರು ನುಡಿದರು.
             ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆ.11 ರಂದು ಮಧ್ಯಾಹ್ನ 2:30 ಕ್ಕೆ ಶ್ರೀದೇವಿ ಆಸ್ಪತ್ರೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
             ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು ಭಾರತದಲ್ಲಿ ಸೆಪ್ಟೆಂಬರ್ 5 ರಂದು ಡಾ.ರಾಧಾಕೃಷ್ಣನ್ ಸ್ಮರಣಾರ್ಥ ಶಿಕ್ಷಕರ ದಿನವಾಗಿ ಆಚರಿಸಲ್ಪಡುತ್ತಿದ್ದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯುನೆಸ್ಕೊ ಮತ್ತು ಐಎಲ್‍ಓಗಳ ಪ್ರಸ್ತಾವನೆಯಂತೆ ಸೆಪ್ಟೆಂಬರ್ 5 ರಂದು ವಿಶ್ವ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆಯೆಂದು ಅವರು ಪಶು, ಪ್ರಾಣಿ, ಪಕ್ಷಿಗಳು ಕೂಡ ತನ್ನ ಶಿಕ್ಷಕ ತರಬೇತುದಾರರ ಬಗ್ಗೆ ಅಪಾರವಾದ ಪ್ರೀತಿ ಮತ್ತು ಬಾಂಧವ್ಯ ಹೊಂದಿರುವಾಗ ಜೀವ ಜಾಲದ ಉನ್ನತ ಸ್ತರದಲ್ಲಿರುವ ಮಾನವ ತನ್ನ ಅರಿವಿನ ಕಣ್ಣು ತೆರೆಸುವ ಶಿಕ್ಷಕರಿಗೆ ಸದಾ ಋಣಿ ಮತ್ತು ಕೃತಜ್ಞತೆಯಿಂದಿರುವುದರ ದ್ಯೋತಕ ಮತ್ತು ಅಗತ್ಯವೇ ಶಿಕ್ಷಕರ ದಿನಾಚರಣೆಯ ಅರ್ಥಪೂರ್ಣ ಸಂದೇಶವೆಂದರು. ಶಿಕ್ಷಕರು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ರಾಷ್ಟ್ರದ ಅಭಿವೃದ್ಧಿ, ಇಲ್ಲವಾದರೆ ಸರ್ವನಾಶವೆಂಬುದು ಸರ್ವವಿಧಿತವೆಂದು ಅವರು ಇದನ್ನರಿತು ಶಿಕ್ಷಕರು ವಿದ್ಯಾರ್ಥಿಗಳು ಪೂರಕವಾಗಿ ಸಮಾಜದ ಉನ್ನತಿಗೆ ಕಾರಣವಾಗಬೇಕೆಂದು ಶುಭ ಹಾರೈಸಿದರು.
             ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಲೊಬ್ಬರಾಗಿದ್ದ ಸಪ್ತಗಿರಿ ಪ.ಪೂ.ಕಾಲೇಜಿನ ಪ್ರಾಮಶುಪಾಲರಾದ ಡಾ.ಹೆಚ್.ಎಸ್.ನಿರಂಜನಾ ರಾಧ್ಯರವರು ಮಾತನಾಡಿ ಶಿಕ್ಷಕ ವೃತ್ತಿ ವಯಕ್ತಿತ್ವಗಳನ್ನು ರೂಪಿಸುವ ಮೂಲಕ ಶ್ರೇಷ್ಠತೆಯನ್ನು ಹೊಂದಿದ್ದು, ನಾವೆಲ್ಲರೂ ನಮ್ಮ ಶಿಕ್ಷಕರಲ್ಲಿ ಗೌರವ ಮತ್ತು ವಿಧೇಯತೆಯ ಮೂಲಕ ಸ್ವತಹ ಉತ್ತಮರಾಗಬಹುದೆಂಬ ನುಡಿದರು.
              ಇದೇ ಸಂದರ್ಭದಲ್ಲಿ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೇಮಾದ್ರಿನಾಯ್ಡುರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಕಿಕೊಟ್ಟ ಹಾದಿಯನ್ನು ಪಾಲಿಸುತ್ತಾ, ಎರಡಕ್ಷರ ಕಲಿಸಿದಾತನು ಗುರು ಎಂಬಂತೆ ನಮ್ಮ ಬ್ಯಾಲ್ಯದ ದಿನಗಳಿಂದ ನಮಗೆ ಸದಾ ಒಳ್ಳೆಯ ಆಚಾರ-ವಿಚಾರ, ನಡೆ-ನುಡಿ ಕಲಿಸುವುದೇ ನಿಜವಾದ ಶಿಕ್ಷಣವಾಗಿದೆ ವಿದ್ಯಾರ್ಥಿಗಳು ರಾಧಾಕೃಷ್ಣನ್ ಮಾದರಿಯನ್ನು ಇಟ್ಟುಕೊಂಡು ವಿದ್ಯಾರ್ಥಿಗಳ ಜೀವನದಲ್ಲಿ ಕನಸ್ಸುಗಳನ್ನು ತುಂಬಬೇಕು. ಹಾಗೂ ಗುರು ಸಾಕ್ಷಾತ್ ಪರಬ್ರಹ್ಮನೆ ಆಗಿ ಮಾನವನ ನಿಜವಾದ ಅರಿವು, ಜ್ಞಾನ, ಮತ್ತು ವಿವೇಕಗಳಿಗೆ ಕಾರಣವಾಗಿ ತ್ರಿಮೂರ್ತಿಗಳ ಸ್ವರೂಪವೇ ಆಗಿರುವುದರಿಂದ ಶಿಕ್ಷಕರು ಸದಾ ಉತ್ತಮ ನಡೆ, ನುಡಿ, ಮತ್ತು ಕ್ರಿಯೆಗಳಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಲ್ಲುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿರಬೇಕೆಂದು ನುಡಿದರು.
              ಸಮಾರಂಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರುಗಳಾದ ಸವೋದಯ ಪಿ.ಯು. ಕಾಲೇಜಿನ ಪ್ರೊ. ಎಸ್.ಆರ್. ಕೃಷ್ಣ, ಕುಣಿಗಲ್ ರಸ್ತೆಯ ಮಹೇಶ್ ಕಾಲೇಜಿನ ಪ್ರೊ.ಕೆ.ಟಿ. ಮಂಜುನಾಥ್, ಅಶೋಕನಗರದ ಮಹೇಶ್ ಕಾಲೇಜಿನ ಸಿ.ಪ್ರದೀಪ್‍ಕುಮಾರ್, ವಿದ್ಯಾವಾಹಿನಿ ಕಾಲೇಜಿನ ಪ್ರೊ. ಪ್ರಾಣೇಶ್‍ರೆಡ್ಡಿ, ವಿಜಯ ಕಾಲೇಜಿನ ಪ್ರೊ. ಧನಂಜಯಕುಮಾರ್, ಆಕ್ಸ್‍ಫರ್ಡ್ ಜೈನ್ ಕಾಲೇಜಿನ ಡಾ.ಮಧುಶ್ರೀ ಮತ್ತು ಶೇಷಾದ್ರಿಪುರಂ ಕಾಲೇಜಿನ ವೀರೇಶ್‍ಬಾಬು ಎಂ. ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
              ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ. ರಮಣ್ ಎಂ. ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್‍ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು ಇದೇ ಸಂದರ್ಭ ದಲ್ಲಿ ಕಾರ್ಯಕ್ರಮದಲ್ಲಿ ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆಚ್.ಬಿ. ಫಣಿರಾಜು, ಡೀನ್ ಡಾ.ಎನ್.ಚಂದ್ರಶೇಖರ್, ಡಾ.ಸಿ.ಪಿ.ಚಂದ್ರಪ್ಪ, ಕಾರ್ಯಕ್ರಮದ ಸಂಯೋಜಕರಾಗಿ ಪ್ರೊ. ಇಜಾಜ್ ಅಹಮದ್ ಷರೀಫ್, ಪ್ರೊ.ಪಿ.ಜೆ.ಸದಾಶಿವಯ್ಯ, ಪ್ರೊ. ಸಿ.ವಿ. ಷಣ್ಮಖಸ್ವಾಮಿ, ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
             ಸಮಾರಂಭದಲ್ಲಿ ಕು. ಶಾಲಿನಿ ಪ್ರಾರ್ಥಿಸಿ, ಉಪಪ್ರಾಂಶುಪಾಲರಾದ ಹೆಚ್.ಬಿ. ಫಣಿರಾಜು ಸ್ವಾಗತಿಸಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಸಿ.ನಾಗರಾಜು ನಿರೂಪಿಸಿ, ಕಾರ್ಯಕ್ರಮ ಸಂಯೋಜಕರಾದ ಪ್ರೊ. ಇಜಾಜ್ ಅಹಮದ್ ಷರೀಫ್, ವಂದಿಸಿದರು.