ಚಿತ್ರದುರ್ಗ;
ವ್ಯಾಜ್ಯಗಳನ್ನು ನ್ಯಾಯಾಲಯದ ವ್ಯಾಪ್ತಿಗೆತಂದುಇತ್ಯರ್ಥ ಮಾಡುವುದರಿಂದಎಲ್ಲರಿಗೂ ಕಾನೂನಿನ ಅರಿವು ಮತ್ತು ನ್ಯಾಯ ಸಿಗುತ್ತದೆ.ಆದರೆ ನ್ಯಾಯಾಲಯದಲ್ಲಿ ಶೀಘ್ರ ನ್ಯಾಯ ಸಿಗುವುದಿಲ್ಲ, ದುಬಾರಿ ಎಂದು ನ್ಯಾಯಾಲಯಕ್ಕೆ ಜನರು ಬರಲು ಹಿಂಜರಿಯುತ್ತಿದ್ದು ಇದನ್ನು ಹೋಗಲಾಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಜಾನ್‍ಮೈಕೆಲ್‍ಕುನ್ಹಾ ತಿಳಿಸಿದರು.
ಹೊಸದುರ್ಗದಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯಾಲಯಗಳ ಕಟ್ಟಡ ಸಂಕೀರ್ಣಉದ್ಘಾಟನೆ ನೆರವೇರಿಸಿ ಮಾತನಾಡಿದರು. ಆಸ್ತಿ ವಿವಾದ ಸೇರಿದಂತೆ ಅನೇಕ ವಿಧವಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವಾಗ ಕಾನೂನಿನ ಅರಿವಿಲ್ಲದೆ ಕಾನೂನು ಕೈಗೆತ್ತಿಕೊಂಡು ಅನೇಕ ಅನಾಹುತಗಳಿಗೆ ಕಾರಣರಾಗುವ ಬದಲಾಗಿ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಿಕೊಳ್ಳುವುದರಿಂದ ಕಾನೂನಾತ್ಮಕವಾಗಿ ಹಾಗೂ ನ್ಯಾಯಯುತವಾಗಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು ನ್ಯಾಯಾಲಯಗಳನ್ನು ಜನಸ್ನೇಹಿಯನ್ನಾಗಿ ಮಾಡುವುದರಿಂದ ನ್ಯಾಯ ಕೇಳಿ ಬರುವವರ ಸಂಖ್ಯೆ ಹೆಚ್ಚಲಿದ್ದುಇದರಅರಿವು ಬರುವಂತೆ ಮಾಡಲು ವಕೀಲರು, ನ್ಯಾಯಾಧೀಶರು ಹಾಗೂ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು ಶೀಘ್ರ, ದುಬಾರಿಯಲ್ಲದ ನ್ಯಾಯವನ್ನುಜನರ ಮನೆ ಬಾಗಿಲಿಗೆ ತಲುಪಿಸುವಂತಾಗಬೇಕೆಂದು ತಿಳಿಸಿ ಇತ್ತೀಚೆಗೆತಂದೆಯಿಂದ ಆಸ್ತಿ ಪಡೆಯಲುಮಗನಿಂದನಡೆದ ಪ್ರಕರಣವೊಂದನ್ನು ಉದಾಹರಿಸಿದರು.
ನ್ಯಾಯಾಲಯಗಳ ಸಂಕೀರ್ಣವನ್ನು ಸುಮಾರು ರೂ.9 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.ಇದರಿಂದಇಲ್ಲಿ ಸುಸಜ್ಜಿತವಾದ, ಮೂಲಭೂತ ಸೌಕರ್ಯಗಳಿಂದ ಕೂಡಿದಕಟ್ಟಡದ ನಿರ್ಮಾಣವಾಗಿದೆ.ಯಾವಉದ್ದೇಶಕ್ಕಾಗಿ ಸಾರ್ವಜನಿಕರ ಹಣದಿಂದ ನಿರ್ಮಾಣ ಮಾಡಲಾಗಿದೆಅದುಈಡೇರಬೇಕಾಗಿದೆ.ಇಲ್ಲಿ ಬರುವಂತಹಎಲ್ಲಾಕಕ್ಷಿದಾರರಿಗೆ ಶೀಘ್ರ ನ್ಯಾಯಒದಗಿಸುವಂತಹ ಕೆಲಸವನ್ನು ಮಾಡಿದಾಗ ಮಾತ್ರಇದರಉದ್ದೇಶ ಸಕಾರವಾಗುತ್ತದೆಎಂದರು.
ಹೆಚ್ಚುವರಿ ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಲಯವುಜಿಲ್ಲಾಕೇಂದ್ರದಲ್ಲಿರುವುದರಿಂದಇಲ್ಲಿಂದ ಹೋಗಲು 65 ಕಿ.ಮೀ ದೂರವಾಗುವುದರಿಂದ ಹೊಸದುರ್ಗಕ್ಕೆ ಹೆಚ್ಚುವರಿ ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಸ್ಥಾಪಿಸಬೇಕೆಂದು ವಕೀಲರ ಸಂಘದಿಂದ ಮನವಿ ಮಾಡಿದ್ದು ಮಾರ್ಗಸೂಚಿಯನ್ವಯ ಪ್ರಕರಣಗಳನ್ನಾಧರಿಸಿ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಆದರೂ ಸಹ ಭೌಗೋಳಿಕ ದೃಷ್ಟಿಕೋನವನ್ನಾಧರಿಸಿ ಆಡಳಿತಾತ್ಮಕ ನ್ಯಾಯಾಧೀಶನಾಗಿಇದನ್ನು ಶೀಫಾರಸು ಮಾಡಲಾಗುತ್ತದೆಎಂದರು.
ಚಿತ್ರದುರ್ಗಜಿಲ್ಲೆಯಜನರಲ್ಲಿ ಸುಸಂಸ್ಕøತತೆಇದ್ದುಇದು ನಾಗರಿಕ ಸಮಾಜದ ಲಕ್ಷಣವಾಗಿದೆ. ಸುಸಂಸ್ಕøತತೆಇರುವ ಸಮಾಜದಲ್ಲಿ ಹಿರಿಯರಿಗೆಗೌರವ, ಧರ್ಮ, ನ್ಯಾಯಾಲಯದ ಶಿಸ್ತು, ತೀರ್ಪಿಗೆ ಮಾನ್ಯತೆ ನೀಡುತ್ತಾರೆ.ಇದನ್ನು ಚಳ್ಳಕೆರೆ, ಹೊಳಲ್ಕೆರೆ ಹಾಗೂ ಹೊಸದುರ್ಗದಲ್ಲಿ ನಡೆದ ಸಮಾರಂಭದಲ್ಲಿ ಗಮನಿಸಿದ್ದೇನೆ. ನಾಗರೀಕರು ಬಹುತೇಕ ಶಾಂತ ಸ್ವಭಾವದವರಾಗಿದ್ದುಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಇಲ್ಲಿಹಬ್ಬದ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದರು.
ಪ್ರಧಾನಜಿಲ್ಲಾಮತ್ತು ಸತ್ರ ನ್ಯಾಯಾಧೀಶರಾದಎಸ್.ಬಿ.ವಸ್ತ್ರಮಠ ಪ್ರಾಸ್ತಾವಿಕವಾಗಿ ಮಾತನಾಡಿ ಹೊಸದುರ್ಗದಲ್ಲಿ ನೂತನವಾಗಿರೂ.9 ಕೋಟಿ ವೆಚ್ಚದಲ್ಲಿ ನ್ಯಾಯಾಲಯಗಳ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ಬಡವರಕಣ್ಣೀರನ್ನುಒರೆಸುವಂತಾಗಬೇಕು.ವಕೀಲರು ನಿರ್ಮಿಸುವ ಪ್ರತಿಕಲ್ಲು ಸಹ ಕಕ್ಷೀದಾರರಿಗೆ ಸೇರಿದೆಎಂದು ತಿಳಿದು ಅವರಿಗೆ ಶೀಘ್ರ ನ್ಯಾಯ ಸಿಗುವ ನಿಟ್ಟಿನಲ್ಲಿಎಲ್ಲರೂ ಸೇರಿ ಕೆಲಸ ಮಾಡಬೇಕಾಗಿದೆಎಂದರು.
ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್‍ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಾದ ಹೆಚ್.ಬಿಲ್ಲಪ್ಪ ಉಪಸ್ಥಿತರಿದ್ದರು. ವಕೀಲರ ಸಂಘದಅಧ್ಯಕ್ಷರಾದಎಸ್.ಎಸ್.ಕಲ್ಮಠ್ ಸ್ವಾಗತಿಸಿದರು.ವಕೀಲರಾದ ಬಿ.ಜೆ.ಭರತ್ ಮನವಿ ಪತ್ರವನ್ನು ನೀಡಿದರು.
ಮಾನ್ಯ ನ್ಯಾಯಮೂರ್ತಿಗಳು ಚಳ್ಳಕೆರೆಯಲ್ಲಿ ರೂ.1.15 ಕೋಟಿ ಹಾಗೂ ಹೊಳಲ್ಕೆರೆಯಲ್ಲಿ ರೂ.2.25 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಿರುವ ವಕೀಲರಭವನಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
