ಸಂಸತ್‌ ಧಾರ್ಮಿಕ ಆಚರಣೆಗಳಿಗೆ ಅತೀತವಾಗಿರಬೇಕು : ಕಪಿಲ್‌ ಸಿಬಲ್

ನವದೆಹಲಿ: 

      ನೂತನ ಸಂಸತ್ ಭವನ ಉದ್ಘಾಟನೆ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್,   ಹೊಸ ಅಥವಾ ಹಳೆಯ ಭಾರತವಲ್ಲ, ತಮಗೆ ಬೇಕಿರುವುದು ಧಾರ್ಮಿಕ ಆಚರಣೆಗಳಿಲ್ಲದ ಸಂಸತ್ ಹೊಂದಿರುವ ಭಾರತ ಎಂದು ಹೇಳಿದ್ದಾರೆ. 

    ಕಾನೂನು ಎಲ್ಲರನ್ನು ಸಮಾನವಾಗಿ ಪರಿಗಣಿಸುತ್ತದೆ ಮತ್ತು ಧಾರ್ಮಿಕ ನಂಬಿಕೆಗಳಿಗಾಗಿ ನಾಗರಿಕರನ್ನು ಕೊಲ್ಲುವುದಿಲ್ಲ ಎಂದು ಸಿಬಲ್ ಹೇಳಿದ್ದಾರೆ. ಹೊಸ ಸಂಸತ್ ಭವನದ ಉದ್ಘಾಟನೆ ದೇಶದ ಅಭಿವೃದ್ಧಿ ಪಯಣದಲ್ಲಿ ‘ಅಮರ’ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನಾ ಕಾರ್ಯಕ್ರಮವನ್ನು ಬಣ್ಣಿಸಿದ್ದರು.
    ಈ ಕಾರ್ಯಕ್ರಮದ ಬಗ್ಗೆ ಟ್ವೀಟ್ ಮಾಡಿರುವ ಸಿಬಲ್, 5.-6 ಅಂಶಗಳನ್ನು ಪ್ರಸ್ತಾಪಿಸಿದ್ದು, ತಮಗೆ ಬೇಕಿರುವ ಭಾರತವನ್ನು ಪಟ್ಟಿ ಮಾಡಿದ್ದಾರೆ. 1. “ತಮಗೆ ಬೇಕಿರುವುದು ಹೊಸ ಅಥವಾ ಹಳೆಯ ಭಾರತವಲ್ಲ,  2. ಧಾರ್ಮಿಕ ಪ್ರಕ್ರಿಯೆಗಳ ಹೊರತಾದ  ಸಂಸತ್ ಇರುವ ಭಾರತ ಬೇಕು 3. ಎಲ್ಲರನ್ನೂ ಸಮಾನವಾಗಿ ನೋಡುವ ಕಾನೂನು ಇರಬೇಕು, 4. ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಹತ್ಯೆ ನಡೆಯದಂತಹ ಭಾರತ ಬೇಕು, 5. ಯಾವುದೇ ಯುವತಿ/ಯುವಕ ಪ್ರೀತಿಸಿ ವಿವಾಹವಾದರೆ ಬಜರಂಗದಳದ ಭಯ ರಹಿತವಾಗಿರುವ ಭಾರತ ಬೇಕು. 6. ಮಾಧ್ಯಮಗಳು ತಟಸ್ಥವಾಗಿರಬೇಕು. ಎಂದು ಸಿಬಲ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link