ಸುಗ್ಗಿ-ಹುಗ್ಗಿ ರೈತಾಪಿ ವರ್ಗದ ಒಂದು ಅರ್ಥಪೂರ್ಣ ಸಾಂಸ್ಕೃ ತಿಕ ಆಚರಣೆಯಾಗಿದೆ : ಜೆ.ಸಿ. ಮಾಧುಸ್ವಾಮಿ

ತುಮಕೂರು

     ಹಿಂದಿನ ಕಾಲದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಹೊಲದಿಂದ ಮನೆಗೆ ತರುವಾಗ ಸುಗ್ಗಿ ಹಬ್ಬವೆಂದು ಸಂಭ್ರಮಿಸುತ್ತಿದ್ದರು. ಆದರೆ ಈಗಿನ ಧಾವಂತ ಜೀವನದಲ್ಲಿ ಯಾಂತ್ರೀಕೃತ ಬದುಕಾಗಿದ್ದು ಸುಗ್ಗಿ ಹಬ್ಬವನ್ನು ಆಚರಿಸುವುದನ್ನು ಬಿಡುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ ಸುಗ್ಗಿ-ಹುಗ್ಗಿ ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಕನ್ನಡ ಸಂಸ್ಕøತಿ ಇಲಾಖೆಯಿಂದ ಅನುಷ್ಠಾನಗೊಳಿಸಿ ಅರ್ಥಪೂರ್ಣ ಆಚರಣೆಗೆ ಚಾಲನೆ ನೀಡಿದಂತಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.

     ಅವರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಜಾನಪದ ಪರಿಷತ್, ಕುಂಚಾಂಕುರ ಕಲಾ ಮತ್ತು ಸಾಂಸ್ಕೃತಿಕ ಸಂಘ, ಸಂಭ್ರಮ ಸಾಂಸ್ಕೃತಿಕ ಸಂವರ್ಧನಾ ಸಂಸ್ಥೆ ಚಿಕ್ಕನಾಯಕನಹಳ್ಳಿ ಇವರ ಸಹಯೋಗದಲ್ಲಿ ಚಿಕ್ಕನಾಯಕನಹಳ್ಳಿಯ ಅಣೆಕಟ್ಟೆ ಸರ್ಕಾರಿ ಶಾಲಾ ಮೈದಾನದಲ್ಲಿ ಜನವರಿ 25ರಂದು ಏರ್ಪಡಿಸಿದ್ದ ಸುಗ್ಗಿ-ಹುಗ್ಗಿ ಸಿರಿಧಾನ್ಯಗಳೊಂದಿಗೆ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಮುಖ್ಯಅತಿಥಿಗಳಾಗಿ ಕುಪ್ಪೂರು ಗ್ರಾಮಪಂಚಾಯಿತಿ ಅಧ್ಯಕ್ಷ ಮುನಿಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರವಿಕುಮಾರ್, ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರು ಶ್ರೀನಿವಾಸಮೂರ್ತಿ ಎಲ್ ಗಂಗಾತನಯಸಿರಿ, ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ: ಸಿ.ಕೆ.ಶೇಖರ್, ಶ್ರೀ ಟಿ. ಎ.ಪಿ.ಪಿ.ಎಂ.ಎಸ್. ಅಧ್ಯಕ್ಷರು ಶ್ರೀಧರ್, ವ್ಯವಸೋತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಶಶಿಧರ್, ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜಾನಪದ ವೈದ್ಯರು ಕೃಷಿಕರು ಆಗಿರುವ ಶಂಕರಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ, ಜಾನಪದ ಕಲಾತಂಡಗಳ ಮೆರವಣಿಗೆಯನ್ನು ತಾಲ್ಲೂಕು ದಂಡಾಧಿಕಾರಿಗಳು ತೇಜಸ್ವಿನಿ ಮತ್ತು ಹಿರಿಯ ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಜು ಉದ್ಘಾಟಿಸಿದರು.. ಮೆರವಣಿಗೆಯಲ್ಲಿ ಪಟ ಕುಣಿತ, ವೀರಗಾಸೆ, ಚಕ್ಕ ಭಜನೆ, ಪೂಜಾ ಕುಣಿತ, ತಮಟೆ, ಕೊಂಬುಕಹಳೆ, ಡೊಳ್ಳು ಕುಣಿತ, ಕಂಸಾಳೆ, ನಂದಿಧ್ವಜ ಕುಣಿತ, ನಾಸಿಕ್‍ಡೋಲು, ಲಂಬಾಣಿ ನೃತ್ಯ ಮತ್ತು ಸೋಮನ ಕುಣಿತ ಕಲಾವಿದರು ಭಾಗವಹಿಸಿ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನ ಮಾಡಿದರು.

   ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಗೀತ ಗಾಯನ, ನೃತ್ಯರೂಪಕ, ನೀಲಗಾರರ ಪದಗಳು, ತೊಗಲುಗೊಂಬೆ ಕಾರ್ಯಕ್ರಮ ಪ್ರದರ್ಶನಗೊಂಡವು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇಶಕ ಬಸವರಾಜಪ್ಪ ಆಪಿನಕಟ್ಟೆ, ತಾಲ್ಲೂಕು ಕನ್ನಡ ಜಾನಪದ ಪರಿಷತ್ ಕಾರ್ಯದರ್ಶಿ ಸಿ.ರವಿಕುಮಾರ್, ಎ.ಜಿ.ಸಿದ್ಧಲಿಂಗಸ್ವಾಮಿ ಮತ್ತು ಎ.ಆರ್.ಪ್ರವೀಣ್, ಇವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link