ನವದೆಹಲಿ:
ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ಪ್ರವೇಶಿಸಲು ಇ-ಪಾಸ್ ಪಡೆಯಲು ಇನ್ನೂ ಸರದಿಯಲ್ಲಿ ನಿಲ್ಲಬೇಕಿಲ್ಲ, ಇದಕ್ಕೆ ಅನುವು ಮಾಡಿಕೊಡಲು ಸುಸ್ವಾಗತಂ’ ಎಂಬ ಪೋರ್ಟಲ್ ಪ್ರಾರಂಭಿಸಲಾಗಿದೆ. ಸಿಜೆಐ ಚಂದ್ರಚೂಡ್ ಈ ಆನ್‌ಲೈನ್ ಸೌಲಭ್ಯದ ಬಗ್ಗೆ ಪ್ರಕಟಿಸಿದ್ದಾರೆ. ಇದರ ಮೂಲಕ ವಕೀಲರು, ಸಂದರ್ಶಕರು, ಮತ್ತಿತರರು ಇತರರು ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಇ-ಪಾಸ್ ಪಡೆಯಬಹುದಾಗಿದೆ.
ಸುಸ್ವಾಗತಂ’ ವೆಬ್ ಆಧಾರಿತ ಮತ್ತು ಮೊಬೈಲ್ ಸ್ನೇಹಿ ಆಪ್ ಆಗಿದ್ದು, ಕೋರ್ಟ್ ವಿಚಾರಣೆಗೆ ಹಾಜರಾಗಲು, ವಕೀಲರನ್ನು ಭೇಟಿ ಮಾಡುವಂತಹ ವಿವಿಧ ಉದ್ದೇಶಗಳಿಗೆ ಬಳಕೆದಾರರು ಆನ್ ಲೈನ್ ನಲ್ಲಿ ನೋಂದಣಿಯಾಗಲು ಮತ್ತು ಇ- ಪಾಸ್ ಪಡೆಯಲು ಬಳಕೆದಾರರಿಗೆ ಅನುಮತಿಸುತ್ತದೆ ಎಂದು ಸಿಜೆಐ ಹೇಳಿದ್ದಾರೆ.
“ಸುಸ್ವಾಗತಂ’ ಪೋರ್ಟಲ್ ನ್ನು ಜುಲೈ 25, 2023 ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಬಳಕೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಗಸ್ಟ್ 9 ರವರೆಗೆ ಪ್ರಾಯೋಗಿಕವಾಗಿ 10 ಸಾವಿರಕ್ಕೂ ಹೆಚ್ಚು ಇ-ಪಾಸ್‌ಗಳನ್ನು ಪೋರ್ಟಲ್ ಮೂಲಕ ವಿತರಿಸಲಾಗಿದೆ. ನೀವು ಬೆಳಿಗ್ಗೆ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ. ಆನ್ ಲೈನ್ ನಲ್ಲಿಯೇ ಎಲ್ಲಾ ಪಾಸ್ ಗಳು ದೊರೆಯುತ್ತವೆ. ಇಂದು ಬೆಳಿಗ್ಗೆಯಿಂದಲೇ ಈ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಸಿಜೆಐ ತಿಳಿಸಿದ್ದಾರೆ.
