ಬೆಂಗಳೂರು:
ಸೋನಿಯಾ ಗಾಂಧಿ ಅವರು ಹುಬ್ಬಳ್ಳಿಯಲ್ಲಿ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ “ಸಾರ್ವಭೌಮತ್ವ” ಎಂಬ ಪದವನ್ನು ಬಳಸಿಲ್ಲ ಎಂದು ಕಾಂಗ್ರೆಸ್ ಬುಧವಾರ ಸ್ಪಷ್ಟಪಡಿಸಿದೆ ಮತ್ತು “ತಪ್ಪಾಗಿ” ಆ ಪದವನ್ನು ಟ್ವೀಟ್ ಮಾಡಿದ್ದ ಪಕ್ಷದ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.
ಸೋನಿಯಾ ಗಾಂಧಿ ಅವರ ಭಾಷಣದಲ್ಲಿ ಕರ್ನಾಟಕದ ಸಾರ್ವಭೌಮತ್ವದ ಟೀಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಸರಿಪಡಿಸುವಂತೆ ಚುನಾವಣಾ ಆಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಮವಾರ ಸೂಚಿಸದ ನಂತರ ಕಾಂಗ್ರೆಸ್ ಈ ಸ್ಪಷ್ಟೀಕರಣವನ್ನು ನೀಡಿದೆ.
ಮೇ 6, 2023 ರಂದು ಕರ್ನಾಟಕದ ಹುಬ್ಬಳ್ಳಿಯಲ್ಲಿ ಸೋನಿಯಾ ಗಾಂಧಿ ಅವರು ಮಾಡಿದ ಭಾಷಣದಲ್ಲಿ ಸಾರ್ವಭೌಮತ್ವ ಎಂಬ ಪದವನ್ನು ಎಂದಿಗೂ ಬಳಸಿಲ್ಲ. ಇದನ್ನು ತಪ್ಪಾಗಿ ವರದಿ ಮಾಡಲಾಗಿರುವುದರಿಂದ ಅದನ್ನು ಡಿಲೀಟ್ ಮಾಡಲಾಗುತ್ತಿದೆ” ಎಂದು ಕಾಂಗ್ರೆಸ್ ಬುಧವಾರ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.
