ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಗುಪ್ತಚರ ಇಲಾಖೆ ಎಚ್ಚರಿಕೆ

ಲಷ್ಕರ್, ಜೈಶ್ ಉಗ್ರಸಂಘಟನೆಗಳ ಭೀತಿ : ಎಲ್ಲೆಡೆ ಕಟ್ಟೆಚ್ಚರ

ಹೊಸದಿಲ್ಲಿ/ಬೆಂಗಳೂರು : ಭಾರತಕ್ಕೆ ಸ್ವಾತಂತ್ಯ ಬಂದು 75 ವರ್ಷತುಂಬಿದೆ, ಈ ವಿಶೇಷ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದಡಿ ಅದ್ದೂರಿ ಆಚರಣೆಗೆ ಕರೆ ಕೊಟ್ಟಿದ್ದು. ಪ್ರತಿ ಪ್ರಜೆಗೂ ವಿಶೇಷವಾಗಿದೆ, ಆದರೆ 75ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಲಷ್ಕರ್-ಎ- ತಯಬಾ, ಜೈಶ್ ಎ ಮೊಹಮ್ಮದ್ ಮತ್ತು ಇತರೆ ಉಗ್ರ ಸಂಘಟನೆಗಳಿಂದ ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ (ಐಬಿ) ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ದೆಹಲಿಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಕೆಂಪುಕೋಟೆಗೆ ಪ್ರವೇಶಿಸಲು ಕಠಿಣ ನಿಯಮಗಳನ್ನು ಜಾರಿಗೊಳಿಸುವಂತೆ ದಿಲ್ಲಿ ಪೆÇಲೀಸರಿಗೆ ಸೂಚನೆ ನೀಡಿದೆ.
ಲಷ್ಷರ್, ಜೆಇಎಂ ಮತ್ತು ಇತರೆ ಕೆಲವು ಭಯೋತ್ಪಾದನಾ ಸಂಘಟನೆಗಳಿಂದ ದಾಳಿಯ ಅಪಾಯವಿರುವ ಬಗ್ಗೆ ಐಬಿ ಹತ್ತು ಪುಟಗಳ ವರದಿ ನೀಡಿದೆ.

ದಿಲ್ಲಿ ಪೊಲೀಸರಿಗೆ ಐಬಿ ಎಚ್ಚರಿಕೆ :

ದಿಲ್ಲಿ ಪೊಲೀಸರು ಬಹಳ ಎಚ್ಚರಿಕೆಯಿಂದ ಇರುವಂತೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಆಗಸ್ಟ್ 15ರಂದು ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಪ್ರವೇಶ ನಿಯಮಗಳನ್ನು ಕಠಿಣಗೊಳಿಸುವಂತೆ ದಿಲ್ಲಿ ಪೆÇಲೀಸರಿಗೆ ಸೂಚಿಸಿದೆ. ಉದಯಪುರ ಮತ್ತು ಅಮರಾವತಿಗಳಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿರುವ ಬೇಹುಗಾರಿಕಾ ಸಂಸ್ಥೆಗಳು, ಉಗ್ರ ಗುಂಪುಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ ಅವುಗಳ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಡುವಂತೆ ನಿರ್ದೇಶನ ನೀಡಿದೆ.

ವರದಿಯಲ್ಲಿ ಏನಿದೆ :

ಗುಪ್ತಚರ ಇಲಾಖೆ ನೀಡಿರುವ ವರದಿಯಲ್ಲಿ ಜೈಶ್ ಮತ್ತು ಲಷ್ಕರ್ ಉಗ್ರರಿಗೆ ಸಾಮಗ್ರಿಗಳ ಪೂರೈಕೆ ನೆರವು ನೀಡುವ ಮೂಲಕ ಪಾಕಿಸ್ತಾನದ ಐಎಸ್‍ಐ, ಭಯೋತ್ಪಾದನಾ ದಾಳಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ದೊಡ್ಡ ನಾಯಕರು ಮತ್ತು ಪ್ರಮುಖ ಸ್ಥಳಗಳನ್ನು ಗುರಿ ಮಾಡುವಂತೆ ಜೆಇಎಂ ಹಾಗೂ ಎಲ್‍ಇಟಿ ಸಂಘಟನೆಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿ ಹೇಳಿದೆ.

ಗಡಿಯಲ್ಲಿ ಎಚ್ಚರಿಕೆ :
ಐಎಸ್‍ಐ ಸೃಷ್ಟಿಸಿರುವ ಲಷ್ಕರ್-ಎ- ಖಲ್ಸಾ ಸಂಘಟನೆಯಲ್ಲಿ ಅಫ್ಘಾನಿಸ್ತಾನದ ಉಗ್ರರನ್ನು ಕೂಡ ಸೇರಿಸಲಾಗಿದೆ. ಈ ಉಗ್ರ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಮಟ್ಟದ ಭಯೋತ್ಪಾದನಾ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ಕೊಡಲಾಗಿದೆ. ಉಗ್ರ ಸಂಘಟನೆಗಳಾದ ಎಲ್‍ಇಟಿ ಮತ್ತು ಜೆಇಎಂ, ಯುಎವಿ (ಮಾನವರಹಿತ ವಾಯು ವಾಹನ) ಹಾಗೂ ಪ್ಯಾರಾಗ್ಲೈಡರ್‍ಗಳನ್ನು ದಾಳಿಗೆ ಬಳಸುವ ಸಾಧ್ಯತೆ ಇದೆ. ಹೀಗಾಗಿ ಗಡಿಯಲ್ಲಿ ಮತ್ತಷ್ಟು ಜಾಗ್ರತೆಯಿಂದ ಇರುವಂತೆ ಬಿಎಸ್‍ಎಫ್‍ಗೆ ಎಚ್ಚರಿಕೆ ನೀಡಲಾಗಿದೆ.

ದಿಲ್ಲಿಯಲ್ಲಿ ರೊಹಿಂಗ್ಯಾ, ಅಫ್ಘಾನಿಸ್ತಾನ ಮತ್ತು ಸೂಡಾನ್ ಪ್ರಜೆಗಳು ನೆಲೆಸಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ವಹಿಸುವಂತೆ ಸಹ ನಿರ್ದೇಶನ ನೀಡಲಾಗಿದೆ. ಇದರ ಜತೆಗೆ ಟಿಫಿನ್ ಬಾಂಬ್, ಸ್ಟಿಕ್ಕಿ ಬಾಂಬ್ ಮತ್ತು ವಿವಿಐಇಡಿಗಳ ದಾಳಿ ಬೆದರಿಕೆ ಕುರಿತೂ ಜಾಗರೂಕರಾಗಿರುವಂತೆ ಐಬಿ ಹೇಳಿದೆ. ಭಾರತವು ಈ ವರ್ಷ 75ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅದ್ದೂರಿ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

Recent Articles

spot_img

Related Stories

Share via
Copy link
Powered by Social Snap