ಹಂಪಿಯಲ್ಲಿ ಘರ್ಜಿಸಿದ ಜೆಸಿಬಿ : 17 ರೆಸಾರ್ಟ್‌ ಧ್ವಂಸ

ವಿಜಯನಗರ

      ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಕಳೆದ ಒಂದು ವಾರದಿಂದ ಜೆಸಿಬಿ ಘರ್ಜಿಸುತ್ತಿದ್ದು, 17 ರೆಸಾರ್ಟ್ ಮತ್ತು ರೆಸ್ಟೋರೆಂಟ್‌ಗಳನ್ನು ಧ್ವಂಸಗೊಳಿಸಲಾಗಿದೆ. ಹಂಪಿಯ ಪಾರಂಪರಿಕೆ ಪ್ರದೇಶದದಲ್ಲಿ ಇವು ತಲೆ ಎತ್ತಿದ್ದ ಕಾರಣ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ರೆಸಾರ್ಟ್, ರೆಸ್ಟೋರೆಂಟ್‌ಗಳನ್ನು ತೆರವುಗೊಳಿಸುವುಂತೆ ಕಳೆದ ಮೂರು ತಿಂಗಳ ಹಿಂದೆ ನೋಟಿಸ್ ಕೊಟ್ಟಿದ್ದರು, ನಿರ್ಲಕ್ಷಿಸಿಲಾಗಿತ್ತು.

    ನೋಟಿಸ್ ಕೊಟ್ಟ ಮೇಲೂ ಕಾರ್ಯನಿರ್ವಹಿಸುತ್ತಿದ್ದ ಕಾರಣ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಯುನೆಸ್ಕೋ-ಸಂರಕ್ಷಿತ ವಲಯ ಮತ್ತು ಬಫರ್ ಜೋನ್‌ಗಳಲ್ಲಿ ಅನಧಿಕೃತವಾಗಿ ಓಡಾಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಸಣಾಪುರ, ಆನೆಗುಂದಿ ಹಾಗೂ ವಿಜಯನಗರ ಜಿಲ್ಲೆಯ ಕಮಲಾಪುರ, ಕಡ್ಡಿರಾಂಪುರ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

    ಹೋಮ್‌ಸ್ಟೇಗಳು, ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳಲ್ಲದೆ, ಅನೇಕ ಮನೆಗಳ ಮುಂದೆ ನಿರ್ಮಿಸಲಾದ ಹಲವಾರು ಆತಿಥ್ಯ ಕಟ್ಟಡಗಳನ್ನು ಸಹ ನೆಲಸಮ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ಸರ್ಕಾರ ಈಗಾಗಲೇ ಪರ್ಯಾಯ ಭೂಮಿಯನ್ನು ನೀಡಿದ್ದು ಮತ್ತು ಪ್ರವಾಸೋದ್ಯಮ ವಲಯವನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ.

   2 ವರ್ಷಗಳ ಅವಧಿಯಲ್ಲಿ 40 ಕಟ್ಟಡಗಳ ನೆಲಸಮ ಕಳೆದ 2 ವರ್ಷಗಳಿಂದ ಕೂಡ ತೆರವು ಕಾರ್ಯಾಚರಣೆ ನಡೆಯುತ್ತಿದೆ. ರೆಸಾರ್ಟ್ ಮಾಲೀಕರು ಅಧಿಕಾರಿಗಳ ಮಾತಿಗೆ ಬೆಲೆ ನೀಡಿ ತೆರವು ಮಾಡುವ ಬದಲಾಗಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈ ಭಾಗದಲ್ಲಿ ಸುಮಾರು 40 ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಇತ್ತೀಚೆಗೆ ಇಲ್ಲಿನ ಗ್ರಾಮಸ್ಥರು ಮತ್ತು ರೆಸಾರ್ಟ್‌ಗಳ ಮಾಲೀಕರು ತೆರವು ಕಾರ್ಯಾಚರಣೆ ವಿರುದ್ಧ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

   “ಇಲ್ಲಿನ ಹೆಚ್ಚಿನ ಹೋಮ್‌ ಸ್ಟೇಗಳು ಮತ್ತು ಕಟ್ಟಡಗಳು ತಾತ್ಕಾಲಿಕವಾದವು. ಇವು ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತವೆ. ಮೊದಲಿನಂತೆ ಸ್ಥಳೀಯರಿಗೆ ವ್ಯಾಪಾರ ನಡೆಸಲು ಅಧಿಕಾರಿಗಳು ಪರ್ಯಾಯ ಜಾಗದ ವ್ಯವಸ್ಥೆ ಮಾಡಿಕೊಡಬೇಕು” ಎಂದು ರೆಸಾರ್ಟ್ ಮಾಲೀಕರು ಒತ್ತಾಯಿಸಿದ್ದಾರೆ.

    ಕಾರಣವೇನು ಗೊತ್ತಾ? ಈಗ ತೆರವು ಮಾಡಿರುವ ಎಲ್ಲಾ ರೆಸಾರ್ಟ್, ರೆಸ್ಟೋರೆಂಟ್‌ಗಳಿಗೆ ಮೂರು ತಿಂಗಳ ಹಿಂದೆಯೇ ನೋಟಿಸ್ ಕೊಟ್ಟಿದ್ದೆವು, ಆದರೂ ಅವರು ತೆರವು ಮಾಡದ ಕಾರಣ ನಾವೇ ತೆರವು ಕಾರ್ಯಾಚರಣೆ ನಡೆಸಬೇಕಾಯಿತು. ನಿಯಮಗಳ ಪ್ರಕಾರವೇ ಕೆಲಸ ಮಾಡುತ್ತಿರುವುದಾಗಿ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

    “ಪೊಲೀಸರ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗಿದೆ. ಕೆಡವಲಾದ ಎಲ್ಲಾ ಕಟ್ಟಡಗಳು ಹಂಪಿ ಪಾರಂಪರಿಕ ವಲಯದ ಭಾಗವಾಗಿತ್ತು. ಕಾನೂನಿನ ಪ್ರಕಾರ, ಈ ಪ್ರದೇಶಗಳಲ್ಲಿ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ನೀಡುವುದಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap