ಬೆಂಗಳೂರು:
ಶಿವರಾಜ್‌ಕುಮಾರ್ ಅವರು ಇಂದು 61ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಅಭಿಮಾನಿಗಳು ಕಳೆದ ರಾತ್ರಿಯಿಂದಲೇ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು ಕೇಕ್ ಕತ್ತರಿಸಿ ನೆಚ್ಚಿನ ನಟ ಶಿವಣ್ಣನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.
ಜುಲೈ 11ರ ಮಧ್ಯರಾತ್ರಿಯೇ ಶುಭಕೋರಲು ಅಭಿಮಾನಿಗಳು ಶಿವರಾಜ್‌ಕುಮಾರ್ ಅವರ ಮನೆ ಮುಂದೆ ನೆರೆದಿರುವುದು ಕಂಡು ಬಂದಿದೆ. ಪಾಟಕಿ ಸಿಡಿಸಿ, ಸಿಹಿ ತಿನಿಸುಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಭ್ರಮ ಮುಗುಲುಮುಟ್ಟಿದೆ.
ಶಿವರಾಜ್‌ಕುಮಾರ್ ಅಭಿನಯದ ಪೋಸ್ಟರ್‌ಗಳನ್ನು ಹಿಡಿದು ಸಂಭ್ರಮಿಸಿದ್ದಾರೆ. ಜೊತೆಗೆ ಇಂದು ಅವರ ನಟನೆಯ ಸಿನಿಮಾ ತಂಡದಿಂದ ಪೋಸ್ಟರ್ ಟೀಸರ್ ರಿಲೀಸ್ ಮಾಡಲು ಸಿದ್ದತೆಗಳು ನಡೆದಿವೆ. ಇಂದು ಬೆಳಿಗ್ಗೆ 11.45ಕ್ಕೆ ‘ಘೋಷ್ಟ್’ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವಿಡಿಯೋ ರಿಲೀಸ್ ಆಗಲಿದೆ. ಈ ವಿಡಿಯೋ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಮಾತ್ರವಲ್ಲದೆ ಶಿವಣ್ಣ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಸಿಗುವ ಸಾಧ್ಯತೆ ಕೂಡ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
