ಅಂಚೆ ಕಛೇರಿ ಹಾಗೂ ಉಪಖಜಾನೆ ಇಲಾಖೆಯವರ ನಿರ್ಲಕ್ಷ

ಚಿಕ್ಕನಾಯಕನಹಳ್ಳಿ :

                  ಅಂಚೆ ಕಛೇರಿ ಹಾಗೂ ಉಪಖಜಾನೆ ಇಲಾಖೆಯವರ ನಿರ್ಲಕ್ಷತನದಿಂದ ತಾಲ್ಲೂಕಿನ ಹಲವಾರು ವೃದ್ದಾಪ್ಯ, ಎಸ್.ಎಸ್.ವೈ ಹಾಗೂ ಅಂಗವಿಕಲರ ವೇತನವು ತಡವಾಗಿ ಫಲಾನುಭವಿಗಳಿಗೆ ತಲುಪತ್ತಿವೆ, ಈ ಬಗ್ಗೆ ಫಲಾನುಭವಿಗಳು ಅಧಿಕಾರಿಗಳನ್ನು ಕೇಳಿದರೆ ಎರಡೂ ಇಲಾಖೆಯವರು ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳುತ್ತಿದ್ದಾರೆ ಹೊರತು ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ ಎಂದು ಡಿಎಸ್‍ಎಸ್ ಮುಖಂಡ ಲಿಂಗದೇವರು ಹೇಳಿದರು.

                 ಪಟ್ಟಣದ ಅಂಚೆ ಕಛೇರಿ ಅಂಚೆ ಬಳಿ ಹಲವು ವೃದ್ದರು ವೃದ್ದಾಪ್ಯ ವೇತನಕ್ಕಾಗಿ ಜಮಾಯಿಸಿದ್ದ ವೇಳೆ ಫಲಾನುಭವಿಗಳನ್ನು ಪೋಸ್ಟ್‍ಮಾಸ್ಟರ್ ಬಳಿ ಕರೆದೊಯ್ದು ಮಾಶಾಸನ ದೊರಕದ ಬಗ್ಗೆ ವಿವರಿಸಿದರು.

                 ಇಲ್ಲಿ ಸುಮಾರು ಆರು ತಿಂಗಳಿನಿಂದ ಅಂಚೆ ಕಛೇರಿಯಲ್ಲಿ ವೃದ್ದರಿಗೆ ಮಾಶಾಸನದ ಹಣ ದೊರಕುತ್ತಿಲ್ಲ, ಸುಮಾರು 80ವರ್ಷದ ವಯಸ್ಸಾದವರೂ ಪ್ರತಿನಿತ್ಯ ಮಾಶಾಸನ ಹಣಕ್ಕಾಗಿ ಅಂಚೆ ಕಛೇರಿಗೆ ಬರುತ್ತಾರೆ, ಹಣ ಬರದೇ ವಾಪಾಸ್ ಹೋಗುತ್ತಾರೆ, ವೃದ್ದಾಪ್ಯರಾದ ಇವರು ತಮ್ಮ ಜೀವನ ನಿರ್ವಹಿಸಲು ಸರ್ಕಾರದಿಂದ ಬರುವ ಮಾಶಾಸನವನ್ನೇ ನೆಚ್ಚಿಕೊಂಡಿದ್ದಾರೆ, ಕಳೆದ ಆರೇಳು ತಿಂಗಳಿನಿಂದಲೂ ತಾಲ್ಲೂಕಿನ ಹಲವರಿಗೆ ಮಾಶಾಸನ ದೊರಕಿಲ್ಲ, ಸಮಸ್ಯೆ ಬಗ್ಗೆ ಫಲಾನುಭವಿಗಳು ಅಂಚೆ ಇಲಾಖೆಯಲ್ಲಿ ಕೇಳಿದರೆ ಉಪಖಜಾನೆಯಲ್ಲಿ ಕೇಳಬೇಕು ಎನ್ನುತ್ತಾರೆ, ಉಪಖಜಾನೆಯಲ್ಲಿ ಅಂಚೆ ಇಲಾಖೆಯಲ್ಲಿ ಹೇಳುತ್ತಾರೆ ಈ ಎರಡೂ ಇಲಾಖೆಯವರ ಹೇಳಿಕೆಗಳಿಂದ ವೃದ್ದರಿಗೆ, ಅಂಗವಿಕಲರಿಗೆ ಅನ್ಯಾಯವಾಗುತ್ತಿದೆ, ಕೂಡಲೇ ತಹಶೀಲ್ದಾರ್‍ರವರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎರಡೂ ಇಲಾಖೆಯವರನ್ನು ಸಂಪರ್ಕ ಪಡೆದುಕೊಂಡು ಎಲ್ಲಿ ಸಮಸ್ಯೆಯಾಗಿದೆ ಎಂದು ತಿಳಿದುಕೊಂಡು ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಮಾಶಾಸನಕ್ಕಾಗಿಯೇ ತಹಶೀಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಡಿಎಸ್‍ಎಸ್ ಮುಖಂಡರಾದ ಕೃಷ್ಣಮೂರ್ತಿ ಹಾಗೂ ನಾಗರೀಕರು ಉಪಸ್ಥಿತರಿದ್ದರು.

ಕೋಟ್-1

                ಫಲಾನುಭವಿಗಳು ಇಲಾಖೆಯಲ್ಲಿ ತಮ್ಮ ವಿಳಾಸ ನಮೂದಿಸುವಾಗ ಪಿನ್‍ಕೋಡ್ ಸಂಖ್ಯೆಯನ್ನು ತಮ್ಮ ವ್ಯಾಪ್ತಿಗೆ ಬರುವ ಸಂಖ್ಯೆಯನ್ನೇ ನೀಡಬೇಕು, ಬೇರೆ ಪಿನ್‍ಕೋಡ್ ಸಂಖ್ಯೆ ನಮೂದಿಸಿರುವುದರಿಂದ ಈ ಸಮಸ್ಯೆ ಉದ್ಬವಿಸಿದೆ, ಹಣ ಬರದೇ ಇರುವ ಫಲಾನುಭವಿಗಳು ತಹಶೀಲ್ದಾರ್ ಕಛೇರಿಯಲ್ಲಿ ಉಪಖಜಾನೆ ಇಲಾಖೆಗೆ ತೆರಳಿ ಅಲ್ಲಿ ತಮ್ಮ ವ್ಯಾಪ್ತಿಗೆ ಬರುವ ಪಿನ್‍ಕೋಡ್‍ನ್ನು ತಿಳಿಸಬೇಕು, ನಂತರ ಸಮಸ್ಯೆ ಪರಿಹಾರವಾಗುತ್ತದೆ.

Recent Articles

spot_img

Related Stories

Share via
Copy link